ಬುಧವಾರ, ಜನವರಿ 29, 2020
23 °C
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ

70 ಸಾವಿರ ವಿದ್ಯಾರ್ಥಿಗಳಿಂದ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

70 ಸಾವಿರ ವಿದ್ಯಾರ್ಥಿಗಳಿಂದ ಯೋಗ

ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 26 ಸಾವಿರ ಹಾಗೂ ಉಡುಪಿ ಜಿಲ್ಲೆಯಲ್ಲಿ 44 ಸಾವಿರ­ಕ್ಕೂ ಅಧಿಕ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಏಕ ಕಾಲಕ್ಕೆ ಅರ್ಧ ಗಂಟೆ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನೆಸ್‌ ದಾಖಲೆಯಲ್ಲಿ ಸ್ಥಾನ ಗಳಿಸಿಕೊಳ್ಳುವ ವಿನೂತನ ಪ್ರಯತ್ನ ನಡೆಸಿದರು.ಧರ್ಮ­ಸ್ಥಳದ ಶಾಂತಿವನ ಟ್ರಸ್ಟ್‌ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಪ್ರಯತ್ನ ಹಳೆಯ ದಾಖಲೆಗಳನ್ನೆಲ್ಲ ಅಳಿಸಿ ಹಾಕಿತು.2003ರಲ್ಲಿ ಜರ್ಮನಿಯಲ್ಲಿ ಏಕಕಾಲದಲ್ಲಿ 15 ಸಾವಿರ ಮಂದಿ ಯೋಗಾಸನ ಪ್ರಾತ್ಯಕ್ಷಿಕೆ ನಡೆಸಿದ್ದರು. 2005ರಲ್ಲಿ ಗ್ವಾಲಿಯರ್‌ನಲ್ಲಿ 29 ಸಾವಿರ ಮಂದಿ ಏಕಕಾಲದಲ್ಲಿ­ ಯೋಗಾಸನಗಳನ್ನು ಪ್ರದರ್ಶಿಸಿದ್ದುದು ಗಿನ್ನೆಸ್‌ ವಿಶ್ವ ದಾಖಲೆಯಾಗಿತ್ತು. ‘ಭವಿಷ್ಯತ್ತಿ­ಗಾಗಿ ಯೋಗ’ ಎಂಬ ಧ್ಯೇಯ­ವಾಕ್ಯದೊಂದಿಗೆ ಈ ಯೋಗಾ­ಭ್ಯಾಸ ನಡೆಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ 10 ವಿದ್ಯಾಸಂಸ್ಥೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯ 39 ವಿದ್ಯಾಸಂಸ್ಥೆಗಳಲ್ಲಿ ಯೋಗ ಪ್ರದರ್ಶನ ನಡೆಯಿತು.1500ಕ್ಕೂ ಅಧಿಕ ಮೇಲ್ವಿಚಾರ­ಕರು, 100 ಅಧಿಕ ಯೋಗ ಗುರು­ಗಳು, 10ಕ್ಕೂ ಅಧಿಕ ಉದ್ಘೋಷಕರು ಯೋಗಾ­ಸ­ನಗಳನ್ನು ಪ್ರದರ್ಶಿಸುವುದಕ್ಕೆ ನೆರವಾದರು. ಈ ಅಪೂರ್ವ ದೃಶ್ಯ­ವನ್ನು 150ಕ್ಕೂ ಅಧಿಕ ವಿಡಿಯೊ ಕ್ಯಾಮೆರಾ­ಗಳ ಮೂಲಕ ಸೆರೆ ಹಿಡಿ­ಯಲಾಯಿತು.ಪ್ರತಿ ಕೇಂದ್ರಗಳಲ್ಲಿ ಮೂರು ವಿಡಿಯೊ ಕ್ಯಾಮೆರಾಗಳು ಹಾಗೂ ಎರಡು ಸ್ಟಿಲ್‌ ಕ್ಯಾಮೆರಾ­ಗಳನ್ನು ಬಳಸಲಾಯಿತು. ದಾಖಲೆ­ಗಳನ್ನು ಗಿನ್ನೆಸ್‌ ಸಂಸ್ಥೆಗೆ ಕಳುಹಿಸಿ­ಕೊಟ್ಟು ಅಲ್ಲಿ ಕೂಲಂಕಷವಾಗಿ ಪರಿ­ಶೀಲಿ­ಸಿದ ಬಳಿಕವಷ್ಟೇ ದಾಖಲೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)