ಗುರುವಾರ , ಮೇ 28, 2020
27 °C

23 ರಿಂದ ಕಲಾಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಗಲ್ ಹನುಮಂತಯ್ಯ ಕಲಾಸೌಧವು ತನ್ನ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 23 ರಿಂದ 26ರವರೆಗೆ ‘ರಂಗಾಯಾಮ’ ಎಂಬ ಕಲಾ ಹಬ್ಬವನ್ನು ಹಮ್ಮಿಕೊಂಡಿದೆ.ಈ ಕಲಾ ಹಬ್ಬದಲ್ಲಿ ನಾಲ್ಕು ವಿವಿಧ ಪ್ರಕಾರದ ಕಲೆಗಳ ಪ್ರದರ್ಶನ ನಡೆಯಲಿದೆ. ಅಲ್ಲದೇ ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ 2ಗಂಟೆಯವರೆಗೆ ಚಿತ್ರಕಲಾ ಸ್ಪರ್ಧೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.ಕಲಾ ಹಬ್ಬದಲ್ಲಿ ನಾಟಕ, ನಾಟ್ಯ, ಸಂಗೀತ ಮತ್ತು ಚಲನಚಿತ್ರದ ಪ್ರದರ್ಶನ ನಡೆಯಲಿದೆ. 23ರ ಭಾನುವಾರ ಹೊಸಬೆಳಕು ನಾಟಕ ಪ್ರದರ್ಶನ ನಡೆಯಲಿದೆ. ಸೋಮವಾರ ಮೇಧಾ ದೀಕ್ಷಿತ್ ಅವರ ನಾಟ್ಯ, ಮಂಗಳವಾರ ನವಿಲಾದವರು ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಹಾಗೆಯೇ ಬುಧವಾರ ಭಾವಾಯಾಮ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಲಾ ಹಬ್ಬಕ್ಕೆ ಉಚಿತ ಪ್ರವೇಶವಿದೆ.ಅಲ್ಲದೇ ನಾಲ್ಕು ಪ್ರದರ್ಶನ ಕಲೆಗಳ ಉಚಿತ ತರಬೇತಿ ಶಿಬಿರವೂ ನಡೆಯಲಿದೆ. ಖ್ಯಾತ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಕಲೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮತ್ತು ಪಾಸ್‌ಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ- 98803 88868/98865 90312.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.