ವಡೋದರ: ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡ ಶುಕ್ರವಾರ ಇಲ್ಲಿ ಮೂರು ಗಂಟೆಗಳ ಕಾಲ ತಾಲೀಮಿನಲ್ಲಿ ತೊಡಗಿತು. ಈ ವೇಳೆ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಉತ್ತಮ ಲಯದಲ್ಲಿದ್ದಂತೆ ಕಂಡಿತು.

ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಆರಂಭವಾಗಲಿದೆ. ಈ ಸರಣಿಯ ಬಳಿಕ ಉಭಯ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿವೆ.

ಕೋತಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ಮಧ್ಯಮ ವೇಗಿಗಳು, ಸ್ಪಿನ್ನರ್ಗಳು ಮತ್ತು ಥ್ರೊಡೌನ್ ಪರಿಣತರೆದುರು ಕೊಹ್ಲಿ ಮತ್ತು ರೋಹಿತ್ ಸುಮಾರು ಒಂದೂವರೆ ಗಂಟೆ ಅಭ್ಯಾಸ ನಡೆಸಿದರು. ಇವರಿಬ್ಬರೂ ಈಚೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದರು. ಕೊಹ್ಲಿ ಆ ಪಂದ್ಯಗಳಲ್ಲಿ 77 ಮತ್ತು 131 ರನ್ ಬಾರಿಸಿದ್ದರು. ಅವರು ವೇಗದ ಮತ್ತು ಸ್ಪಿನ್ ಬೌಲರ್ಗಳನ್ನು ಆರಾಮವಾಗಿ ಆಡಿದರು. ಥ್ರೋಡೌನ್ ವೇಳೆ ಅವರಿಗೆ ಸವಾಲುಗಳೂ ಎದುರಾದವು.

ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಮೂರು ಗಂಟೆಗಳ ತಾಲೀಮಿನ ಭಾಗವಾಗಿರಲಿಲ್ಲ. ಇವರಿಬ್ಬರೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಗುರುವಾರ ತಮ್ಮ ತಂಡಗಳ ಪ್ರ ಆಡಿದ್ದರು.

ಭಾರತ ತಂಡದ ನಾಯಕ ಶುಭಮನ್ ಗಿಲ್ ಸಹ ವ್ಯಾಯಾಮದಲ್ಲಿ ಮತ್ತು ನೆಟ್ ಪ್ರಾಕ್ಟೀಸ್ನಲ್ಲಿ ತೊಡಗಿಕೊಂಡರು. ಅವರು ಕಾಲಬೆರಳಿನ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಆಡಿರಲಿಲ್ಲ.

ತಂಡ ಗುರುವಾರ ಕೂಡ ಅಭ್ಯಾಸದಲ್ಲಿ ತೊಡಗಿತ್ತು. ಭಾನುವಾರ ಈ ಕ್ರೀಡಾಂಗಣದಲ್ಲಿ ಪುರುಷರ ವಿಭಾಗದ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.