ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಆಧಾರಿತ ತರಬೇತಿ

Last Updated 23 ಏಪ್ರಿಲ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವ ಸ್ಮೈಲ್ ಪ್ರತಿಷ್ಠಾನವು ತನ್ನ 35ನೇ `ಸ್ಟೆಪ್' ಇ-ಕಲಿಕಾ ಕೇಂದ್ರವನ್ನು ನಗರದ ಮೇಡಹಳ್ಳಿಯಲ್ಲಿ ಸೋಮವಾರ ಆರಂಭಿಸಿತು. ಬಾಷ್ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ.

ನಗರದ ಮೂಲಸೌಕರ್ಯ ವಂಚಿತ ಯುವಜನರಿಗೆ ಸೇವಾ ಮತ್ತು ಚಿಲ್ಲರೆ ವಲಯದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಗುರಿ ಹೊಂದಿದೆ.
ಬಾಷ್ ಇಂಡಿಯಾ ಪ್ರತಿಷ್ಠಾನ ಯೋಜನಾ ವ್ಯವಸ್ಥಾಪಕ ಡಾ. ಜೆಸ್ಸಿ ಫೆನ್ ಅವರು ಕೇಂದ್ರವನ್ನು ಉದ್ಘಾಟಿಸಿದರು. ಇಂಗ್ಲಿಷ್‌ನಲ್ಲಿ ಕ್ಷಮತೆ, ಕಂಪ್ಯೂಟರ್ ಶಿಕ್ಷಣದ ತಳಹದಿ, ಚಿಲ್ಲರೆ ವ್ಯಾಪಾರದ ನಿರ್ವಹಣೆ, ವ್ಯಕ್ತಿತ್ವ ವಿಕಸನ ಮತ್ತು ವಿವಿಧ ಕಲೆಗಳಲ್ಲಿ ತರಬೇತಿ ನೀಡಲಾಗುತ್ತದೆ.

`ಬಾಷ್ ಇಂಡಿಯಾ ಪ್ರತಿಷ್ಠಾನದಿಂದ 6,000 ಯುವಜನ ಪ್ರಯೋಜನ ಪಡೆದಿದ್ದಾರೆ. ಇದೀಗ ಸ್ಮೈಲ್ ಪ್ರತಿಷ್ಠಾನದ ಮುಖಾಂತರ ಮತ್ತಷ್ಟು ಯುವ ಸಮುದಾಯ ತಲುಪಿ ಅವರ ಕೌಶಲ್ಯ ಹೆಚ್ಚಿಸಲು ಮುಂದಾಗಿದೆ' ಎಂದು ಫೆನ್ ಹೇಳಿದರು. ಸ್ಮೈಲ್ ಪ್ರತಿಷ್ಠಾನದ ಸಿಒಒ ವಿಕ್ರಂ ಸಿಂಗ್ ವರ್ಮ, ಈ ಕಾರ್ಯಕ್ರಮದ ಮುಖಾಂತರ ಸ್ಮೈಲ್ ಪ್ರತಿಷ್ಠಾನವು 13,735 ಯುವಜನರಿಗೆ ತರಬೇತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT