ಶನಿವಾರ, ಸೆಪ್ಟೆಂಬರ್ 21, 2019
21 °C

9/11: ಚೀನಾ ಮಾಧ್ಯಮಗಳ ಕೇಂದ್ರಬಿಂದು

Published:
Updated:

ಬೀಜಿಂಗ್ (ಐಎಎನ್‌ಎಸ್): ನ್ಯೂಯಾರ್ಕ್ ಅವಳಿ ವಾಣಿಜ್ಯ ಕಟ್ಟಡದ ಮೇಲೆ ಉಗ್ರರು ನಡೆಸಿದ ದಾಳಿಗೆ ಭಾನುವಾರ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ಪತ್ರಿಕೆಗಳು ಇದೇ ವಿಷಯದ ಮೇಲಿನ ಲೇಖನಗಳನ್ನು ಪ್ರಮುಖವಾಗಿ ಪ್ರಕಟಿಸಿದ್ದವು.ಉಗ್ರರ ಕೃತ್ಯಗಳನ್ನು ಖಂಡಿಸಿರುವ `ಪೀಪಲ್ಸ್ ಡೈಲಿ~ ಪತ್ರಿಕೆಯು ಈ ಸಂಬಂಧ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಯುರೋಪಿಯನ್ ಒಕ್ಕೂಟ ಮತ್ತು ಪಾಕ್ ಪ್ರತಿಕ್ರಿಯೆಗಳನ್ನು ಮುದ್ರಿಸಿದ್ದರೆ `ಬೀಜಿಂಗ್ ನ್ಯೂಸ್~ ನ್ಯೂಯಾರ್ಕ್‌ನಲ್ಲಿನ ಭದ್ರತಾ ಕ್ರಮಗಳನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿತ್ತು. `ಚೀನಾ ಯೂತ್ ಡೈಲಿ~ ಮತ್ತು `ಸದರನ್ ವೀಕ್ಲಿ~ ಸೇರಿದಂತೆ ಅನೇಕ ಪತ್ರಿಕೆಗಳು ಕೂಡಾ ಇದನ್ನೇ ಮುಖ್ಯ ಸಂಗತಿಯಾಗಿ ಪ್ರಕಟಿಸಿದ್ದವು.

Post Comments (+)