ದಿನ ಭವಿಷ್ಯ: ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ; ಆದರೆ...
Published 9 ನವೆಂಬರ್ 2025, 20:34 IST
ಪ್ರಜಾವಾಣಿ ವಾರ್ತೆ
ಮೇಷ
ಹೊಸ ಉದ್ಯಮ ಅಥವಾ ವ್ಯಾಪಾರ ಪ್ರಾರಂಭಿಸಲು ಆಲೋಚಿಸುತ್ತಿರುವವರಿಗೆ ಸಕಾಲ. ಯೋಜನೆಯಂತೆ ಕೆಲಸಗಳು ನಡೆಸಲು ಕಷ್ಟ. ಆದರೆ ಸರಿಯಾಗಿ ನೋಡಿಕೊಂಡರೆ, ಊಹೆಗೂ ಮೀರಿದ ಲಾಭ ಪಡೆದು ಕೊಳ್ಳುವಿರಿ.
ವೃಷಭ
ಮೊದಲು ತಲುಪಬೇಕಾಗಿರುವ ಗುರಿಯ ಕಡೆಗೆ ಲಕ್ಷ್ಯ ಹರಿಸಿ. ಕೈಗೊಂಡಿರುವ ಕೆಲಸದ ಸಾಧನೆ ಸುಲಭ ಸಾಧ್ಯವೆನಿಸಲು ಜಾಣ್ಮೆ ಪ್ರದರ್ಶಿಸಿ. ತುಸು ಮೃದು ಧೋರಣೆ ಬೆಳೆಸಿಕೊಳ್ಳಿರಿ.
ಮಿಥುನ
ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತನೊಂದಿಗೆ ಚರ್ಚಿಸಿದರೆ ನಷ್ಟಕ್ಕೆ ಕಾರಣ ತಿಳಿಯುತ್ತದೆ. ಧಾರ್ಮಿಕ ಕೆಲಸಗಳಿಗಾಗಿ ಹಣ ವಿನಿಯೋಗವಾಗುವುದು.
ಕರ್ಕಾಟಕ
ಕೆಲಸ ಕಾರ್ಯಗಳು ಮೇಲಧಿಕಾರಿಗಳಿಗೆ ಅಸಮಾಧಾನ ಉಂಟುಮಾಡಬಹುದು. ಜಾಗ್ರತರಾಗಿರಿ. ವಾಹನ ಮಾರಾಟಗಳಿಂದ ಲಾಭ ಪಡೆಯುವಿರಿ. ಉದ್ಯೋಗದಲ್ಲಿದ್ದ ಅನಿಶ್ಚಿತತೆ ದೂರಾಗಲಿದೆ.
ಸಿಂಹ
ಉನ್ನತ ಶಿಕ್ಷಣದಲ್ಲಿ ಶ್ರಮ ವಹಿಸಿ ಉತ್ತಮ ಶ್ರೇಣಿ ಪಡೆದುಕೊಳ್ಳು ವಲ್ಲಿ ಯಶಸ್ವಿಯಾಗುವಿರಿ. ತಂದೆ ತಾಯಿ ಆಶೀರ್ವಾದ ಅನಿವಾರ್ಯ. ಜಾಹೀರಾತಿನಲ್ಲಿ ಅಭಿನಯಿಸಲು ಬೇಡಿಕೆ ಬರಲಿದೆ.
ಕನ್ಯಾ
ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ . ಹಿಡಿದ ಕೆಲಸಗಳು ಹಂತ ಹಂತವಾಗಿ ಅಥವಾ ಒಂದೊಂದಾಗಿ ಮುಗಿಸುವ ಪ್ರಯತ್ನವಿರಲಿ. ವಿಶ್ವಾಸವಿರಲಿ.
ತುಲಾ
ಕೆಲವು ವಸ್ತುಗಳ ದರ್ಶನದಿಂದ ಪೂರ್ವಾಶ್ರಮದ ಘಟನೆಗಳು ನೆನಪಾಗುತ್ತವೆ. ಬದಲಾದ ಕೆಲವು ಗೃಹೋಪಯೋಗಿ ವಸ್ತುಗಳು ಅಡ್ಡ ಪರಿಣಾಮವನ್ನು ಉಂಟುಮಾಡುವುದು.
ವೃಶ್ಚಿಕ
ಪ್ರಭಾವದಿಂದ ಬೇರೆಯವರು ಲಾಭ ಪಡೆಯುವಷ್ಟು ಯೋಗ್ಯತೆ ನಿಮ್ಮದಾಗುತ್ತದೆ. ಲಾಭದಾಯಕವಾಗಿ ನಡೆಯುವ ವ್ಯವಹಾರದ ಮೇಲೆ ನಿಗಾ ಇರಲಿ. ಮುಖ್ಯವಾದ ವಿಚಾರ ಮರೆಯದಿರಿ.
ಧನು
ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆಯು ಉತ್ತಮ ರೀತಿಯಲ್ಲಿ ಸಹಾಯಕಾರಿ ಆಗುವುದು. ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ಕೊಂಕು ಮಾತುಗಳಿಗೆ ಬೇಸರಿಸದಿರಿ.
ಮಕರ
ಪ್ರಯಾಣದಲ್ಲಿ ವಂಚನೆ,ನಷ್ಟದ ಪ್ರಸಂಗಗಳಿವೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ.
ಕುಂಭ
ರಾಜಕೀಯ ವ್ಯಕ್ತಿಗಳಿಗೆ ನಂಬಿಕೆ ದ್ರೋಹ ಅಥವಾ ಅಪಪ್ರಚಾರ ಎದುರಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕಾದೀತು.
ಮೀನ
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ಆಪತ್ತು ಉಂಟಾದಾಗ ನಿಮ್ಮ ಹಳೆಯ ಹರಕೆಗಳ ನೆನಪು ಬರಬಹುದು. ಸಿಹಿ ತಿಂಡಿಗಳ ಉತ್ಪನ್ನಗಳಿಂದ ಲಾಭ ಗಳಿಸುವಿರಿ.