ದೊಡ್ಡಬಳ್ಳಾಪುರ: 70ನೇ ಸ್ವಾತಂತ್ರ್ಯೋತ್ಸವಕ್ಕೆ ನಗರದ ಕೊಂಗಾಡಿಯಪ್ಪ ಕಾಲೇಜು ಸಮೀಪದ ಕರೇನಹಳ್ಳಿ ಗೆಳೆಯರು 200 ಮೀಟರ್ ಉದ್ದ, 9ಅಡಿ ಅಗಲದ ರಾಷ್ಟ್ರ ಧ್ವಜವನ್ನು ಸಿದ್ದಪಡಿಸಿದ್ದು ಆ.15ರಂದು ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರೊಂದಿಗೆ ಮೆರವಣಿಗೆ ನಡೆಸಿ, ಭಗತ್ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮೆರವಣಿಗೆ ಮುಕ್ತಾಯವಾಗಲಿದೆ.

ತ್ರೀವರ್ಣ ಧ್ವಜ ಸಿದ್ದಪಡಿಸಲು ಕರೇನಹಳ್ಳಿಯ ಗೆಳೆಯರಾದ ಕಲ್ಲುಬಾವಿ ಚಂದ್ರಶೇಖರ್, ಶ್ರೀನಿವಾಸ್, ಹಳೇಪೇಟೆ ಶ್ರೀಕಾಂತ್ ಮತ್ತಿತರರು ಸತತ ಎರಡು ವರ್ಷಗಳಿಂದಲೂ ಸಿದ್ದತೆ ನಡೆಸಿ ಈ ಬಾರಿ ಮೆರವಣಿಗೆಗೆ ಸಿದ್ದಗೊಳಿಸಿದ್ದಾರೆ.

ಇಷ್ಟೊಂದು ಉದ್ದದ ರಾಷ್ಟ್ರ ಧ್ವಜಕ್ಕೆ ಬಟ್ಟೆಯನ್ನು ಗದಗ ನಿಂದ ಖಾದಿ ಬಟ್ಟೆಯನ್ನೇ ತರಿಸಿಕೊಂಡು ಧ್ವಜವನ್ನು ಇಲ್ಲಿ ಸಿದ್ದಗೊಳಿಸಿದ್ದಾರೆ. ಧ್ವಜಕ್ಕಾಗಿ ಯಾರಿಂದಲೂ ಸಹ ಹಣ ಸಂಗ್ರಹಿಸದೆ ಒಂದಿಷ್ಟು ಜನ ಸ್ನೇಹಿತರೆ ಸೇರಿ ₹ 30,000 ಖರ್ಚು ಮಾಡಿ ಧ್ವಜವನ್ನು ಸಿದ್ದಮಾಡಿದ್ದಾರೆ.

ಜನರಲ್ಲಿ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಪ್ರೇಮ ಜಾಗೃತಿಗೊಳಿಸಲು ಈ ಧ್ವಜ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಆ.15 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಕೊಂಗಾಡಿಯಪ್ಪ ಕಾಲೇಜು ಸಮೀಪದಿಂದ ಪ್ರಾರಂಭವಾಗುವ ಮೆರವಣಿಗೆಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.