ಸೋಮವಾರ, ಮೇ 10, 2021
25 °C

350ಕ್ಕೂ ಹೆಚ್ಚು ಬೀದಿ ನಾಯಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಪಟ್ಟಣದ ವಿವಿಧ ಕಡೆ ಜನ, ಜಾನುವಾರುಗಳು ಮತ್ತು ಕುರಿ ಮೇಕೆಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿ ಪರಾರಿಯಾಗುತ್ತಿದ್ದ ಬೀದಿ ನಾಯಿಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯಕ್ಕೆ ಪುರಸಭೆ ಕೊನೆಗೂ ಮುಂದಾಗಿದೆ.ಪಟ್ಟಣದಲ್ಲಿ ತಿಂಗಳ ಅವಧಿಯಲ್ಲಿ ಏಳು ಕುರಿ ಮರಿಗಳನ್ನು ಬಲಿ ತೆಗೆದುಕೊಂಡಿದ್ದ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವ ಪಾದಚಾರಿಗಳ ಮೇಲೆ ದಾಳಿ ನಡೆಸಿ ಗಾಯ ಗೊಳಿಸುತ್ತಿದ್ದರ ಬಗ್ಗೆ ಆತಂಕಗೊಂಡಿದ್ದ ಜನತೆ ಪುರಸಭಾ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದರು.ಮಂಗಳವಾರ ಬೆಳಿಗ್ಗೆಯಿಂದ ಪಟ್ಟಣದ ಬಸವೇಶ್ವರ ನಗರ, ಶ್ರೀನಿವಾಸ ನಗರ, ಶಿವಾಲಯ ರಸ್ತೆ, ಮಟನ್ ಮಾರ್ಕೆಟ್, ಮುಜಾವುರ್‌ಮೊಹಲ್ಲಾ, ಸರಸ್ವತಿ ಪುರಂ, ಸಾಯಿನಾಥ ರಸ್ತೆ, ಈಡಿಗರ ಕಾಲೋನಿ, ಲಕ್ಷ್ಮೀಪುರ ಮುಂತಾದ ಕಡೆ ನಾಯಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಕೇರಳದ ಪರಿಣಿತರ ತಂಡ ಪಟ್ಟಣಕ್ಕೆ ಆಗಮಿಸಿದ್ದು, ಎರಡು ದಿನಗಳಿಂದ 350ಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿದಿದ್ದು, ತಾಲ್ಲೂಕಿನ ನಾಗಪುರಿ ಅರಣ್ಯಕ್ಕೆ ಬಿಡುವ ಕಾರ್ಯದಲ್ಲಿ ತೊಡಗಿರುವು ದಾಗಿ ಪುರಸಭಾ ಮೂಲಗಳು ತಿಳಿಸಿವೆ.   

   

ಈ ಬಗ್ಗೆ ಪ್ರತಿಕ್ರಿಯೆ ನಿಡಿರುವ ಪುರಸಭಾ ಮುಖ್ಯಾಧಿಕಾರಿ ರಂಗೇಗೌಡ, ಇತ್ತೀಚೆಗೆ ಪಟ್ಟಣದಲ್ಲಿ ಬೀಡಾಡಿ ದನಗಳು, ಬೀದಿ ನಾಯಿ ಹಂದಿ ಹಾಗೂ ಇವುಗಳ ಜತೆಗೆ ಕೋತಿಗಳ ಹಾವಳಿ ಹೆಚ್ಚಾಗಿರುವು ದರಿಂದ ಪುರಸಭಾ ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ ಎಂದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.