ಮುಂಬೈ, (ಪಿಟಿಐ): ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮಂಗಳವಾರ 69ನೇ ಹುಟ್ಟುಹಬ್ಬ ಆಚರಿಸಿಕೊಂಡರು.

`ಯುವ ಕಲಾವಿದರೊಂದಿಗೆ ಕೆಲಸ ಮಾಡುವಾಗ ಕೆಲವೊಮ್ಮೆ ನನಗೆ ಅಪರಿಚಿತ ಭಾವ ಮೂಡುತ್ತದೆ~ ಎಂದು ಬಾಲಿವುಡ್ನಲ್ಲಿ 40 ವರ್ಷಗಳನ್ನು ಪೂರೈಸಿರುವ ಅಮಿತಾಭ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

`ಇಂದಿನ ನಟರಿಗೆ ಹೋಲಿಸಿದರೆ ನಾನು ವಯಸ್ಸಾದವನು. ಸೆಟ್ಗಳಿಗೆ ಹೋದಾಗ ಅಲ್ಲಿ 25- 30 ವರ್ಷದವರೇ ಹೆಚ್ಚಾಗಿ ಕಾಣುತ್ತಾರೆ. ನನಗೂ ಅವರಿಗೂ 30- 40 ವರ್ಷಗಳ ಅಂತರ ಇರುವುದರಿಂದ ಅಂತಹ ಭಾವನೆ ನನ್ನಲ್ಲಿ ಉಂಟಾಗುತ್ತಿರಬಹುದು. ಆದರೆ ಅವರ ಹುಮ್ಮಸ್ಸನ್ನು ನಾನು ಇಷ್ಟಪಡುತ್ತೇನೆ~ ಎಂದು ತಮ್ಮ ಜುಹೂ ನಿವಾಸದ ಹೊರಗೆ ಮಂಗಳವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಮನೆಯ ಬಳಿ ನೆರೆದಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅಮಿತಾಭ್, `ನಮ್ಮ ಹಿಂದಿ ಚಿತ್ರರಂಗ ಪ್ರಗತಿ ಕಾಣುತ್ತಿದೆ. ಇಂದಿನ ಕಲಾವಿದರು ಅತ್ಯಂತ ಪ್ರತಿಭಾನ್ವಿತರು. ಅವರಿಂದ ಮುಂದೆಯೂ ನಾನು ಕಲಿಯುತ್ತಾ ಹೋಗುತ್ತೇನೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಝಂಜೀರ್~ನ ಆ್ಯಂಗ್ರಿ ಯಂಗ್ ಮ್ಯಾನ್ ಪಾತ್ರದಿಂದ ಹಿಡಿದು `ದೀವಾರ್~, `ಅಗ್ನಿಪಥ್~, `ಶೋಲೆ~, `ಬ್ಲ್ಯಾಕ್~, `ಪಾ~, `ಆರಕ್ಷಣ್~ನಂತಹ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಅಮಿತಾಭ್, ಇಂದಿಗೂ ಚಲನಚಿತ್ರಗಳ ಬಾಕ್ಸ್ ಆಫೀಸ್ನಲ್ಲಿ ಗೆಲ್ಲುವ ಕುದುರೆ.

ಮಾತ್ರವಲ್ಲದೆ, ರಿಯಾಲಿಟಿ ಶೋ `ಕೌನ್ ಬನೇಗ ಕರೋಡ್ಪತಿ~ ಯ ಐದನೇ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕಿರುತೆರೆಯಲ್ಲೂ ಜನಪ್ರಿಯ ನಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.