ಚಾಮರಾಜನಗರ: ಅಕ್ರಮ ಕಪ್ಪುಶಿಲೆ ಗಣಿಗಾರಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1,686.53 ಕೋಟಿ ರೂಪಾಯಿ ನಷ್ಟವಾಗಿರುವ ಪ್ರಕರಣ ಸಂಬಂಧ ಪ್ರಥಮ ಹಂತದಲ್ಲಿ ಮೂರು ಗಣಿ ಕಂಪೆನಿ ವಿರುದ್ಧ ಜಿಲ್ಲಾಡಳಿತದಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

2004-05ರಿಂದ 2006-07ನೇ ಸಾಲಿನವರೆಗೆ ಜಿಲ್ಲೆಯ ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲ್ಲೂಕಿನಲ್ಲಿ ಗಣಿ ಉದ್ಯಮಿಗಳು ಸರ್ಕಾರಿ ಜಮೀನಿನಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಅಂಶ ಮಹಾಲೇಖಪಾಲರ ತಪಾಸಣೆಯಿಂದ ಬಯಲಿಗೆ ಬಂದಿತ್ತು.ಚಾಮರಾಜನಗರ ತಾಲ್ಲೂಕಿನಲ್ಲಿ ರೂ.894.53 ಕೋಟಿ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 792 ಕೋಟಿ ರೂ ನಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳು ಹಾಗೂ ರಾಜಸ್ವ ನಿರೀಕ್ಷಕರ ನೇತೃತ್ವದ ತನಿಖಾ ತಂಡದಿಂದ ಗಣಿ ಪ್ರದೇಶದ ಪರಿಶೀಲನೆ ನಡೆಸಲಾಗಿತ್ತು.

ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ಸರ್ವೇ ನಂ. 184ಕ್ಕೆ ಸೇರಿದ 226 ಎಕರೆ ಸರ್ಕಾರಿ ಗೋಮಾಳದಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರದೇಶದಲ್ಲಿ ಮೂರು ಗಣಿ ಕಂಪೆನಿಗಳು ತಮಗೆ ನೀಡಿರುವ ಗುತ್ತಿಗೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.

ಹೀಗಾಗಿ, ಬೆಂಗಳೂರಿನ ವಿವೇಕ್ ಎಕ್ಸ್ಪೋರ್ಟ್ (ನಂ. 30/1, 2ನೇ ಕ್ರಾಸ್, ಚಿಕ್ಕಣ್ಣ ಗಾರ್ಡನ್), ಜ್ಯೋತಿ ಗೌಡನಪುರ ಗ್ರಾಮದ ಮೆ:ಮೋಹನ್ ಎಂಟರ್ಪ್ರೈಸಸ್ ಹಾಗೂ ಚಾಮರಾಜನಗರದ ಸೋಮಣ್ಣ ಲೇಔಟ್ನ ಮೆ:ಗ್ರ್ಯಾನೈಟ್ ಇಂಡಿಯಾ ಪ್ರೈವೇಟ್ ಕಂಪೆನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಜಿಲ್ಲಾಡಳಿತದ ಸೂಚನೆ ಮೇರೆಗೆ ತಹಶೀಲ್ದಾರ್ ಅವರು, ಕರ್ನಾಟಕ ಭೂ ಕಂದಾಯ ಅಧಿನಿಯಮದಡಿ ಇಲ್ಲಿನ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿವೇಕ್ ಎಕ್ಸ್ಪೋರ್ಟ್ ಕಂಪೆನಿಗೆ ಸರ್ವೇ ನಂ.184ರಲ್ಲಿಯೇ 1.20 ಎಕರೆ ಜಮೀನನ್ನು ಕಪ್ಪುಶಿಲೆ ಗಣಿಗಾರಿಕೆಗೆ (ಗುತ್ತಿಗೆ ಸಂಖ್ಯೆ 597, 19.8.2003) ಪರವಾನಗಿ ನೀಡಲಾಗಿದೆ. ಆದರೆ, ಈ ಕಂಪೆನಿಯ ಮಾಲೀಕ ಅಬ್ದುಲ್ ರಜಾಕ್ ಎಂಬಾತ ಕಾಂತರಾಜು ಎಂಬುವರಿಗೆ ಮರುಗುತ್ತಿಗೆ ನೀಡಿದ್ದಾರೆ.

ಜತೆಗೆ, ಈ ಕಂಪೆನಿಯು ಜ್ಯೋತಿಗೌಡನಪುರ ಪಕ್ಕದ ಮೇಲ್ಮಾಳ ಗ್ರಾಮದ ಸರ್ವೇ ನಂ. 80/4ರ 2.20 ಎಕರೆ ಪ್ರದೇಶದಲ್ಲಿ ಪರವಾನಗಿ ಪಡೆಯದೆ ಗಣಿಗಾರಿಕೆ ಮಾಡಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.

ಭೂ ಪರಿವರ್ತನೆ ಕೂಡ ಮಾಡಿಸಿಕೊಂಡಿಲ್ಲ. ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿರುವ ಹಿನ್ನೆಲೆಯಲ್ಲಿ ಅಬ್ದುಲ್ ರಜಾಕ್, ಕಾಂತರಾಜು, ಸುಧಾಕರ್, ಚಕ್ರದಾರ್, ಕಾಂತರಾಜು ಎಂಬುವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಮೆ:ಮೋಹನ್ ಎಂಟರ್ಪ್ರೈಸಸ್ಗೆ (ಗುತ್ತಿಗೆ ಸಂಖ್ಯೆ 666, 26.8.2004) ಸರ್ವೇ ನಂ. 184ರಲ್ಲಿಯೇ ಗಣಿಗಾರಿಕೆಗೆ 10 ಎಕರೆ ನೀಡಲಾಗಿದೆ. ಆದರೆ, ಈ ಕಂಪೆನಿಯು ಗುತ್ತಿಗೆ ಪ್ರದೇಶ ಹೊರತುಪಡಿಸಿ ಸರ್ಕಾರಿ ಜಮೀನಿನಲ್ಲಿಯೂ ಅನಧಿಕೃತವಾಗಿ ಗಣಿಗಾರಿಕೆ ನಡೆಸಿದೆ. ಹೀಗಾಗಿ, ಗಣಿ ಮಾಲೀಕ ಮೋಹನ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಮೆ:ಗ್ರಾನೈಟ್ ಇಂಡಿಯಾ ಪ್ರೈವೇಟ್ ಕಂಪೆನಿಗೂ (ಗುತ್ತಿಗೆ ಸಂಖ್ಯೆ 305, 25.4.2000) ಸರ್ವೇ ನಂ. 184ರಲ್ಲಿ ಗಣಿಗಾರಿಕೆ ನಡೆಸಲು 10 ಎಕರೆ ನೀಡಲಾಗಿದೆ. ಗುತ್ತಿಗೆ ಜಾಗ ಹೊರತುಪಡಿಸಿ ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿಯೂ ಈ ಕಂಪೆನಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಜತೆಗೆ, ಅನಧಿಕೃತವಾಗಿ ಕಲ್ಲು ಕಟಿಂಗ್ ಮೆಷಿನ್ ಬಳಸುತ್ತಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಕಂಪೆನಿಯ ಮ್ಯಾನೇಜರ್ ವಿಜಯನ್, ಪುಟ್ಟಸ್ವಾಮಿ, ಸತ್ಯನಾರಾಯಣ ಎಂಬುವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಪೊನ್ನಾಚಿ ಮತ್ತು ಚಂಗಡಿಯ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಉದ್ಯಮಿಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.