ಕೋಲ್ಕತ್ತ: ಭಾನುವಾರ ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತದ ಆಟಗಾರರು ಪಾಕಿಸ್ತಾನ ಕ್ರಿಕೆಟಿಗರ ಜೊತೆ ಹಸ್ತಲಾಘವ ಮಾಡದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹೇಳಿಕೆಗೆ ನಿರಾಕರಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಖ್ಯಾತ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಎಲ್ಲ ಕಡೆ ಉಗ್ರರ ದಮನವಾಗಬೇಕು ಎಂದಷ್ಟೇ ಹೇಳಿದ್ದಾರೆ.

ಈ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಪಂದ್ಯಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕೂಗು ಕೇಳಿಬಂದಿತ್ತು. ಪಹಲ್ಗಾಮ್ ಉಗ್ರರ ದಾಳಿ ಬಳಿಕವೂ ಪಾಕ್ ಜೊತೆ ಪಂದ್ಯಕ್ಕೆ ಒಪ್ಪಿಕೊಂಡ ಬಗ್ಗೆ ಬಿಸಿಸಿಐ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಈ ಆಕ್ರೋಶದ ನಡುವೆ ಭಾನುವಾರ ನಡೆದ ಪಂದ್ಯದ ಆರಂಭ ಮತ್ತು ಅಂತ್ಯದಲ್ಲಿ ಭಾರತೀಯ ಆಟಗಾರರು, ಪಾಕಿಸ್ತಾನ ಕ್ರಿಕೆಟಿಗರ ಜೊತೆ ಹಸ್ತಲಾಘವ ಮಾಡಲಿಲ್ಲ. ಈ ಬಗ್ಗೆ ತಂಡದ ಎಲ್ಲ ಆಟಗಾರರು ಒಕ್ಕೊರಲ ನಿರ್ಧಾರ ಕೈಗೊಂಡಿದ್ದರು. ಇದನ್ನು ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ಹಸ್ತಲಾಘವ ಮಾಡದಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, 'ಭಯೋತ್ಪಾದನೆ ನಿಲ್ಲಬೇಕು, ಅದು ಅತ್ಯಂತ ಮುಖ್ಯ, ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ನಿಲ್ಲಬೇಕು. ನೀವು ಅನೇಕ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವುದನ್ನು ನೋಡಿದ್ದೀರಿ. ಆದ್ದರಿಂದ, ಅದು ಕೂಡ ನಿಲ್ಲಬೇಕು. ಆದರೆ, ಕ್ರೀಡೆ ನಿಲ್ಲಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಭಯೋತ್ಪಾದನೆ ನಿಲ್ಲಬೇಕು’ ಎಂದು ಹೇಳಿದರು.

‘ಹಸ್ತಲಾಘವ ಮಾಡದಿರುವ ಬಗ್ಗೆ ನೀವು ಸೂರ್ಯ ಕುಮಾರ್ ಯಾದವ್ ಅವರನ್ನೇ ಕೇಳಬೇಕು. ಅವರೇ ಆ ಪ್ರಶ್ನೆಗೆ ಉತ್ತರಿಸಬೇಕು. ನಾನು ಅದರಿಂದ ದೂರ ಇದ್ದೇನೆ. ಈ ಬಗ್ಗೆ ಸೂರ್ಯ ಉತ್ತರ ನೀಡಿದ್ದಾರೆ ಎಂದುಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ಅವರದೇ ಕಥೆ ಇರುತ್ತದೆ. ಅದೇ ಇದು’ಎಂದಿದ್ದಾರೆ.

ಪಾಕಿಸ್ತಾನ ತಂಡ ಅಷ್ಟೊಂದು ಉತ್ತಮವಾಗಿರಲಿಲ್ಲ. ಈ ಹಿಂದೆ ಅವರ ತಂಡವನ್ನು ನೋಡಿದ್ದೇನೆ. ಹಿಂದಿನಂತೆ ಇಲ್ಲ. ಭಾರತ ತಂಡವು ಉಳಿದೆಲ್ಲ ತಂಡಗಳಿಗಿಂತ ಉತ್ತಮ ತಂಡವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
.ಮೊಹಮ್ಮದ್ ಸಿರಾಜ್ಗೆ ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.