ಹನ್ನೊಂದು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ಇಂದ್ರಜಿತ್ ಗುಪ್ತಾ (1919–2001) ಅವರು ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಿಷ್ಠಾವಂತ ಸದಸ್ಯರಾಗಿ ಕೊನೆ ತನಕ ಉಳಿದವರು. ಮೊದಲ ಸಲ 1960ರಲ್ಲಿ ಸಂಸತ್ ಪ್ರವೇಶಿಸಿದ ಅವರು 6ನೇ ಲೋಕಸಭೆ (1977ರಿಂದ 1980) ಬಿಟ್ಟರೆ ಉಳಿದಂತೆ ಸತತವಾಗಿ 2 ರಿಂದ 13ರ ವರೆಗೆ ಎಲ್ಲ ಲೋಕಸಭೆಗಳ ಸದಸ್ಯರಾಗಿದ್ದರು. 37 ವರ್ಷ ಸಂಸದರಾಗಿ ಸೇವೆ ಸಲ್ಲಿಸಿ ದಾಖಲೆ ಸೃಷ್ಟಿಸಿದರು.

ಹಿರಿಯ ಸದಸ್ಯರಾದ ಕಾರಣ 1996,1998,1999ರಲ್ಲಿ ಹಂಗಾಮಿ ಸ್ಪೀಕರ್ ಆಗಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಗೌರವ ಅವರಿಗೆ ಬಂದಿತ್ತು.

ದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದ ಗುಪ್ತಾ ಅವರು ನೇರ–ಖಾರ ನುಡಿಗೆ ಹೆಸರುವಾಸಿ. ಅವರ ತರ್ಕಬದ್ಧ ಮಾತುಗಳು ಸಂಸತ್ತಿನಲ್ಲಿ ಅನೇಕರ ಗಮನ ಸೆಳೆ-ಯುವಂತಿರುತ್ತಿತ್ತು. ಸಂಯುಕ್ತ ರಂಗ ಸರ್ಕಾರದಲ್ಲಿ ಕೇಂದ್ರ ಗೃಹಮಂತ್ರಿಯಾಗಿದ್ದರು. ಸರ್ಕಾರವನ್ನು ತಮ್ಮ ನೇರ ಪ್ರಶ್ನೆಗಳಿಂದ ಮುಜುಗರಗೊಳಿಸುತ್ತಿದ್ದರು. ದೊಡ್ಡ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದುದು ಅವರ ವಿಶೇಷತೆ. ಕೇಂದ್ರ ಗೃಹಮಂತ್ರಿಯಂಥ ಮಹತ್ವದ ಹುದ್ದೆಗೆ ಏರಿದ ಮೊದಲ ಕಮ್ಯುನಿಸ್ಟ್ ಎಂಬ ಹೆಗ್ಗಳಿಕೆ ಅವರದು (1996–98).

ಉದ್ದಕ್ಕೂ ಸರಳ ಜೀವನ ನಡೆಸಿದ ಅವರು ಎರಡು ಕೊಠಡಿಯಿರುವ ಮನೆಯಲ್ಲಿ ವಾಸವಾಗಿದ್ದರು ಮತ್ತು ಗೃಹಮಂತ್ರಿಯಾದ ಮೇಲೂ ಅದೇ ಮನೆಯಲ್ಲಿದ್ದರು. ಕೇಂದ್ರದಲ್ಲಿ ಮಂತ್ರಿಯಾಗುವವರೆಗೂ ನಡೆದೇ ಸಂಸತ್ತಿಗೆ ಬರುತ್ತಿದ್ದರು.

ಅವರು ಕೇಂದ್ರ ಗೃಹ ಮಂತ್ರಿಯಾಗಿದ್ದಾಗ ವಿಮಾನದಲ್ಲಿ ಬಂದರೆ ಅವರನ್ನು ಕರೆದೊಯ್ಯಲು ಕಾರು ವಿಮಾನ ನಿಲ್ದಾಣದ ರನ್ವೇ ಸಮೀಪದ ಪಥಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಅವರು ನಿಲ್ದಾಣದ ಬಸ್ಸನ್ನು ಬಳಸಿ ಹೊರಕ್ಕೆ ಬರುತ್ತಿದ್ದರು. ಸಂಸದರು ಸಾಮಾನ್ಯರಂತೆ ಬದುಕಬೇಕು ಎಂದು ನಂಬಿ ಅಂತೆಯೇ ನಡೆಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.