ಗುರುವಾರ , ಸೆಪ್ಟೆಂಬರ್ 19, 2019
29 °C

2.87 ಲಕ್ಷ ಜನ ಆತ್ಮಹತ್ಯೆ

Published:
Updated:

ಬೀಜಿಂಗ್ (ಐಎಎನ್‌ಎಸ್): ಚೀನಾದಲ್ಲಿ ಪ್ರತಿ ವರ್ಷ 2.87 ಲಕ್ಷ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ರೋಗ ನಿಯಂತ್ರಣ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 75ರಷ್ಟು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಇದಲ್ಲದೇ ಪ್ರತಿ ವರ್ಷ 20 ಮಿಲಿಯನ್ ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂಬ ಅಂಶವನ್ನು ಅದು ಉಲ್ಲೇಖಿಸಿದೆ.ಸೆಪ್ಟೆಂಬರ್ 10ರಂದು ಒಂಬತ್ತನೇ `ವಿಶ್ವ ಆತ್ಮಹತ್ಯೆ ತಡೆ ದಿನ~ವನ್ನಾಗಿ ಆಚರಿಸಲಾಗುತ್ತಿದೆ. `ಬಹುಸಾಂಸ್ಕೃತಿಕ ಸಮುದಾಯಗಳಲ್ಲಿ ಆತ್ಮಹತ್ಯೆ ತಡೆಗಟ್ಟುವುದು~ ಈ ವರ್ಷದ ಘೋಷವಾಕ್ಯ.

 

Post Comments (+)