ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ‘ಲೈಕ್‌’ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಿಚ್ಮಂಡ್‌ (ವರ್ಜಿನೀಯಾ) (ಎಪಿ): ಚಿರಪರಿಚಿತ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿಯ ಪ್ರಕಟವಾಗುವ ಸಂದೇಶ, ಅಭಿಪ್ರಾಯ ಮತ್ತು ಇನ್ನಿತರ ಅನಿಸಿಕೆಗಳಿಗೆ ಮುಕ್ತವಾಗಿ ವ್ಯಕ್ತಪ­ಡಿ­ಸುವ ಮೆಚ್ಚುಗೆ, ಬೆಂಬ­ಲಕ್ಕೆ­(ಲೈಕ್‌)­ಸಂವಿ­ಧಾನದಲ್ಲಿ ರಕ್ಷಣೆ ಇದೆ ಎಂದು ಸ್ಥಳೀಯ ಫೆಡರಲ್‌ ಕೋರ್ಟ್ ತೀರ್ಪು ನೀಡಿದೆ.

‘ಫೇಸ್‌ಬುಕ್’ ಪುಟಗಳಲ್ಲಿ ಪ್ರಕಟ­ವಾ­ಗುವ ಅನಿಸಿಕೆಗಳಿಗೆ ವ್ಯಕ್ತಿಯೊಬ್ಬ ವ್ಯಕ್ತ­ಪಡಿ­ಸುವ ಬೆಂಬಲವನ್ನು  ಸಂವಿ­ಧಾನ­ದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.

‘ಫೇಸ್‌ಬುಕ್‌’ನಲ್ಲಿ ಪ್ರಕಟವಾಗುವ ಪುಟಗಳಿಗೆ ಸೂಚಿಸುವ ಮೆಚ್ಚುಗೆಗಳಿಗೆ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ  ಮಾನದಂಡವಾಗಲಾರದು ಎಂಬ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ರಿಚ್ಮಂಡ್‌ನ ಫೆಡರಲ್‌ ನ್ಯಾಯಾಲಯ ತಳ್ಳಿ ಹಾಕಿದೆ.

2009ರಲ್ಲಿ ನಡೆದ ಚುನಾವಣೆ­ಯಲ್ಲಿ ತಮ್ಮ ಎದುರಾಳಿಗೆ ಫೇಸ್‌ಬುಕ್‌­ನಲ್ಲಿ ಬೆಂಬಲ ವ್ಯಕ್ತಪಡಿಸಿದ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಿದ  ಹ್ಯಾಂಪ್ಟನ್‌ನ ಶೆರಿಫ್‌ ಬಿ.ಜೆ. ರಾಬರ್ಟ್ಸ್‌ ಕ್ರಮವನ್ನು ಸಿಬ್ಬಂದಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಆದರೆ, ಈ ವಾದವನ್ನು ರಾಬರ್ಟ್ಸ್ ತಳ್ಳಿ ಹಾಕಿದರು. ಚುನಾವಣೆಯಲ್ಲಿ ರಾಬರ್ಟ್ಸ್‌ ಎದುರಾಳಿ ಜಿಮ್ ಆಡಮ್ಸ್ ಅವರ ಫೇಸ್‌ಬುಕ್ ಪುಟ­ವನ್ನು ‘ಲೈಕ್’ ಮಾಡಿದದ್ದಾಗಿ ಅಮಾ­ನತು­ಗೊಂಡ ನೌಕರ ಡೇನಿಯಲ್‌ ರೇ ಕಾರ್ಟರ್‌ ಇದನ್ನು ಪ್ರಶ್ನಿಸಿದ್ದರು.

ಗ್ರಾಹಕರ ವಿಶ್ವಾಸಾರ್ಹತೆಗೆ ಧಕ್ಕೆ
ವಾಷಿಂಗ್ಟನ್‌ (ಎಎಫ್‌ಪಿ):
ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಜಾಲಾಡಿದ ಅಮೆರಿಕ ಸರ್ಕಾರದ ರಹಸ್ಯ  ಕಾರ್ಯಾಚರಣೆಯಿಂದಾಗಿ ಫೇಸ್‌ಬುಕ್‌ನಂತಹ ಪ್ರಖ್ಯಾತ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದ ವಿಶ್ವಾಸಾರ್ಹತೆ ಬಗ್ಗೆ ಶಂಕೆ ಹುಟ್ಟುಹಾಕಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮಾರ್ಕ್‌ ಝುಕರಬರ್ಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗ್ರಾಹಕರ ವಿಶ್ವಾಸಾರ್ಹತೆಗೆ ಸಂಸ್ಥೆ ಬೆಲೆ ನೀಡುತ್ತದೆ. ಎನ್‌ಎಸ್‌ಎ ಪ್ರಿಸಮ್‌ ಯೋಜನೆ ಅಡಿ ಸಂಸ್ಥೆಯ ಮಾಹಿತಿ ಸೋರಿಕೆ ಗ್ರಾಹಕರು ನಮ್ಮ ಸಂಸ್ಥೆಯ ಮೇಲಿಟ್ಟಿದ್ದ ನಂಬುಗೆ, ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆ ತಂದಿದೆ’ ಎಂದು ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ಕಾರ್ಯಾಚರಣೆಯ ಬಗ್ಗೆ ತಮಗಿದ್ದ ಅತೃಪ್ತಿ ಹೊರಹಾಕಿದರು.

ರಾಷ್ಟ್ರೀಯ ಭದ್ರತಾ ಸಂಸ್ಥೆಯ ರಹಸ್ಯ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸುವಂತೆ ಕೋರಿ ಅನೇಕ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT