ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಶಿಕ್ಷಣ 2017ಕ್ಕೆ ದುಪ್ಪಟ್ಟು

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): `ಭಾರತದ ಆನ್‌ಲೈನ್ ಸೌಲಭ್ಯದ ಶಿಕ್ಷಣ ಮಾರುಕಟ್ಟೆ ಗಾತ್ರ ಸದ್ಯ 2000 ಕೋಟಿ ಅಮೆರಿಕನ್ ಡಾಲರ್‌ನಷ್ಟಿದ್ದು, 2017ರ ವೇಳೆಗೆ 4000 ಕೋಟಿ ಡಾಲರ್ ಪ್ರಮಾಣಕ್ಕೆ ಹಿಗ್ಗುವ ನಿರೀಕ್ಷೆ ಇದೆ~.

`ಎರಡು ಮೂರು ವರ್ಷಗಳಲ್ಲಿ ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುವ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರ ಪರಿಣಾಮವಾಗಿ ಈ ಶಿಕ್ಷಣ ವ್ಯವಸ್ಥೆಯ ಮಾರುಕಟ್ಟೆ ಮುಂದಿನ ಐದು ವರ್ಷಗಳಲ್ಲಿ ಅಂದಾಜು ರೂ. 2.20 ಲಕ್ಷ ಕೋಟಿ ಪ್ರಮಾಣಕ್ಕೆ ಬೆಳವಣಿಗೆ ಕಾಣಲಿದೆ~ ಎಂದು ಇಲ್ಲಿನ `ಲೌಡ್‌ಕ್ಲೌಡ್ ಸಿಸ್ಟಮ್ಸ~ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಅನಿಲ್ ಸೋಂಕರ್ ಹೇಳಿದ್ದಾರೆ.

ವಿಶ್ವದ ಶಿಕ್ಷಣ ಕ್ಷೇತ್ರದಲ್ಲಿ ಭಾರತದ್ದೂ ಸಹ ಅತಿ ದೊಡ್ಡ ವ್ಯವಸ್ಥೆಯಾಗಿದೆ. 10 ಲಕ್ಷ ಶಾಲೆಗಳು ಮತ್ತು 18 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳ ಅತಿದೊಡ್ಡ ಜಾಲವೇ ಇಲ್ಲಿದೆ. ಅಲ್ಲದೆ ಇಲ್ಲಿನ ಜನಸಂಖ್ಯೆಯ ಅರ್ಧಕ್ಕೂ ಅಧಿಕ ಮಂದಿ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಸೇವೆಗಳ ಫಲಾನುಭವಿಗಳಾಗಿದ್ದಾರೆ. ಹಾಗಾಗಿಯೇ ಆನ್‌ಲೈನ್ ಶಿಕ್ಷಣ ಸೇವೆಗಳಿಗೂ ಬೇಡಿಕೆ ಹೆಚ್ಚುತ್ತಿದ್ದು, ಮಾರುಕಟ್ಟೆ ಇನ್ನೈದು ವರ್ಷದಲ್ಲಿ ಎರಡು ಪಟ್ಟು ವಿಸ್ತರಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT