ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಅಮರ, ತ್ಯಾಗ ಮಧುರ...

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪ್ರೀತಿಯ ಅಮಲು ಏರಿದ್ದಾಗ ಎಲ್ಲವೂ ನಶ್ವರ ಎನಿಸುತ್ತದೆ. ಅಮಲು ಇಳಿದಾಗ ಪ್ರೀತಿಸುತ್ತಿರುವವರ ಬಗ್ಗೆ ಮತ್ತು ಸಮಾಜದ ಬಗ್ಗೆ ಯೋಚಿಸಿದಾಗ... ಪ್ರೀತಿ  ಪಡೆಯಲು (ಮದುವೆ) ಸಾಧ್ಯವೇ ಎಂಬ ಪ್ರಶ್ನೆ ಪ್ರೇಮಿಗಳಲ್ಲಿ ಮೂಡುವುದು ಸಹಜ.

ಪ್ರೇಮಪಾಶದ ಸೆಳೆತವೇ ಅಂತಹುದು. ಪ್ರೀತಿಯ ಬಾಹುಬಂಧನದಲ್ಲಿ ಇರುವವರಿಗೆ ಉಳಿದೆಲ್ಲವೂ ಅಗೋಚರವಾಗುವುದರಿಂದ ಅವರು ‘ಪ್ರೇಮಂ ಶರಣಂ ಗಚ್ಛಾಮಿ’ ಮಂತ್ರ ಪಠಿಸುತ್ತಿರುತ್ತಾರೆ.

ಹದಿಹರೆಯ, ಕುದಿ ರಕ್ತ, ಸೆಳೆತ ಇವೆಲ್ಲವುಗಳ ಮಿಳಿತವೇ ಪ್ರೀತಿ. ಪ್ರೀತಿ ಶುರುವಾಗುವುದೇ ಕಣ್ಣುಗಳಿಂದ ಎಂಬುದು ಎಲ್ಲ ಪ್ರೇಮಿಗಳ ತನನಂ... ತನನಂ... ಚಂದಮಾಮನನ್ನು ಏಕೆ ಇಷ್ಟಪಡ್ತೀಯಾ ಎಂದು ಮಗುವೊಂದನ್ನು ಕೇಳಿದರೆ ಮಗು ನಿರುತ್ತರವಾಗುವಂತೆ... ಪ್ರೀತಿ ಹೇಗೆ ಹುಟ್ಟಿತು ಎಂದು ಪ್ರೇಮಿಗಳನ್ನು ಕೇಳಿದರೆ... ಮೊದಲ ನೋಟ... ಎಂದು ನುಣುಚಿಕೊಳ್ಳುತ್ತಾರೆ. 

ಪ್ರೀತಿಯ ಹುಟ್ಟಿನ ಗುಟ್ಟನ್ನು ಬಲ್ಲವರಾರು? ಹೃದಯಜನ್ಯ ಪ್ರೀತಿಯ ಮೋಡಿಗೆ ಮರುಳಾಗದವರಾರು? ಪೋಷಕರು ಹಾಕುವ ಕಡಿವಾಣಗಳ ಗೋಡೆಯನ್ನು ದಾಟಿ ಯುವ ಹೃದಯಗಳು ಪ್ರೀತಿಪಾಶದಲ್ಲಿ ಬೀಳುತ್ತಿಲ್ಲವೇ? ಜಾತಿ, ಮತ, ಅಂತಸ್ತಿನ ಮೌಢ್ಯಗಳ ಅಡೆ ತಡೆಗಳಿಂದಾಗಿ ಬಹಳಷ್ಟು ಸಂದರ್ಭಗಳಲ್ಲಿ ಹೃದಯದಲ್ಲೇ ಪ್ರೀತಿಯ  ಭ್ರೂಣ ಹತ್ಯೆಯಾಗಿರುವುದೂ ಉಂಟು. ಆದರೂ ಅಂದು-ಇಂದು-ಮುಂದು ಇನ್ನು ಎಂದೆಂದೂ ಪ್ರೀತಿ ಶಾಶ್ವತವೇ..  ಅದರ ಪಾಶದಲ್ಲಿ ಬೀಳುವವರು ಹೊಸಬರು ಇರಬಹುದು. ಪ್ರೀತಿ ಹಳತೇ...

ಮದುವೆಯಾದರೆ ಪ್ರೀತಿ ಸುಖಾಂತ್ಯ, ಇಲ್ಲವಾದರೇ ದುಃಖಾಂತ್ಯ ಎಂದು ಭಾವಿಸಲಾಗಿದೆ. ಆದರೆ, ಪ್ರೀತಿ ಶಾಶ್ವತವಾದುದು. ಪ್ರೀತಿಸಿದವನು/ಳು ಸಿಗಲಿಲ್ಲ ಅನ್ನೋ ಕಾರಣಕ್ಕೆ ಜೀವನ ಹಾಳು ಮಾಡಿಕೊಂಡರೆ ಅದು ಪ್ರೇಮಿಗಳು ಪ್ರೀತಿಗೆ ಮಾಡುವ ಮೋಸ. ಪ್ರೀತಿಗೆ ಸಾವಿಲ್ಲ ಎಂದಾದ ಮೇಲೆ ಪ್ರೇಮಿಗಳು ಸಾಯುವುದು ಎಷ್ಟು ಸರಿ? ಪ್ರೀತಿಯ ಹೊರತಾಗಿಯೂ ಜಗತ್ತಿನಲ್ಲಿ ಸಾಧಿಸುವುದು ಅಗಾಧ ಇದೆ. ಪ್ರೀತಿಯಲ್ಲಿ ಅಗಲಿಕೆ ಅನಿವಾರ್ಯವಾದಾಗ ನೆನಪು ಶಾಶ್ವತ ಪಡೆದುಕೊಳ್ಳುತ್ತದೆ. ಹಗೆತನ ಸಾಧಿಸುವುದು ಪ್ರೀತಿಗೆ ಪ್ರೇಮಿ ತೋರುವ ಕ್ರೌರ್ಯದ ಅಗೌರವ.

ಪ್ರೀತಿಗಾಗಿ ಏನು ಬೇಕಾದರೂ ಮಾಡ್ತಿನಿ ಎನ್ನುವ ಪ್ರೇಮಿಗಳು Compromise ಅನ್ನೋದು ಪ್ರೀತಿಗೆ ಕೊಡೋ ಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT