ಸೋಮವಾರ, ಆಗಸ್ಟ್ 2, 2021
26 °C

9/11ರ ಕಹಿ ಘಟನೆ ನೆನಪು ಇಷ್ಟವಿಲ್ಲ: ಹೇಮಂತ್ ತಂದೆ ನೋವಿನ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ’ಎಲ್ಲವೂ ವಿಧಿಯಾಟ. ನಾನು ಆ ಘಟನೆಯನ್ನೇ ಮರೆತಿದ್ದೇನೆ. ಮರೆತು ಹೋದದ್ದನ್ನು ಮತ್ತೆ ಕೆಣಕಿ ನೆನಪಿಸಿಕೊಳ್ಳಲು ಇಷ್ಟವಿಲ್ಲ’...2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಇಫ್ರೋ ಸಂಸ್ಥೆ ಸಾಫ್ಟ್‌ವೇರ್ ಎಂಜಿನಿಯರ್ ಹೇಮಂತ್ ಕುಮಾರ್ ಅವರ ತಂದೆ ಪುತ್ತೂರಿನ ಆನಂದ ಟೈಲರ್ ಅವರ ಬಾಯಿಂದ ಹೊರಬಂದ ನೋವಿನ ನುಡಿ ಇದೆ.ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಯ• ಸಾವಿಗೆ ಕಾರಣನಾಗಿದ್ದ  ಆರೋಪಿ ಒಸಾಮ ಬಿನ್ ಲಾಡೆನ್ ಸಾವಿನ ಸುದ್ದಿ ಹೊರಬಿದ್ದ ನಂತರ ಮಾತಿಗೆಳೆದಾಗ ಅವರು ಪ್ರತಿಕ್ರಿಯಿಸಿದ್ದಿಷ್ಟು.’ಯಾರು ಸತ್ತರೂ ನನ್ನ ಮಗ ಇನ್ನು ಬದುಕಿ ಬರಲಾರ. ಮೆರೆತು ಹೋದ ಕಹಿ ಘಟನೆಯನ್ನು ಮತ್ತೆ ಕೆದಕಲು ಬಯಸುವುದಿಲ್ಲ. ಲಾಡೆನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲೂ ಇಷ್ಟಪಡುವುದಿಲ್ಲ’ ಎಂದು ಮಾತು ಮುಗಿಸಿದರು.

ಆದರೆ, ಈಗಲೂ ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವ ಆನಂದ ಟೈಲರ್, ಪುತ್ತೂರಿನ ಬಲ್ಲವ ಸಭಾಭವನ ಬಳಿ ಸ್ಮಾರಕ ಭವನ ಮತ್ತು ಮುಖ್ಯರಸ್ತೆಯ ಎರಡೂ ಕಡೆ ಸ್ವಾಗತ ಕಮಾನು ನಿರ್ಮಿಸಿ ಹೇಮಂತ್ ಕುಮಾರ್ ನೆನಪನ್ನು ಚಿರಕಾಲ ಉಳಿಸಲು ಯತ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.