ಪುಣೆ: ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟದ ಬಲದಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರದ ಎದುರು ಇನಿಂಗ್ಸ್ ಮುನ್ನಡೆಯ ಸನಿಹಕ್ಕೆ ಬಂದು ನಿಂತಿದೆ.

ಎಂ.ಸಿ.ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಶ್ರೇಯಸ್ (71; 162ಎ, 4X9) ಅರ್ಧಶತಕದ ಬಲದಿಂದ ಕರ್ನಾಟಕವು 313 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಹಾರಾಷ್ಟ್ರ ತಂಡಕ್ಕೆ ಮತ್ತೆ ಶ್ರೇಯಸ್ (23–3–46–4) ಅವರೇ ಬಿಸಿ ಮುಟ್ಟಿಸಿದರು. ಇದರಿಂದಾಗಿ ಆತಿಥೇಯ ತಂಡವು ದಿನದಾಟದ ಮುಕ್ತಾಯಕ್ಕೆ 66 ಓವರ್ಗಳಲ್ಲಿ 6 ವಿಕೆಟ್ಗಳಿಗೆ 200 ರನ್ ಗಳಿಸಿತು. ಜಲಜ್ ಸಕ್ಸೆನಾ (ಬ್ಯಾಟಿಂಗ್ 34) ಮತ್ತು ವಿಕ್ಕಿ ಓಸ್ವಾಲ್ (ಬ್ಯಾಟಿಂಗ್ 4) ಕ್ರೀಸ್ನಲ್ಲಿದ್ದಾರೆ.

ಪಂದ್ಯದ ಮೊದಲ ದಿನವಾದ ಶನಿವಾರ ಕರ್ನಾಟಕ ತಂಡವು ಮಯಂಕ್ ಅಗರವಾಲ್ ಮತ್ತು ಆರ್. ಸ್ಮರಣ್ ಅವರ ಅರ್ಧಶತಕಗಳ ಬಲದಿಂದ 5 ವಿಕೆಟ್ಗಳಿಗೆ 257 ರನ್ ಗಳಿಸಿತ್ತು. ಕ್ರೀಸ್ನಲ್ಲಿದ್ದ ಶ್ರೇಯಸ್ (32 ರನ್) ಮತ್ತು ಅಭಿನವ್ ಮನೋಹರ್ (31 ರನ್) ಭಾನುವಾರ ಬೆಳಿಗ್ಗೆ ಬ್ಯಾಟಿಂಗ್ ಮುಂದುವರಿಸಿದರು. ಅಭಿನವ್ (47; 129ಎ, 4X3, 6X2) ಅವರು ಅರ್ಧಶತಕದ ಸನಿಹದಲ್ಲಿದ್ದಾಗ ಮುಕೇಶ್ ಚೌಧರಿ ಎಸೆತದಲ್ಲಿ ಕ್ಲೀನ್ಬೌಲ್ಡ್ ಆದರು. ಆದರೆ ಶ್ರೇಯಸ್ ಏಕಾಂಗಿ ಹೋರಾಟ ಮಾಡಿದರು. ಸಾಧ್ಯವಾದಷ್ಟು ರನ್ಗಳನ್ನು ತಂಡದ ಖಾತೆಗೆ ಸೇರಿಸುವ ಪ್ರಯತ್ನ ಮಾಡಿದರು.

ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಗೋವಾ ಮತ್ತು ಸೌರಾಷ್ಟ್ರ ಎದುರಿನ ಪಂದ್ಯಗಳಲ್ಲಿಯೂ ಅವರು ಅರ್ಧಶತಕ ಗಳಿಸಿದ್ದರು. ವಿಕ್ಕಿ ಓಸ್ವಾಲ್ ಬೌಲಿಂಗ್ನಲ್ಲಿ ದಾಸ್ ಪಡೆದ ಕ್ಯಾಚ್ಗೆ ಶ್ರೇಯಸ್ ಮತ್ತು ಕರ್ನಾಟಕದ ಇನಿಂಗ್ಸ್ಗೆ ತೆರೆಬಿತ್ತು.

ಮಹಾರಾಷ್ಟ್ರ ತಂಡಕ್ಕೆ ಪೃಥ್ವಿ ಶಾ ( 71; 92ಎಸೆತ, 4X9) ಮತ್ತು ಅರ್ಷಿನ್ ಕುಲಕರ್ಣಿ (34; 48ಎ) ಅವರು ಉತ್ತಮ ಅರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು. 19ನೇ ಓವರ್ನಲ್ಲಿ ಶ್ರೇಯಸ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ವಿಫಲರಾದ ಕುಲಕರ್ಣಿ ಅವರನ್ನು ಕೆ.ಎಲ್. ಶ್ರೀಜಿತ್ ಸ್ಟಂಪಿಂಗ್ ಮಾಡಿದರು. ತಮ್ಮ ಇನ್ನೊಂದು ಓವರ್ನಲ್ಲಿ ಶ್ರೇಯಸ್ ಅವರು ಸಿದ್ದೇಶ್ ವೀರ್ ಅವರನ್ನು ಪೆವಿಲಿಯನ್ಗೆ ಕಳಿಸಿದರು. ಅವರನ್ನೂ ಶ್ರೀಜಿತ್ ಸ್ಟಂಪಿಂಗ್ ಮಾಡಿದರು. ನಾಯಕ ಅಂಕಿತ್ ಭಾವ್ನೆ (6) ಹಾಗೂ ಸೌರಭ್ ನವಲೆ (26; 98ಎ) ಅವರ ವಿಕೆಟ್ ಕೂಡ ಶ್ರೇಯಸ್ ಪಾಲಾದವು. ಇನ್ನೊಂದು ಬದಿಯಿಂದ ಪೃಥ್ವಿ ಶಾ ಮತ್ತು ದಾಸ್ ಅವರ ವಿಕೆಟ್ ಕಬಳಿಸುವಲ್ಲಿ ಮೊಹ್ಸಿನ್ ಖಾನ್ ಸಫಲರಾದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಕರ್ನಾಟಕ: 111 ಓವರ್ಗಳಲ್ಲಿ 313 (ಆರ್. ಸ್ಮರಣ್ 54, ಅಭಿನವ್ ಮನೋಹರ್ 47, ಶ್ರೇಯಸ್ ಗೋಪಾಲ್ 71, ಎಂ.ಜಿ. ಚೌಧರಿ 66ಕ್ಕೆ3, ವಿಕಿ ಓಸ್ವಾಲ್ 53ಕ್ಕೆ2, ಜಲಜ್ ಸಕ್ಸೆನಾ 94ಕ್ಕೆ4)

ಮಹಾರಾಷ್ಟ್ರ: 66 ಓವರ್ಗಳಲ್ಲಿ 6ಕ್ಕೆ200 (ಪೃಥ್ವಿ ಶಾ 71, ಅರ್ಷಿನ್ ಕುಲಕರ್ಣಿ 34, ಸಚಿನ್ ದಾಸ್ 21, ಸೌರಭ್ ನವಲೆ 26, ಜಲಜ್ ಸಕ್ಸೆನಾ ಔಟಗಾದೇ 34, ವಿಕಿ ಓಸ್ವಾಲ್ ಔಟಾಗದೇ 4, ಶ್ರೇಯಸ್ ಗೋಪಾಲ್ 46ಕ್ಕೆ4, ಮೊಹ್ಸಿನ್ ಖಾನ್ 56ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.