ಶುಕ್ರವಾರ, ಜೂನ್ 18, 2021
28 °C
ಕಾಂಗ್ರೆಸ್‌ನಿಂದ ಮೀರಾ, ಮನೀಶ್‌ ಕಣಕ್ಕೆ

80–90 ಅಭ್ಯರ್ಥಿಗಳು ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಸಭಾಧ್ಯಕ್ಷೆ ಮೀರಾ ಕುಮಾರ್‌, ಕೇಂದ್ರ ಸಚಿವ ಮನೀಶ್ ತಿವಾರಿ, ದೀಪೇಂದ್ರ ಹೂಡಾ, ನವೀನ್‌ ಜಿಂದಾಲ್‌ ಸೇರಿದಂತೆ 80–90 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಶುಕ್ರವಾರ ಅಂತಿಮಗೊಳಿಸಿದೆ.ಕಾಂಗ್ರೆಸ್‌ನ ಹಿರಿಯ ನಾಯಕ ಪವನ್‌ ಕುಮಾರ್‌ ಬನ್ಸಾಲ್‌ ಅವರಿಗೂ ಟಿಕೆಟ್‌ ದೊರೆಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.ಬಿಹಾರದಲ್ಲಿ ಲಾಲು  ನೇತೃತ್ವದ ಆರ್‌ಜೆಡಿ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿ­ಕೊಂಡಿದ್ದು ಅಲ್ಲಿನ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳೂ ಅಂತಿಮ­ವಾಗಿವೆ.ಚಿತ್ರನಟಿ ಜಯಪ್ರದಾ ಅವರಿಗೆ ಮೊರಾದಾಬಾದ್‌ನಿಂದ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವರಾದ ಸಲ್ಮಾನ್‌ ಖುರ್ಷಿದ್‌, ವೇಣಿ ಪ್ರಸಾದ್‌ ವರ್ಮಾ, ಶ್ರೀಪ್ರಕಾಶ್‌ ಜೈಸ್ವಾಲ್‌, ಜಿತಿನ್‌ ಪ್ರಸಾದ್ ಮತ್ತು ಆರ್‌.ಪಿ.ಎನ್‌. ಸಿಂಗ್‌ ಅವರಿಗೆ  ಅವರು ಈಗ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಂದಲೇ ಮತ್ತೆ ಟಿಕೆಟ್‌ ದೊರೆಯಲಿದೆ ಎನ್ನಲಾಗಿದೆ.  ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಮಿಲಿಂದ್ ದೇವ್ರಾ, ಪ್ರಿಯಾ ದತ್‌, ಗುರುದಾಸ್‌ ಕಾಮತ್‌ ಮುಂತಾದ ನಾಯಕರು ಮಹಾರಾಷ್ಟ್ರದಿಂದ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.