ಸೋಮವಾರ, ಮೇ 17, 2021
22 °C

22 ದೌರ್ಜನ್ಯ ಪ್ರಕರಣ; ರೂ 11.69 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ಜಿಲ್ಲೆಯಲ್ಲಿ 2013ರ ಜನವರಿಯಿಂದ ಮೇ ಅಂತ್ಯದವರೆಗೆ ದೌರ್ಜನ್ಯ ನಿಯಂತ್ರಣ ಕಾಯ್ದೆ 1989ರ ಅಡಿ 22 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ್ಙ 11.69 ಲಕ್ಷ ಮೊತ್ತದಷ್ಟು ಪರಿಹಾರ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ವಿ.ಪಿ.ಇಕ್ಕೇರಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, 22 ಪ್ರಕರಣಗಳಲ್ಲಿ 16 ಪರಿಶಿಷ್ಟ ಜಾತಿ ಹಾಗೂ 6 ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿವೆ. ಅದರಲ್ಲಿ ಎರಡು ಅತ್ಯಾಚಾರ ಪ್ರಕರಣಗಳು, 20 ಜಾತಿ ನಿಂದನೆ ಪ್ರಕರಣಗಳಿವೆ.2013ರ ಜನವರಿ ತಿಂಗಳಿಗಿಂತ ಮುಂಚೆ 78 ಪ್ರಕಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದವು. ಜನವರಿಯಿಂದ ಮೇ ಅಂತ್ಯದವರೆಗೆ 12 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. 72 ಪ್ರಕರಣಗಳು ಬಾಕಿ ಇವೆ ಎಂದು ಅಂಕಿ ಅಂಶ ನೀಡಿದರು.`ದೌರ್ಜನ್ಯ ಪ್ರಕರಣಗಳು ನಡೆಯದಂತೆ ತಡೆಯಲು ಸಮಿತಿ ವತಿಯಿಂದ ಇಂಥ ಪ್ರಕರಣಗಳು ನಡೆಯುವ ಗ್ರಾಮಗಳ ಜನರಿಗೆ ಕಾಯ್ದೆಯ ಕುರಿತು ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು, ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ತಿಳಿಸಿದರು.ದೌರ್ಜನ್ಯ ಪ್ರಕರಣಗಳು ನಡೆದಾಗ ಪ್ರಕರಣ ದಾಖಲಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇರುತ್ತದೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ಹಾಗೂ ಗಂಭೀರ ಸ್ವರೂಪದ ಪ್ರಕರಣಗಳನ್ನು ವಿಶ್ಲೇಷಿಸಿ, ಪ್ರಕರಣ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕಲಂಗಳ ಬಳಕೆ ಮಾಡಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದರು.ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನ ದುರ್ಗದಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ವಸತಿ ಯೋಜನೆಯಡಿ ಮನೆ ಕೇಳಲು ಹೋದವರ ಮೇಲೆ ಅಲ್ಲಿನ ಪಂಚಾಯ್ತಿ ಸದಸ್ಯರು ದೌರ್ಜನ್ಯ ಎಸಗಿದ್ದಾರೆ. ಇಂಥ ಸೂಕ್ಷ್ಮ ಸ್ಥಳಗಳಲ್ಲಿ ಸಾಮರಸ್ಯವನ್ನು ಉಂಟು ಮಾಡುವ ಕೆಲಸ ಸಮಿತಿಯಿಂದಾಗ ಬೇಕಾಗಿದೆ ಎಂದು ಸದಸ್ಯೆ ಬಾಲಮ್ಮ ತಿಳಿಸಿದರು.ಸ್ಥಳ ಮಂಜೂರು ಮಾಡಿ: ಚಿತ್ರದುರ್ಗದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕಾತ್ರಾಳ್ ಕೆರೆಯ ಹತ್ತಿರ 10 ಎಕರೆ ಜಾಗ ಹಾಗೂ ಎಲ್ಲ ತಾಲ್ಲೂಕುಗಳಲ್ಲೂ ಸುಮಾರು 96 ವಿವಿಧ ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಇವುಗಳ ನಿರ್ಮಾಣಕ್ಕೆ ಸ್ಥಳ ಬೇಕಾಗಿದೆ. ಹೊಸದುರ್ಗದಲ್ಲಿ ತಲಾ ್ಙ 1 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಬಂಜಾರ ಭವನ ನಿರ್ಮಾಣ ಹಾಗೂ 10 ಹೊಸ ಎಸ್.ಸಿ., ಎಸ್.ಟಿ. ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು, ಇವುಗಳಿಗೆ ಸ್ಥಳದ ಅವಶ್ಯಕತೆ ಇದೆ. ಹೋಬಳಿಗೊಂದರಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣ ಮಾಡಲಿದ್ದು ಇದಕ್ಕೂ ಜಾಗ ಬೇಕಾಗಿದೆ. ಜಾಗವನ್ನು ಮಂಜೂರು ಮಾಡಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.ವೇದಿಕೆ ವಿಸ್ತರಣೆಗೆ ಮನವಿ

ನಗರ ಠಾಣೆ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಲು ಈಗಿರುವ ವೇದಿಕೆ (ಪ್ಲಾಟ್ ಫಾರ್ಮ್) ಕಿರಿದಾಗಿದೆ. ಹಾರ ಹಾಕಲು ಅನುಕೂಲವಾಗುವಂತೆ ಈಗಿರುವ ವೇದಿಕೆಯನ್ನು ವಿಸ್ತರಿಸ ಬೇಕಾಗಿದೆ ಎಂದು ಸದಸ್ಯರು ಮನವಿ ಮಾಡಿದರು.ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ವೇದಿಕೆ ವಿಸ್ತರಣೆಯ ಕಾಮಗಾರಿ ಕೈಗೊಳ್ಳಲು ನಿರ್ಮಿತಿ ಕೇಂದ್ರದವರಿಗೆ ಕಾರ್ಯಾದೇಶ ನೀಡಲು ನಗರಸಭೆ ಆಯುಕ್ತರಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ನಾರಾಯಣಸ್ವಾಮಿ, ಸಮಿತಿ ಸದಸ್ಯರಾದ ನೇ.ಹ. ಮಲ್ಲೇಶ್, ಎಚ್.ಸಿ.ನಿರಂಜನಮೂರ್ತಿ, ಜಾಕೀರ್ ಹುಸೇನ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.