ಶುಕ್ರವಾರ, ಮೇ 7, 2021
22 °C

81 ಆಶ್ರಯ ನಿವೇಶನ ಮಂಜೂರು ಆದೇಶ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಸರ್ಕಾರದಿಂದ ಮಂಜೂರಾದ ಆಶ್ರಯ ನಿವೇಶನಗಳನ್ನು ಬೇರೆಯವರಿಗೆ ಪರಭಾರೆ ಮಾಡಿರುವುದು, ಮಂಜೂರಾದ ನಿವೇಶನಗಳನ್ನು ಬಳಕೆ ಮಾಡದೆ ಖಾಲಿ ಬಿಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿ ವಲಯದ ಮಾರ್ಪಾಡಿ ಗ್ರಾಮದ 81 ನಿವೇಶನಗಳ ಮಂಜೂರಾತಿ ಆದೇಶವನ್ನು ಮೂಡುಬಿದಿರೆ ತಹಸೀಲ್ದಾರ್ ಮುರಳೀಧರ್ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದ್ದಾರೆ.ಮಂಗಳೂರು ತಹಸೀಲ್ದಾರ್ ಅವರ 2001-02ರ ವರದಿ ಆಧಾರದಲ್ಲಿ ಮಾರ್ಪಾಡಿ ಗ್ರಾಮದ ಅಲಂಗಾರು ಐದು ಸೆಂಟ್ಸ್‌ನಲ್ಲಿ ತಲಾ ಐದು ಸೆಂಟ್ಸ್‌ನಂತೆ ಅನೇಕ ನಿವೇಶನಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಜಾಗದಲ್ಲಿ ಕೆಲವರು ಮನೆ ಕಟ್ಟ ಕುಳಿತರೆ ಉಳಿದಂತೆ ಮೂಲ ಫಲಾನುಭವಿಗಳು ಅದನ್ನು ಬೇರೆಯವರಿಗೆ ಕಾನೂನುಬಾಹಿರವಾಗಿ ಪರಭಾರೆ ಮಾಡಿದ್ದರು.ಇಂತಹ 41 ಪ್ರಕರಣಗಳು ಪತ್ತೆಯಾದರೆ, ನಿವೇಶನ ಪಡೆದುಕೊಂಡರೂ ಅದರಲ್ಲಿ ಮನೆ ಕಟ್ಟದೆ ಖಾಲಿ ಬಿಟ್ಟ 37 ಪ್ರಕರಣಗಳು ಹಾಗೂ ಮೂಲ ಫಲಾನುಭವಿಗಳಿಂದ ಪರಭಾರೆಯಾಗಿಯೂ ಮನೆಕಟ್ಟದೆ ಖಾಲಿ ಇರುವ 3 ಪ್ರಕರಣಗಳು ಪತ್ತೆಯಾಗಿವೆ.ಮೂಡುಬಿದಿರೆ ತಹಸೀಲ್ದಾರ್ 2007ರಂದು ನಡೆಸಿದ ತನಿಖೆಯಂತೆ ಮನೆಕಟ್ಟದೆ ಖಾಲಿಯಿರುವ ಹಾಗೂ ಕಾನೂನು ಬಾಹಿರವಾಗಿ ಪರಭಾರೆಯಾದ ನಿವೇಶನ ಸೇರಿದಂತೆ ಒಟ್ಟು 81 ನಿವೇಶನಗಳನ್ನು ಪತ್ತೆ ಹಚ್ಚಿ  ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.ಮಾರ್ಪಾಡಿಯ ಅಲಂಗಾರಿನಲ್ಲಿರುವ ಆಶ್ರಯ ನಿವೇಶನಗಳ ದುರುಪಯೋಗದ ಬಗ್ಗೆ ಇತ್ತೀಚೆಗೆ ತಹಸೀಲ್ದಾರ್ ತನಿಖೆಗೆ ಸ್ಥಳಕ್ಕೆ ಹೋದಾಗ ಮೂಲ ಫಲಾನುಭವಿಗಳಲ್ಲದವರು ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.