ಶುಕ್ರವಾರ, ಮೇ 7, 2021
23 °C

2015ಕ್ಕೆ ಸಾಕ್ಷರತಾ ಪ್ರಮಾಣ ಶೇ 80

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ  (ಪಿಟಿಐ):ಬರುವ 2015ರ ವೇಳೆಗೆ ದೇಶದ ಸಾಕ್ಷರತಾ ಪ್ರಮಾಣ ಶೇ 80ಕ್ಕೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ.`ಈಗ ಸರಾಸರಿ ಸಾಕ್ಷರತಾ ಪ್ರಮಾಣ ಶೇ 74 ಇದ್ದು, `ಸಾಕ್ಷರ ಭಾರತ~ದಂಥ ಕಾರ್ಯಕ್ರಮದ ಮೂಲಕ 2015ಕ್ಕೆ ಇದು ಶೇ 80-85ರಷ್ಟಾಗಲಿದೆ.ಇದು ದೊಡ್ಡ ಸಾಧನೆಯಾಗಲಿದೆ~ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಮಹಿಳಾ ಸಾಕ್ಷರತೆ ಕುರಿತ ಅಂತರ ರಾಷ್ಟ್ರೀಯ ಸಮ್ಮೇಳನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಾಕ್ಷರ ಭಾರತ~ದ ಮೂಲಕ ಮಹಿಳೆಯರು ಸೇರಿ 40 ಲಕ್ಷ ಜನ ಸಾಕ್ಷರರಾಗಿದ್ದಾರೆ.ಮುಂಬರುವ ದಿನಗಳಲ್ಲಿ 70 ದಶಲಕ್ಷ ಯುವಕರು ಮತ್ತು 7 ದಶಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.ವಯಸ್ಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರ ಈ ಕಾರ್ಯಕ್ರಮವನ್ನು 2009ರ ಸೆ. 8ರಂದು ಆರಂಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.