ಯಾದಗಿರಿ: ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆ, ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಳು ನಾಲ್ಕು ವರ್ಷಗಳಾದರೂ ಪೂರ್ಣ ಆಗುತ್ತಿಲ್ಲ. ಇದರಿಂದಾಗಿ ಸೌಲಭ್ಯಗಳಿಲ್ಲದೇ ನರಳುವ ಮಕ್ಕಳು, ಶಾಲೆಯತ್ತ ಮುಖ ಮಾಡದಂತಹ ವಾತಾವರಣ ಸೃಷ್ಟಿಯಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಆರಂಭವಾಗಿರುವ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ, ಹೊಸ ಶಾಲಾ ಕಟ್ಟಡದ ಕಾಮಗಾರಿಗಳು ಇದುವರೆಗೂ ಪೂರ್ಣವಾಗಿಲ್ಲ. ಇತ್ತೀಚೆಗೆ ನಡೆದ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿಯೇ ಈ ಮಾಹಿತಿ ಬಹಿರಂಗವಾಗಿದೆ.

2008-09ರಲ್ಲಿ ಮಂಜೂರಾದ 240 ಹೆಚ್ಚುವರಿ ಕೋಣೆಗಳಲ್ಲಿ, ಇದುವರೆಗೂ 218 ಕೋಣೆಗಳು ಪೂರ್ಣಗೊಂಡಿದ್ದರು, ಇನ್ನೂ 22 ಕೋಣೆಗಳು ವಿವಿಧ ಹಂತದಲ್ಲಿವೆ. ಎರಡು ಕೋಣೆಗಳ ನಿರ್ಮಾಣವಂತೂ ಇನ್ನೂ ಆರಂಭವೇ ಆಗಿಲ್ಲ. ಇದೇ ವರ್ಷ ಆರಂಭವಾದ 26 ಹೊಸ ಶಾಲಾ ಕಟ್ಟಡ ನಿರ್ಮಾಣವೂ ಈವರೆಗೆ ಪೂರ್ಣಗೊಂಡಿಲ್ಲ. ಕೇವಲ 20 ಶಾಲಾ ಕಟ್ಟಡಗಳು ಪೂರ್ಣಗೊಂಡಿದ್ದು, ಉಳಿದ 6 ಕಟ್ಟಡಗಳು ವಿವಿಧ ಹಂತದಲ್ಲಿವೆ ಎಂಬ ಮಾಹಿತಿಯನ್ನು ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳೇ ನೀಡುತ್ತಿದ್ದಾರೆ.

2009-10 ರಲ್ಲಿ ಆರಂಭಿಸಲಾದ 103 ಹೆಚ್ಚುವರಿ ಶಾಲಾ ಕೊಠಡಿಗಳಲ್ಲಿ ಈವರೆಗೆ ಕೇವಲ 68 ಕೋಣೆಗಳು ಪೂರ್ಣವಾಗಿವೆ. ಇನ್ನೂ 35 ಕೋಣೆಗಳು ನಿರ್ಮಾಣ ಆಗಿಲ್ಲ. ಈ ವರ್ಷದ 13 ಹೊಸ ಶಾಲಾ ಕಟ್ಟಡಗಳಲ್ಲಿ ಕೇವಲ 6 ಮಾತ್ರ ಪೂರ್ಣವಾಗಿದ್ದು, ಇನ್ನೂ ಏಳು ಕಟ್ಟಡಗಳು ವಿವಿಧ ಹಂತದಲ್ಲಿವೆ. 2010-11 ರಲ್ಲಿ ಮಂಜೂರಾದ 181 ಹೆಚ್ಚುವರಿ ಶಾಲಾ ಕೋಣೆಗಳ ಪೈಕಿ, 9 ಮಾತ್ರ ಪೂರ್ಣಗೊಂಡಿವೆ.

ಇನ್ನುಳಿದ 172 ಕೋಣೆಗಳಲ್ಲಿ 63ಕ್ಕೆ ಇದೀಗ ಅಡಿಪಾಯ ಹಾಕಲಾಗಿದೆ. ಇನ್ನೂ 9 ಕೋಣೆಗಳ ಕಾಮಗಾರಿ ಆರಂಭವೇ ಆಗಿಲ್ಲ. ಈ ವರ್ಷದ ಹೊಸ ಕಟ್ಟಡಗಳ ಸ್ಥಿತಿಯಂತೂ ಇನ್ನೂ ಗಂಭೀರವಾಗಿದೆ. ಮಂಜೂರಾದ ನಾಲ್ಕು ಕಟ್ಟಡಗಳಲ್ಲಿ ಇದುವರೆಗೆ ಒಂದೂ ಕಟ್ಟಡ ಪೂರ್ಣವಾಗಿಲ್ಲ. ಒಂದು ಕಟ್ಟಡವನ್ನು ಇನ್ನೂ ಆರಂಭಿಸಿಯೂ ಇಲ್ಲ.
2010-11 ರಲ್ಲಿ ಮುಖ್ಯಾಧ್ಯಾಪಕರಿಗಾಗಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲು 124 ಕೋಣೆಗಳು ಮಂಜೂರಾಗಿವೆ.

ಅದರಲ್ಲಿ ಕೇವಲ 21 ಕೋಣೆಗಳು ಮಾತ್ರ ಪೂರ್ಣಗೊಂಡಿವೆ. ಇನ್ನುಳಿದ 103 ಕೋಣೆಗಳಲ್ಲಿ 6 ಕೋಣೆಗಳ ಕಾಮಗಾರಿ ಇದುವರೆಗೆ ಆರಂಭವೂ ಆಗಿಲ್ಲ. 6 ನೇ ತರಗತಿಗೆ ಮೇಲ್ದರ್ಜೆಗೆ ಏರಿಸಿದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 64 ಕೋಣೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಅದರಲ್ಲಿ ಕೇವಲ 10 ಕೋಣೆಗಳು ಪೂರ್ಣವಾಗಿದ್ದು, ಇನ್ನೂ 10 ಕೋಣೆಗಳ ಕಾಮಗಾರಿಯನ್ನು ಆರಂಭಿಸಿಲ್ಲ.

ಇನ್ನು 2011-12 ರಲ್ಲಿ 124 ಹೆಚ್ಚುವರಿ ಕೋಣೆ, 9 ಮುಖ್ಯಾಧ್ಯಾಪಕರ ಕೋಣೆ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದರೂ, ಇದುವರೆಗೆ ಯಾವುದೇ ಕಾಮಗಾರಿ ಆರಂಭವೇ ಆಗಿಲ್ಲ.

ಈ ವರ್ಷವೂ 18 ಕೋಟಿಯ ಪ್ರಸ್ತಾವನೆ: ಹಿಂದಿನ ವರ್ಷಗಳ ಕಟ್ಟಡಗಳೇ ಪೂರ್ಣಗೊಳ್ಳದೇ ಇದ್ದರೂ, ಈ ಬಾರಿಯೂ ಸುಮಾರು 18.54 ಕೋಟಿ ವೆಚ್ಚದಲ್ಲಿ ವಿವಿಧ ಶಾಲಾ ಕೋಣೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಾಲ್ಕು ಹೊಸ ಶಾಲಾ ಕಟ್ಟಡ, 225 ಹೆಚ್ಚುವರಿ ಶಾಲಾ ಕೋಣೆ, 104 ಮುಖ್ಯಾಧ್ಯಾಪಕರ ಕೋಣೆ, 9 ಪ್ರಾಥಮಿಕ ಶಾಲೆಗಳ ದೊಡ್ಡ ದುರಸ್ತಿ, 47 ಹಿರಿಯ ಪ್ರಾಥಮಿಕ ಶಾಲೆಗಳ ದೊಡ್ಡ ದುರಸ್ತಿ ಕಾಮಗಾರಿಗಳಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಒಂದೆಡೆ ಹಿಂದಿನ ವರ್ಷದ ಕಾಮಗಾರಿಗಳೇ ಪೂರ್ಣಗೊಳ್ಳುತ್ತಿಲ್ಲ. ಅದಾಗ್ಯೂ ಪ್ರತಿ ವರ್ಷ ಕಾಮಗಾರಿ ಆರಂಭಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಮಂಜೂರಾತಿ ಪಡೆಯಲಾಗುತ್ತಿದೆ. ಮಂಜೂರಾದ ಶಾಲಾ ಕಟ್ಟಡಗಳಾಗಲಿ, ಹೆಚ್ಚುವರಿ ಕೋಣೆಗಳಾಗಲಿ, ನಿಗದಿ ಅವಧಿಯಲ್ಲಿ ಪೂರ್ಣಗೊಳಿಸುವ ಪ್ರಯತ್ನವನ್ನು ಇಲಾಖೆಯ ಅಧಿಕಾರಿಗಳು ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಟ್ಟಡಗಳ ನಿರ್ಮಾಣಕ್ಕೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದರೆ, ನಿವೇಶನ ಸಮಸ್ಯೆ, ಇತ್ಯಾದಿಗಳನ್ನು ಮುಂದಿಡಲಾಗುತ್ತಿದ್ದು, ನಿವೇಶನ ಸಮಸ್ಯೆ ಇರುವಲ್ಲಿ ಆಯಾ ಭಾಗದ ಜನಪ್ರತಿನಿಧಿಗಳ ಸಹಕಾರ ಪಡೆಯುವಂತೆ ಕೋರಿದರೂ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದರಿಂದಾಗಿ ಬಹುತೇಕ ಮಕ್ಕಳು ಕುಳಿತುಕೊಳ್ಳಲು ಒಳ್ಳೆಯ ಕೋಣೆಗಳಿಲ್ಲದೇ, ತೊಂದರೆ ಅನುಭವಿಸುವುದು ಮಾತ್ರ ತಪ್ಪುತ್ತಿಲ್ಲ. ಒಂದೇ ಕೋಣೆಯಲ್ಲಿ ನಾಲ್ಕು ತರಗತಿಗಳನ್ನು ನಡೆಸುತ್ತಿರುವ ಚಿತ್ರಣಗಳು ಸಾಮಾನ್ಯವಾಗುತ್ತಿವೆ. ಇನ್ನಾದರೂ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪಾಲಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.