ಬೆಂಗಳೂರು: ಪರಿಸರ ಸಂರಕ್ಷಣೆ ಕುರಿತು ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲು `ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ~ಯು `ಪರಿಸರ ಸ್ನೇಹಿ ಶಾಲೆ~ ಮತ್ತು `ಹಸಿರು ಪೋಷಣಾ ಕಾರ್ಯಕ್ರಮ~ ಎಂಬ ಎರಡು ಯೋಜನೆ ರೂಪಿಸಿದೆ.

ಎರಡೂ ಯೋಜನೆಗಳ ಮೂಲಕ ರಾಜ್ಯದ 30 ಜಿಲ್ಲೆಗಳ ಹದಿನಾಲ್ಕು ಸಾವಿರ ಶಾಲೆಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪ್ರತಿ ಜಿಲ್ಲೆಯಲ್ಲಿ 300 ಶಾಲೆಗಳಂತೆ ರಾಜ್ಯದ 30 ಜಿಲ್ಲೆಗಳ 9,000 ಶಾಲೆಗಳನ್ನು ಪರಿಸರ ಸ್ನೇಹಿ ಶಾಲೆಗಳನ್ನಾಗಿ ರೂಪಿಸಲಾಗುವುದು. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ 700 ಶಾಲೆಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ~ ಎಂದು ಅವರು ಹೇಳಿದರು.

`ಹಸಿರು ಪೋಷಣಾ ಕಾರ್ಯಕ್ರಮದ ಅಡಿಯಲ್ಲಿ ಕೈಗಾರಿಕೋದ್ಯಮಗಳು ಶಾಲೆಗಳನ್ನು ದತ್ತು ತೆಗೆದುಕೊಂಡು ಪರಿಸರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಿವೆ. 2011- 12ರ ಸಾಲಿನಲ್ಲಿ ಮೈಸೂರು ಜಿಲ್ಲೆಯ 25 ಕಾರ್ಖಾನೆಗಳು 150 ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದವು. ಈ ವರ್ಷ ಸುಮಾರು 1,000 ಕಾರ್ಖಾನೆಗಳು ಕನಿಷ್ಠ 5,000 ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ನಿರೀಕ್ಷೆ ಇದೆ~ ಎಂದು ಅವರು ತಿಳಿಸಿದರು.

`ಶಾಲಾ ಆವರಣದಲ್ಲಿ ಗಿಡ ನೆಡುವುದು, ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿಗಳನ್ನು ಬೆಳೆಯುವುದು, ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸುವುದು, ಗಿಡ ಮೂಲಿಕೆಗಳ ಉಪಯೋಗದ ಬಗ್ಗೆ ಮನನ ಮಾಡಿಕೊಳ್ಳುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಪ್ಲಾಸ್ಟಿಕ್ ಬಳಸದೇ ಇರುವುದು- ಇವೇ ಮೊದಲಾದ ಕಾರ್ಯಚಟುವಟಿಕೆಗಳನ್ನು ನಡೆಸಲಾಗುವುದು. ಹಸಿರು ಪೋಷಣಾ ಕಾರ್ಯಕ್ರಮದಲ್ಲಿ ದತ್ತು ತೆಗೆದುಕೊಂಡ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ಸೌರಶಕ್ತಿ ಬಳಕೆ, ಮಳೆ ನೀರು ಸಂಗ್ರಹ ಮತ್ತಿತರ ವ್ಯವಸ್ಥೆಗೆ ಕೈಗಾರಿಕೆಗಳು ವೆಚ್ಚ ಮಾಡಲಿವೆ~ ಎಂದು ವಿವರಿಸಿದರು.

`ಕಾನೂನಿನ ಪ್ರಕಾರ ಪ್ರತಿ ಕೈಗಾರಿಕೆಯು ಪರಿಸರ ಸಾಮಾಜಿಕ ಹೊಣೆಗಾರಿಕೆಗೆ (ಇಎಸ್ಆರ್) ಶೇಕಡಾ 4ರಷ್ಟು ಹಣ ಖರ್ಚು ಮಾಡಬೇಕು. ಇಎಸ್ಆರ್ ಭಾಗವಾಗಿಯೇ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಸೂಚಿಸುತ್ತಿದ್ದೇವೆ~ ಎಂದು ಹೇಳಿದ ಅವರು, `ಪರಿಸರ ಸ್ನೇಹಿ ಶಾಲೆ ಯೋಜನೆಗಾಗಿ ಪ್ರತಿ ಜಿಲ್ಲೆಗೆ ರೂ. 2 ಲಕ್ಷದಂತೆ ರೂ. 1 ಕೋಟಿಯನ್ನು ಮಂಡಳಿ ಮೀಸಲಿರಿಸಿದೆ. ಎರಡೂ ಯೋಜನೆಗಳಿಗೆ ಮಂಡಳಿ ವತಿಯಿಂದ ಪ್ರಚಾರ ಸಾಹಿತ್ಯ ಸಾಮಗ್ರಿ, ಸಾಕ್ಷ್ಯ ಚಿತ್ರಗಳನ್ನು ಒದಗಿಸಲಾಗುವುದಲ್ಲದೇ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುವುದು. ಈ ಯೋಜನೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಶಾಲೆಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬಹುಮಾನ ನೀಡಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.