ಕೈರೊ: ಒಲಿಂಪಿಯನ್ ಗುರ್ಪ್ರೀತ್ ಸಿಂಗ್ ಅವರು ಸೋಮವಾರ ಮುಕ್ತಾಯಗೊಂಡ ಐಎಸ್ಎಸ್ಎಫ್ ಶೂಟಿಂಗ್ ವಿಶ್ವ ಚಾಂಪಿಯನ್ಷಿಪ್ಸ್ನ ಪುರುಷರ 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.

ಅದರೊಂದಿಗೆ, 13 ಪದಕಗಳನ್ನು (3 ಚಿನ್ನ, 6 ಬೆಳ್ಳಿ, 4 ಕಂಚು) ಗೆದ್ದ ಭಾರತ ತಂಡವು ಪದಕಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. 21 ಪದಕ (12 ಚಿನ್ನ, 7 ಬೆಳ್ಳಿ, 2 ಕಂಚು) ಗೆದ್ದ ಚೀನಾ ಅಗ್ರಸ್ಥಾನ ಗಳಿಸಿದರೆ, ಕೊರಿಯಾ 14 ಪದಕಗಳೊಂದಿಗೆ (7 ಚಿನ್ನ, 3 ಬೆಳ್ಳಿ, 4 ಕಂಚು) ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು.

ಗುರ್ಪ್ರೀತ್ ಅವರು ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ 584 ಪಾಯಿಂಟ್ಸ್ (ಪ್ರಿಸಿಷನ್: 288, ರ್ಯಾಪಿಡ್: 296) ಸಂಪಾದಿಸಿದರು. ಇಷ್ಟೇ ಅಂಕ (ಪ್ರಿಸಿಷನ್: 291, ರ್ಯಾಪಿಡ್: 293) ಪಡೆದಿದ್ದ ಉಕ್ರೇನ್ನ ಪಾವ್ಲೊ ಕರೊಸ್ಟಿಲೊವ್ ಸ್ವರ್ಣ ತಮ್ಮದಾಗಿಸಿಕೊಂಡರು.

ಫ್ರಾನ್ಸ್ನ ಫ್ರೆಡ್ರಿಕಿ ಯಾನ್ ಪಿಯರ್ ಲೂಯಿಸ್ (583 ಪಾಯಿಂಟ್ಸ್) ಕಂಚು ಗೆದ್ದರು.

ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಶೂಟರ್ ಹರ್ಪ್ರೀತ್ ಸಿಂಗ್ (577 ಪಾಯಿಂಟ್ಸ್) ಒಂಬತ್ತನೇ ಸ್ಥಾನ ಪಡೆಯುವುದರೊಂದಿಗೆ ಪದಕ ತಪ್ಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.