ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಿಂದ ಸಾಲ ಯೋಜನೆ ಪ್ರಸ್ತಾವ

ಭಾರತದಲ್ಲಿ ಬಡತನ ತಗ್ಗಿಸಲು ನೆರವು
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ಭಾರತದ ಕಡಿಮೆ ಆದಾಯವಿರುವ ಏಳು ರಾಜ್ಯಗಳಲ್ಲಿನ ಬಡತನದ ಪ್ರಮಾಣ ತಗ್ಗಿಸಲು ಬೃಹತ್ ಸಾಲ ನೆರವಿನ ಯೋಜನೆ ಪ್ರಸ್ತಾವವನ್ನು ವಿಶ್ವಬ್ಯಾಂಕ್ ಸಿದ್ಧಪಡಿಸಿದೆ.

ಈ ಮೂಲಕ 2010ರಲ್ಲಿ 29.8ರಷ್ಟಿದ್ದ ಬಡತನದ ಪ್ರಮಾಣವನ್ನು 2030ರ ವೇಳೆಗೆ 5.5ರಷ್ಟು ತಗ್ಗಿಸುವ ಗುರಿಯನ್ನು ಈ ಪ್ರಸ್ತಾವ ಹೊಂದಿದೆ. ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ತಾನ ಹಾಗೂ ಉತ್ತರಪ್ರದೇಶ ಇವು ಪ್ರಸ್ತಾವದಲ್ಲಿ ಸೇರಿರುವ ಏಳು ರಾಜ್ಯಗಳು.

ಈ ಪ್ರಸ್ತಾವ ಅನುಮೋದನೆಗೊಂಡರೆ ವಿಶ್ವಬ್ಯಾಂಕ್ ನಾಲ್ಕು ವರ್ಷದ ಅವಧಿವರೆಗೆ ಪ್ರತಿವರ್ಷರೂ. 16,500 ಕೋಟಿಯಿಂದರೂ. 27,500 ಕೋಟಿ (ಮುನ್ನೂರು ಕೋಟಿಯಿಂದ ಐನೂರು ಕೋಟಿ ಡಾಲರ್) ಸಾಲ ನೆರವನ್ನು ಈ ರಾಜ್ಯಗಳಿಗಾಗಿ ನೀಡಲಿದೆ.

ಸಾಲ ಮೊತ್ತದ ಶೇ 60ರಷ್ಟು ಹಣವನ್ನು ರಾಜ್ಯ ಸರ್ಕಾರಗಳ ಯೋಜನೆಗಳಿಗಾಗಿ ಮೀಸಲಿಡಬೇಕಾಗುತ್ತದೆ.

`ಭಾರತದ ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಶೇ 60ರಷ್ಟು ಈ ಏಳು ರಾಜ್ಯಗಳಲ್ಲಿ ನೆಲೆಸಿದ್ದು, ಈಗ ಇವುಗಳ ಬೆಳವಣಿಗೆ ಪ್ರಮಾಣ ಸರಾಸರಿಗಿಂತ ಅಧಿಕವಿದೆ. ಹೀಗಾಗಿ, ಈ ರಾಜ್ಯಗಳಿಗೆ ನೀಡುವ ನೆರವು ಹೆಚ್ಚು ಫಲಪ್ರದವಾಗುತ್ತದೆ' ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಒನ್ನೋ ರ‌್ಹುಲ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT