ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಎಂಇಜಿಗೆ ಜಯ

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಂಇಜಿ ತಂಡದವರು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್  ಲೀಗ್ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಭಾನುವಾರ ನಡೆದ ಪಂದ್ಯದಲ್ಲಿ ಎಂಇಜಿ ತಂಡ 67-42 ಪಾಯಿಂಟುಗಳಿಂದ ಕೆಎಸ್‌ಪಿ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ವಿರಾಮದ ವೇಳೆಗೆ 34-21ಪಾಯಿಂಟುಗಳ ಮುನ್ನಡೆ ಸಾಧಿಸಿದ್ದ ಎಂಇಜಿ ವಿರಾಮದ ನಂತರವೂ ಪ್ರಭಾವಿ ಆಟವನ್ನಾಡಿ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು. ವಿಜಯಿ ತಂಡದ ಅಮಲ್ ಜೇಮ್ಸ್ 17 ಹಾಗೂ ಅನಿರುದ್ 13 ಪಾಯಿಂಟ್ ಗಳಿಸಿ ಗಮನ ಸೆಳೆದರು.

ಇದೇ ಟೂರ್ನಿಯ ಇತರ ಪಂದ್ಯಗಳಲ್ಲಿ ವಿಜಯಾ ಬ್ಯಾಂಕ್ 65-50ರಲ್ಲಿ ಜೆಎಸ್‌ಸಿ ತಂಡದ ವಿರುದ್ಧವೂ, ಯಂಗ್ ಒರಿಯನ್ಸ್ 70-50ರಲ್ಲಿ ಬಿಬಿಸಿ ಮೇಲೂ, ಸೌಥ್ ಬ್ಲ್ಯೂಸ್ ತಂಡವು 81-37ರಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT