ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿನ ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ನೀಡಲಾಗುತ್ತಿರುವ ಡಾ.ಸೋಮಶೇಖರ ಮುನವಳ್ಳಿ ಮತ್ತು ಮಾಲತಿ ಮುನವಳ್ಳಿ ಹೆಲ್ತ್ ಅಂಡ್ ವೆಲ್‌ನೆಸ್ ಫೌಂಡೇಶನ್ (ಅಮೆರಿಕ) ಪ್ರಾಯೋಜಿತ `ಎಸ್.ಎಫ್. ಉಪ್ಪಿನ ಐಎಫ್‌ಎಸ್ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ~ಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿ ಐದು ಸಾವಿರ ರೂಪಾಯಿಗಳ ನಗದು ಮತ್ತು ಫಲಕ ಒಳಗೊಂಡಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು 2012 ಫೆಬ್ರುವರಿ 28ಕ್ಕೆ 50 ವರ್ಷದ ಒಳಗಿನ ಪತ್ರಕರ್ತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು.

ನಾಮನಿರ್ದೇಶನಗೊಳ್ಳುವ ಪತ್ರಕರ್ತೆಯರ  ವಿವರಗಳನ್ನು ಇದೇ 28ರೊಳಗಾಗಿ ಅಧ್ಯಕ್ಷರು, `ಎಸ್.ಎಫ್. ಉಪ್ಪಿನ ಐಎಫ್‌ಎಸ್ ಅತ್ಯುತ್ತಮ ಮಹಿಳಾ ಪತ್ರಕರ್ತೆ ಪ್ರಶಸ್ತಿ~ ಆಯ್ಕೆ ಸಮಿತಿ, ಕುಲಸಚಿವರ ಕಾರ್ಯಾಲಯ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ- 586101 ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT