ಭಾನುವಾರ, ಮೇ 22, 2022
21 °C

22ರಂದು ಸರ್ಕಾರಿ ನೌಕರರ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಚುನಾವಣೆ ಅಂಗವಾಗಿ ಜುಲೈ 22ರಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ನಗರದ ಸೀತಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಮತ್ತು ಏಣಿಕೆ ಕಾರ್ಯ ನಡೆಯಲಿದೆ. ಮತದಾನ ಮುಗಿದ ನಂತರ ಸಂಜೆ 4.30ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ  ಎಂದು ಪ್ರಕಟಣೆ ತಿಳಿಸಿದೆ.2ಗಂಟೆ ಕಾಲಾವಕಾಶ ಅನುಮತಿಗೆ ಆದೇಶ ಸರ್ಕಾರಿ ಚುನಾವಣಾ ಪ್ರಕ್ರಿಯೆ ಅಂಗವಾಗಿ ಮತಚಲಾವಣೆಗಾಗಿ ಅಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಿಗೆ ಮತದಾನ ವೇಳೆಯಲ್ಲಿ 2 ಗಂಟೆ ಕಾಲಾವಕಾಶ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.ಮತದಾನ ಮಾಡಲು ಬಯಸುವ ನೌಕರರು ಮತದಾನದಂದು ತಮ್ಮ ಮೇಲಧಿಕಾರಿಗಳಿಗೆ ನಾವು ಸಂಘದ ಸದಸ್ಯರಾಗಿರುವುದಾಗಿ ಮತ್ತು ನಿರ್ದಿಷ್ಟ ಸಮಯದಲ್ಲಿ ಮತದಾನ ಮಾಡಿ ವಾಪಸ್ ಬರುವುದಾಗಿ ಸೂಚನೆ ಕೊಟ್ಟು ಅನುಮತಿ ಪಡೆಯಬೇಕು. ಈ ಅವಧಿ ಕೇವಲ 2 ಗಂಟೆ ಮಾತ್ರ ಸೀಮಿತವಾಗಿರುತ್ತದೆ.ಈ ಅನುಮತಿ ವಿಧಾನಮಂಡಲದ ಕಾರ್ಯ ಕಲಾಪಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ನೌಕರರಿಗೆ ಷರತ್ತಿಗೊಳಪಡಿಸಿ ಅನುಮತಿ ನೀಡುವಂತೆ ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.