ನವದೆಹಲಿ: ಸೋತ ಪಂದ್ಯಗಳಲ್ಲಿ ‘ಶ್ಲಾಘನಾರ್ಹ’ ಪ್ರದರ್ಶನ ನೀಡಿದ್ದರೂ ಅದನ್ನು ಸಂಭ್ರಮಿಸಲೇಬಾರದು ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇತ್ತೀಚಿನ ಏಕದಿನ ಸರಣಿ ಸೋಲನ್ನು ಅವರು ವಿಮರ್ಶಾತ್ಮಕವಾಗಿ ಅವಲೋಕಿಸಿದ್ದು ಹೀಗೆ. ವೈಯಕ್ತಿಕವಾಗಿ ಯಶಸ್ಸು ಗಳಿಸಿದವರ ಬಗ್ಗೆ ತಮಗೆ ಸಂತಸವಿದೆ. ಆದರೆ ಸಮಗ್ರ ದೃಷ್ಟಿಯಿಂದ ನೋಡಿದಾಗ (ಈ ಸಂದರ್ಭದಲ್ಲಿ ಸರಣಿ ಸೋಲು) ಹಳಿ ತಪ್ಪಬಾರದು’ ಎಂದು ಅವರು ‘ಬಿಸಿಸಿಐ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತದ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಪಿಎಲ್ ನಂತರ ಮೊದಲ ಬಾರಿ ಆ ಏಕದಿನ ಸರಣಿಯಲ್ಲಿ ಆಡಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಶತಕ ಹೊಡೆದ ಶರ್ಮಾ ಅವರು ‘ಸರಣಿಯ ಆಟಗಾರ’ರಾಗಿದ್ದರು. ಆ ಪಂದ್ಯದಲ್ಲಿ ಗೆದ್ದ ಭಾರತ ‘ವೈಟ್ವಾಷ್’ ತಪ್ಪಿಸಿಕೊಂಡಿತ್ತು. ಭಾರತ ಸೋತ ಎರಡನೇ ಪಂದ್ಯದಲ್ಲಿ ಅವರು 73 ರನ್ ಬಾರಿಸಿದ್ದರು.

ಮೊದಲ ಎರಡು ಪಂದ್ಯಗಳಲ್ಲಿ ‘ಶೂನ್ಯ ಸಂಪಾದನೆ’ ಮಾಡಿದ್ದ ಕೊಹ್ಲಿ ಅವರು ಅಂತಿಮ ಪಂದ್ಯದಲ್ಲಿ 74 ರನ್ ಹೊಡೆದಿದ್ದರು. ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಕೂಡ ವೈಯಕ್ತಿಕವಾಗಿ ಕೆಲ ಬಾರಿ ಮಿಂಚಿದ್ದರು.

ಆದರೆ ಗಂಭೀರ್, ಸಂದರ್ಶನದಲ್ಲಿ ಯಾರದೇ ಹೆಸರನ್ನೂ ಉಲ್ಲೇಖಿಸಲಿಲ್ಲ. ಕೇಳಿದ ಪ್ರಶ್ನೆಗಳಿಗೂ ನಿರ್ದಿಷ್ಟವಾಗಿ ಯಾರನ್ನೂ ಹೆಸರಿಸಲಿಲ್ಲ.

‘ಯಾವತ್ತೂ ವೈಯಕ್ತಿಕ ಪ್ರದರ್ಶನ ಮುಖ್ಯವಾಗಲೇಬಾರದು ಎಂಬುದರಲ್ಲಿ ನಾನು ನಂಬಿಕೆಯಿಟ್ಟವ. ವೈಯಕ್ತಿಕ ಪ್ರದರ್ಶನಗಳಿಂದ ನನಗೆ ಸಂಸತವಾಗುತ್ತದೆ’ ಎಂದರು. ‘ಆದರೆ ಅಂತಿಮವಾಗಿ ಸರಣಿ ಸೋತೆವು. ಕಡೆಗೆ ಅಡಿಗೆರೆಯಾಗುವುದು ಆ ಸರಣಿ ಸೋಲು. ಕೋಚ್ ಆಗಿ ಸರಣಿ ಸೋಲು ನನಗೆ ಇಷ್ಟವಾಗುವುದಿಲ್ಲ’ ಎಂದು ಅವರು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ರೋಹಿತ್ ಮತ್ತು ಕೊಹ್ಲಿ ಅವರು ಟೆಸ್ಟ್ ಮತ್ತು ಟಿ20 ಮಾದರಿಯಿಂದ ನಿವೃತ್ತರಾಗಿದ್ದರು. ಹೀಗಾಗಿ ಏಕದಿನ ಮಾದರಿಗೆ ಸೀಮಿತಗೊಂಡಿದ್ದು, ಅಭಿಮಾನಿಗಳು ಅವರ ಆಟದ ಬಗ್ಗೆ ಕುತೂಹಲಭರಿತರಾಗಿದ್ದರು.

ಏಕದಿನ ಸರಣಿಯ ನಂತರ ನಡೆದ ಟಿ20 ಸರಣಿಯನ್ನು ಭಾರತ 2–1 ರಿಂದ ಜಯಿಸಿತ್ತು. ‘ಅಂತಿಮವಾಗಿ ನಾವು ಪ್ರತಿನಿಧಿಸುವುದು ದೇಶವನ್ನು. ಹೌದು ಟಿ20 ಸರಣಿ ಭಿನ್ನವಾದುದು. ನಾವು ಸರಣಿ ಗೆದ್ದೆವು. ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದವು. ಕಲಿಯುವುದೂ ಇತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.