ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಶನಿವಾರ ಮಳೆಯಿಂದಾಗಿ ಸ್ಥಗಿತಗೊಂಡಿತು. ಇದರಿಂದಾಗಿ ಭಾರತ ತಂಡ ಸರಣಿಯನ್ನು 2–1 ರಿಂದ ಗೆದ್ದುಕೊಂಡಿತು.

ಈ ಸರಣಿಯ ಮೊದಲ ಪಂದ್ಯ ಸಹ ಮಳೆಗೆ ಕೊಚ್ಚಿಹೋಗಿತ್ತು. ಆಸ್ಟ್ರೇಲಿಯಾ ಎರಡನೇ ಪಂದ್ಯ ಗೆದ್ದರೆ, ಉಳಿದೆರಡನ್ನು ಭಾರತ ಗೆದ್ದು ಮುನ್ನಡೆ ಸಾಧಿಸಿತ್ತು.

ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಭಾರತಕ್ಕೆ ಅಭಿಷೇಕ್ ಶರ್ಮಾ (ಔಟಾಗದೇ 23, 13 ಎಸೆತ) ಮತ್ತು ಉಪ ನಾಯಕ ಶುಭಮನ್ ಗಿಲ್ (ಔಟಾಗದೇ 29, 16 ಎಸೆತ) ಅವರು ಮಿಂಚಿನ ಆರಂಭ ಒದಗಿಸಿದ್ದರು. ತಂಡ 4.5 ಓವರುಗಳಲ್ಲಿ ವಿಕೆಟ್ ಕಳೆದುಕೊಳ್ಳದೇ 52 ರನ್ ಗಳಿಸಿದ್ದ ಮಿಂಚು ಸಹಿತ ಮಳೆ ಆರಂಭವಾಯಿತು.

ಎಡಗೈ ಬ್ಯಾಟರ್ ಅಭಿಷೇಕ್ ಅವರಿಗೆ ಅದೃಷ್ಟದ ಆಸರೆಯೂ ಇತ್ತು. ಮೊದಲ ಓವರಿನಲ್ಲೇ ಸುಲಭ ಕ್ಯಾಚ್ ಬಿಟ್ಟು ಗ್ಲೆನ್ ಮ್ಯಾಕ್ಸ್ವೆಲ್ ಜೀವದಾನ ನೀಡಿದ್ದರು. 11 ರನ್ ಗಳಿಸಿದ್ದಾಗ (ನಾಲ್ಕನೇ ಓವರ್ನಲ್ಲಿ) ಬೆನ್ ದ್ವಾರ್ಷಿಯಸ್ ಸಹ ನೇರವಾಗಿ ಬಂದ ಕ್ಯಾಚ್ ನೆಲಕ್ಕೆ ಚೆಲ್ಲಿದರು. ಮೂರು ಎಸೆತಗಳ ನಂತರ ಅವರು ಸಿಕ್ಸರ್ ಬಾರಿಸಿ ಪ್ರೇಕ್ಷಕರಲ್ಲಿ ಹರ್ಷೋದ್ಗಾರ ಮೂಡಿಸಿದರು.

ಎಡಗೈ ವೇಗಿ ದ್ವಾರ್ಷಿಯಸ್ ಅವರ ಒಂದೇ ಓವರಿನಲ್ಲಿ ಗಿಲ್ ಮೂರು ಬೌಂಡರಿಗಳನ್ನು ಬಾರಿಸಿದರು.

ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಈ ಸರಣಿಗೆ ಮೊದಲು ನಡೆದ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2–1 ರಿಂದ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.