ಮೈಸೂರು: ವರನಟ ಡಾ. ರಾಜ್ಕುಮಾರ್ ಅವರ ಜಯಂತಿ ಅಂಗವಾಗಿ ಅಮೋಘ ಮೈಸೂರು ವಾಹಿನಿ ಮತ್ತು ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆಶ್ರಯದಲ್ಲಿ ಏಪ್ರಿಲ್ 29 `ಡಾ. ರಾಜ್ ನೆನಪಿನೋತ್ಸವ-2012~ ಆಯೋಜಿಸ ಲಾಗಿದೆ.

ಕಾರ್ಯಕ್ರಮದಲ್ಲಿ ನೇತ್ರದಾನ ವಾಗ್ದಾನ, ಬೃಹತ್ ಆರೋಗ್ಯ ಮೇಳ, ನೆನಪಿನ ಬುತ್ತಿಯಲ್ಲಿ ರಾಜಣ್ಣ ವಿಚಾರ ಮಂಥನ, ರಾಜ್ ಅಮೋಘ ನಾಗರಿಕ ಪ್ರಶಸ್ತಿ ಪ್ರದಾನ, ಜನಸನ್ಮಾನ, ರಾಜ್ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ ಎಂದು ಸಂಚಾಲಕ ಬಿಳಿಗಿರಿ ರಂಗನಾಥ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

`ಅಮೋಘ ವಾಹಿನಿಯು ಸತತ ಐದನೇ ಬಾರಿಗೆ ಆಯೋಜಿಸುತ್ತಿರುವ ರಾಜ್ ನೆನಪಿನೋತ್ಸವವು ವೈಶಿಷ್ಟ್ಯಪೂರ್ಣವಾಗಲಿದೆ. ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ತನ್ವೀರ್ ಸೇಠ್, ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ, ವಿದ್ಯಾವಿಕಾಶ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಾಸು ಹಾಜರಿರುವರು.

ಬೃಹತ್ ಆರೋಗ್ಯ ಮೇಳದಲ್ಲಿ ಕೆ.ಆರ್. ಆಸ್ಪತ್ರೆ, ಚೆಲುವಾಂಬಾ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ, ಅಖಿಲ ಕರ್ನಾಟಕ ಆಯುರ್ವೇದ ಸಂಸ್ಥೆ, ಸರ್ಕಾರಿ ಪ್ರಕೃತಿ ಮತ್ತು ಯೋಗ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ವಿದ್ಯಾರಣ್ಯ ಆಸ್ಪತ್ರೆ, ಜೀವಧಾರಾ ಬ್ಲಡ್ ಬ್ಯಾಂಕ್, ಮೈಸೂರು ಡಯಾಗ್ನಾಸ್ಟಿಕ್ ಸೆಂಟರ್ಗಳಿಂದ ವೈದ್ಯಕೀಯ ಸಿಬ್ಬಂದಿ ಭಾಗವಹಿಸಲಿದ್ದಾರೆ~ ಎಂದು ತಿಳಿಸಿದರು.

`ನೇತ್ರದಾನ-ವಾಗ್ದಾನ ಮನುಷ್ಯತ್ವದ ಮಹಾಯಾನ ಎಂಬ ಘೋಷವಾಕ್ಯದಡಿಯಲ್ಲಿ 1001 ಜನರು ನೇತ್ರದಾನದ ಸಂಕಲ್ಪ ನಡೆಯಲಿದೆ. ಮೊದಲೇ ಹೆಸರು ನೋಂದಾಯಿಸಬಹುದು ಅಥವಾ ಸ್ಥಳದಲ್ಲಿಯೂ ಹೆಸರು ಕೊಡಲು ಅವಕಾಶವಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಉದ್ಘಾಟಿಸುವರು.

ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಡಿಸಿಪಿ ಬಸವರಾಜ ಮಾಲಗತ್ತಿ ಹಾಜರಿರುವರು~ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಆರ್. ರಘು, `ರಾಜ್ ನೆನಪಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗು ವಂತಹ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ~ ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, `ಮೈಸೂರು ಪರಂಪರೆಗೆ ಸೇವೆ ಸಲ್ಲಿಸುತ್ತಿರುವ ಅಂಬಾರಿ ಮಾವುತ ಸಣ್ಣಪ್ಪ, ಸಿಂಹಾಸನ ಜೋಡಣೆ ಉಸ್ತುವಾರಿ ಮಹಾಲಿಂಗಪ್ಪ, ಅರಮನೆ ಮಾರ್ಗದರ್ಶಿ ಮಾದನಾಯಕ, ರಾಮಸನ್ ಪ್ರತಿಷ್ಠಾನ, ಪೇಪರ್ ಸುಬ್ಬಣ್ಣ, ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಿರುವ ಹಿರಿಯ ಆಗಮಿಕ ನಾಗೇಂದ್ರ ದೀಕ್ಷಿತ್, ಕನ್ನಡ ಪುಸ್ತಕಗಳ ವ್ಯಾಪಾರಿ ಶ್ರೀಕಾಂತ್ ಹಾಗೂ ಟೌನ್ಹಾಲ್ ನಾಗಣ್ಣ ಅವರಿಗೆ ಈ ಬಾರಿ ಪುರ ಸನ್ಮಾನ ನೀಡಿ ಗೌರವಿಸಲಾಗುವುದು~ ಎಂದು ತಿಳಿಸಿದರು.

`ವರ್ಷಗಳ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು ಜಿಲ್ಲಾಧಿಕಾರಿಯಾಗಿದ್ದ, ಸದ್ಯ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಿ. ಮಣಿವಣ್ಣನ್ ಅವರಿಗೆ ಈ ಬಾರಿ ಜನಸಮ್ಮಾನ ನೀಡಿ ಗೌರವಿಸಲಾಗುತ್ತಿದೆ~ ಎಂದು ವಿಚಾರ ಮಂಥನ ಸಮಿತಿ ಅಧ್ಯಕ್ಷ ಟಿ.ಗುರುರಾಜ್ ಹೇಳಿದರು.

`ಡಾ. ರಾಜ್ ಸಂಗೀತ ಸಂಜೆಯಲ್ಲಿ ಅಪರೂಪವಾಗುತ್ತಿರುವ ಲೈವ್ ಆರ್ಕೇಸ್ಟ್ರಾ ಪ್ರದರ್ಶಿಸಲಾಗುತ್ತಿದೆ. ಯುವ ಉದ್ಯಮಿ ರಘು ಆಚಾರ್ ಕಾರ್ಯಕ್ರಮ ಉದ್ಘಾಟಿಸುವರು. ಜಿಡಿಎಸ್ ಮುಖಂಡ ಎಂ.ವಿ. ಪ್ರಸಾದ್ ಬಾಬು, ಸ್ವರಾಜ್ ಕಿರಣ್ ಸಿನ್ಹಾ, ಅಮೋಘ ಬ್ರಾಡ್ಬ್ಯಾಂಡ್ ಸರ್ವಿಸಸ್ನ ಪೊನ್ನಪ್ಪ, ಶ್ರೀನಿವಾಸ ಶೆಣೈ, ಗಿರಿಜಾ ಶಂಕರ್ ಮತ್ತಿತರರು ಹಾಜರಿರುವರು~ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ. ಮಂಜುನಾಥ್ ತಿಳಿಸಿದರು. ಡಾ. ಶರತ್, ಡಾ. ಮಧುಸೂದನ, ವಿಶ್ವನಾಥಯ್ಯ, ಮಹೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.