ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಿನಿಡಾಡ್‌ನ ಸವಾಲಿನ ಮೊತ್ತ

ಚಾಂಪಿಯನ್ಸ್‌ ಲೀಗ್ ಕ್ರಿಕೆಟ್‌: ಕ್ರಿಕೆಟ್‌: ಪೆರೇರಾ ಅರ್ಧಶತಕದ ಬಲ
Last Updated 24 ಸೆಪ್ಟೆಂಬರ್ 2013, 20:18 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ):  ತಿಸಾರ ಪೆರೇರಾ ಅಜೇಯ ಅರ್ಧ ಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಾ­ಬಾದ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟ್ರಿನಿಡಾಡ್‌ ಆ್ಯಂಡ್‌ ಟೊಬೊಗೊ 20 ಓವರ್‌­ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತು. ಈ ಗುರಿಯನ್ನು ಶಿಖರ್‌ ಧವನ್‌ ನೇತೃತ್ವದ ಸನ್‌ರೈಸರ್ಸ್‌ ಮೂರು ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟ್ರಿನಿಡಾಡ್‌ಗೆ ವೇಗಿ ಡೇಲ್‌ ಸ್ಟೇಯ್ನ್‌ ಆರಂಭಿಕ ಆಘಾತ ನೀಡಿದರು. ಆಗ ಕ್ರೀಸ್‌ಗೆ ಬಂದ ಡರೆನ್‌ ಬ್ರಾವೊ ಅಬ್ಬರದ ಪ್ರದರ್ಶನ ತೋರಿದರು. 44 ಎಸೆತ ಎದುರಿಸಿದ ಅವರು 66 ರನ್‌ ಗಳಿಸಿದರು.

ಉತ್ತಮ ಆರಂಭ ಪಡೆದ ಸನ್‌ರೈಸರ್ಸ್‌ ತಂಡಕ್ಕೆ ಗುರಿ ಮುಟ್ಟಲು ಕೊನೆಯ ಓವರ್‌ನಲ್ಲಿ ಆರು ರನ್‌ ಅಗತ್ಯವಿತ್ತು. ಮೂರನೇ ಎಸೆತವನ್ನು ಕರಣ್‌ ಶರ್ಮ ಸಿಕ್ಸರ್‌ ಎತ್ತಿ ಜಯ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌: ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ: 20 ಓವರ್‌­ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160 (ಎವಿನ್‌ ಲೂಯಿಸ್‌ 22, ಡರೆನ್‌ ಬ್ರಾವೊ 66, ಜೇಸನ್‌ ಮೊಹಮ್ಮದ್‌ 19, ದಿನೇಶ್‌ ರಾಮ್ದಿನ್‌  21; ಇಶಾಂತ್‌ ಶರ್ಮ 36ಕ್ಕೆ2, ತಿಸ್ಸಾರ ಪೆರೇರಾ 26ಕ್ಕೆ2, ಡರೆನ್‌ ಸಮಿ 21ಕ್ಕೆ2).

ಸನ್‌ರೈಸರ್ಸ್‌ ಹೈದರಾಬಾದ್:‌ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 164. (ಪಾರ್ಥಿವ್‌ ಪಟೇಲ್‌ 17, ಶಿಖರ್‌ ಧವನ್‌ 23, ತಿಸಾರ ಪರೇರಾ ಔಟಾಗದೆ 57, ಕರಣ್‌ ಶರ್ಮ ಔಟಾಗದೆ 13; ಸುನಿಲ್‌ ನಾರಾಯಣ್‌ 9ಕ್ಕೆ4. ಫಲಿತಾಂಶ: ಸನ್‌ರೈಸರ್ಸ್‌ಗೆ 4 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ತಿಸಾರ ಪೆರೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT