ಬುಧವಾರ, ಜನವರಿ 22, 2020
22 °C

41 ಬಾಲ ಕಾರ್ಮಿಕರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಲ್ಮಿಕಿನಗರ, ಆಜಾದ್‌­ನಗರ ಹಾಗೂ ಟಿಪ್ಪುನಗರದ ಶಾಲಾ ಬ್ಯಾಗ್‌ ತಯಾರಿಕಾ ಘಟಕಗಳ ಮೇಲೆ ಬುಧವಾರ ದಾಳಿ ನಡೆಸಿದ ಚಾಮರಾಜ­ಪೇಟೆ ಪೊಲೀಸರು 41 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.ಬ್ಯಾಗ್‌ ತಯಾರಿಕಾ ಘಟಕದಲ್ಲಿ ಮಕ್ಕಳು ದುಡಿಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.ಕಾರ್ಯಾಚರಣೆ ನಡೆಸಿ ಬಿಹಾರ, ಪಶ್ಚಿಮಬಂಗಾಳ ಹಾಗೂ ಒಡಿಶಾ ಮೂಲದ 10 ರಿಂದ 15ರ ವಯೋ­ಮಾನದ 41 ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳನ್ನು ಸಮೀಪದ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)