ಶನಿವಾರ, 8 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ಇಂದು ಪಡೆಯುತ್ತೀರಿ
Published 8 ನವೆಂಬರ್ 2025, 20:52 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಾಪ್ತ ವಯಸ್ಸಿನ ಮಗಳಿಗೆ ಸಂಬಂಧಿಕರಲ್ಲಿಯೇ ಅಥವಾ ಅಕ್ಕ-ಪಕ್ಕದ ಮನೆಯಲ್ಲಿಯೇ ವರ ನಿಶ್ಚಯವಾಗಿ ಮದುವೆಯ ತಯಾರಿ ನಡೆಸುವಿರಿ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ಇಂದು ಪಡೆಯುತ್ತೀರಿ.
ವೃಷಭ
ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿ, ಅದರಿಂದಾಗಿ ಲಾಭ ಪಡೆಯುವಿರಿ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯವೆನಿಸುವುದು.
ಮಿಥುನ
ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿ, ಅದರಿಂದಾಗಿ ಲಾಭ ಪಡೆಯುವಿರಿ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯವೆನಿಸುವುದು.
ಕರ್ಕಾಟಕ
ನಿಮ್ಮ ಇಂದಿನ ದಿನದದಲ್ಲಿ ಆಗುವ ಹಲವು ಘಟನೆಗಳಿಂದ ಪದೇ ಪದೇ ದಿವ್ಯಶಕ್ತಿಯ ಅನುಭೂತಿಯು ಆಗುತ್ತದೆ. ನೀವು ನಿರ್ಧರಿಸಿದ ರೀತಿಯಲ್ಲಿ ನಿಮ್ಮ ಜೀವನ ಇರುವುದು. ಈ ದಿನವು ನೆಮ್ಮದಿಯುಕ್ತ ದಿನ ಎನಿಸುವುದು.
ಸಿಂಹ
ಮಕ್ಕಳು ತಪ್ಪು ಮಾಡಿದಾಗ ಸಿಟ್ಟು ಬರುವುದು ಸಹಜವಾದರೂ ಸಹ ತಿಳುವಳಿಕೆ ಹೇಳಿ ಅವರನ್ನು ಸರಿದಾರಿಗೆ ತನ್ನಿ. ಮುಕ್ತ ಮಾತುಕತೆಗಳಿಂದ ವ್ಯವಹಾರಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯುತ್ತದೆ.
ಕನ್ಯಾ
ಹಿರಿಯರ ಅಭಿಪ್ರಾಯದಂತೆ ಮನೆಯನ್ನು ಆಧುನಿಕರಣಗೊಳಿಸುವ ಕೆಲಸದಲ್ಲಿ ಮುಂದುವರಿಯುವಿರಿ. ಸ್ನೇಹಿತರ ಸಹಾಯದಿಂದ ಜಮೀನು ಖರೀದಿಯ ಕನಸು ನನಸಾಗಲಿದೆ. ಲೇವಾದೇವಿ ವ್ಯವಹಾರದಲ್ಲಿ ಜಾಗ್ರತೆ ಇರಲಿ.
ತುಲಾ
ಈ ದಿನ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ನಿಮ್ಮ ನಾಯಕತ್ವದ ಗುಣ ಪ್ರದರ್ಶಿಸಲು ವೇದಿಕೆ ಸಿಗಲಿದೆ.
ವೃಶ್ಚಿಕ
ಹೊಸ ಮನೆಯ ಕೆಲಸಗಳು ಮುಕ್ತಾಯ ಹಂತ ತಲುಪುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ. ದೇವತಾ ಕಾರ್ಯಗಳಿಗಾಗಿ ಪ್ರಯಾಣ ಮಾಡಲಿದ್ದೀರಿ.
ಧನು
ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯ ಸುಗಮವಾಗಿ ಸಾಗುವುದು. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು. ಆದ್ದರಿಂದ ಹೆಚ್ಚಿನ ಗಮನದಿಂದ ಕೆಲಸವನ್ನು ಮಾಡಿ.
ಮಕರ
ಬೇರೆಯವರ ಸಹಾಯ ಅಪೇಕ್ಷಿಸದೆ ಕಠಿಣವಾದ ಕಾರ್ಯಗಳನ್ನು ಸಹ ನೀವೆ ಸಾಧಿಸಿಕೊಳ್ಳಿ. ದೈವಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿ ಪಡೆಯುತ್ತೀರಿ. ಹಣಕಾಸಿನ ವಿವಾದಗಳನ್ನು ಬಗೆಹರಿಸಿಕೊಳ್ಳುವಿರಿ.
ಕುಂಭ
ಇತರರ ಕಷ್ಟಕಾಲದಲ್ಲಿ ಮಾಡಿದ ಸದುಪಕಾರದ ಉತ್ತಮ ಫಲಗಳು ನಿಮ್ಮ ಈ ಕಷ್ಟಕಾಲದಲ್ಲಿ ನಿಮ್ಮ ಸಹಾಯಕ್ಕೆ ಬರುತ್ತವೆ. ನಿಮ್ಮ ಅತಿಯಾದ ಸರಳತೆಯು ಸಮಾಜದಲ್ಲಿನ ನಿಮ್ಮ ಉತ್ತಮ ಗೌರವಕ್ಕೆ ಕಾರಣವಾಗುತ್ತದೆ.
ಮೀನ
ನೀವು ಇಂದು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮನಸ್ಸಿಗೆ ನೆಮ್ಮದಿ ತರಲಿವೆ. ಎಲೆಕ್ಟ್ರಿಕಲ್‌ ಉಪಕರಣಗಳ ಮಾರಾಟಗಾರರಿಗೆ ಮತ್ತು ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರುವುದು.
ADVERTISEMENT
ADVERTISEMENT