ಶುಕ್ರವಾರ, ಮೇ 7, 2021
26 °C

407 ಪ್ರಕರಣ: ರೂ 4.68 ಕೋಟಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ದಕ್ಷಿಣ ವಿಭಾಗದ ಪೊಲೀಸರು 10 ಕೆ.ಜಿ. ಚಿನ್ನಾಭರಣ ಸೇರಿದಂತೆ ್ಙ 4.68 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.`ಸಿಬ್ಬಂದಿ ಮೂರು ತಿಂಗಳ ಅವಧಿಯಲ್ಲಿ 407 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ, 184 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 67 ಲಕ್ಷ ನಗದು, 10 ಕೆ.ಜಿ ಚಿನ್ನಾಭರಣ, ಹತ್ತೂವರೆ ಕೆ.ಜಿ ಬೆಳ್ಳಿ ಆಭರಣಗಳು, 179 ಬೈಕ್‌ಗಳು ಹಾಗೂ ಇತರೆ ವಾಹನಗಳನ್ನು ಜಪ್ತಿ ಮಾಡಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪಾರಿವಾಳ ಹಿಡಿಯುವ ನೆಪದಲ್ಲಿ ಕಳವು: ಪಾರಿವಾಳ ಹಿಡಿಯುವ ನೆಪದಲ್ಲಿ ಮಹಡಿಗೆ ತೆರಳಿ ಮನೆ ಬೀಗ ಮುರಿದು ಕಳವು ಮಾಡುತ್ತಿದ್ದ ಮಂಜುನಾಥ ಅಲಿಯಾಸ್ ಪಾರಿವಾಳ ಮಂಜ (27) ಎಂಬಾತನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.ಕೋರಮಂಗಲ ನಿವಾಸಿಯಾದ ಮಂಜುನಾಥ, ಮಹಡಿಯಲ್ಲಿರುವ ಮನೆಗಳಿಗೆ ತೆರಳಿ ಕಳವು ಮಾಡಲು ಸಂಚು ರೂಪಿಸುತ್ತಿದ್ದ. ಈ ವೇಳೆ ಯಾರಾದರೂ ಬಂದು ವಿಚಾರಿಸಿದರೆ, `ತಾನು ಪಾರಿವಾಳ ಸಾಕಿದ್ದು, ಒಂದು ಪಾರಿವಾಳ ಹಾರಿ ಮಹಡಿಗೆ ಬಂದಿದೆ. ಅದನ್ನು ಹಿಡಿದುಕೊಂಡು ಹೋಗಲು ಬಂದಿದ್ದೇನೆ' ಎಂದು ಹೇಳುತ್ತಿದ್ದ. ಯಾರೂ ಹೊರಗೆ ಬರದಿದ್ದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ. ಆರೋಪಿ ಈ ಹಿಂದೆ ಸಹ ಹಲಸೂರು ಗೇಟ್, ವಿಲ್ಸನ್ ಗಾರ್ಡನ್, ಕಮರ್ಷಿಯಲ್ ಸ್ಟ್ರೀಟ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದ. ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದ ಆತ, ಕೃತ್ಯವನ್ನು ಮುಂದುವರಿಸಿದ್ದ. ಆತನ ಬಂಧನದಿಂದ 19 ಕಳವು ಪ್ರಕರಣಗಳು ಪತ್ತೆಯಾಗಿದ್ದು, ್ಙ30 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.ಕುಖ್ಯಾತ ದಂಪತಿ ಬಂಧನ: ಪೇಪರ್ ಆಯುವ ಸೋಗಿನಲ್ಲಿ ಮನೆಗಳಲ್ಲಿ ಕಳವು ಮಾಡುತ್ತಿದ್ದ ವೆಂಕಟೇಶ್ (28) ಮತ್ತು ಗಾಯಿತ್ರಿ (22) ಎಂಬ ದಂಪತಿಯನ್ನು ಬಂಧಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು, 11.37 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಇಟ್ಟಮಡು ನಿವಾಸಿಗಳಾದ ದಂಪತಿ, ಬೆಳಗಿನ ವೇಳೆ ರಸ್ತೆಗಳಲ್ಲಿ ಪೇಪರ್ ಆಯುವವರಂತೆ ನಟಿಸಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬಳಿಕ ಆಯಾಸಗೊಂಡವರಂತೆ ಆ ಮನೆ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದರು. ನಂತರ ನೀರು ಕೇಳುವ ನೆಪದಲ್ಲಿ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಯಾರೂ ಬಾಗಿಲು ತೆಗೆಯದಿದ್ದರೆ, ಲಾಕ್ ಮುರಿದು ಒಳನುಗ್ಗಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.ಆರೋಪಿಗಳ ಬಂಧನದಿಂದ ಸುಬ್ರಮಣ್ಯಪುರ, ಚನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸುಮಾರು 11 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.