ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿನ ಬದುಕಿಗೆ ಕ್ರೀಡೆ ಸಹಕಾರಿ: ಹರೀಶ್

Last Updated 15 ಏಪ್ರಿಲ್ 2013, 9:11 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕ್ರೀಡೆ ಬದುಕಿನಲ್ಲಿ ಶಿಸ್ತು ಕಲಿಸುತ್ತದೆ. ವಿದ್ಯಾರ್ಥಿಗಳು ರಜೆಯ ಅವಧಿಯಲ್ಲಿ ತಮಗೆ   ಇಷ್ಟವಾಗುವ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕೊಡಗು ಹಾಕಿ ಅಸೋಸಿಯೇಷನ್ ಸದಸ್ಯ ಪುಚ್ಚಿಮಾಡ ಹರೀಶ್ ದೇವಯ್ಯ ಹೇಳಿದರು.

ಸಮೀಪದ ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆಯಲಿರುವ ಹಾಕಿ ತರಬೇತಿ ಶಿಬಿರವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಹಾಕಿ ಆಟದ ತವರು. ಕ್ರಿಕೆಟ್ ಎದುರು ಹಾಕಿ ಮಸುಕಾಗುತ್ತಿದೆ. ಗತಕಾಲದ ಹಾಕಿ ಮತ್ತೆ ತನ್ನ ವೈಭವ ಕಂಡುಕೊಳ್ಳಬೇಕಾದರೆ ಯುವಕರು ಹಾಕಿ ಕಡೆಗೆ ಗಮನಹರಿಸಬೇಕು ಎಂದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಇಟ್ಟೀರ ಬಿದ್ದಪ್ಪ ಮಾತನಾಡಿ, ಯುವಕರು ಸತ್ಪ್ರಜೆಗಳಾಗಲು ಕ್ರೀಡೆಯಲ್ಲಿ ತೊಡಗಬೇಕು. ಯುವಕರಿಗೆ ಇದರ ಮಹತ್ವ ತಿಳಿಸಲು ಹಾಕಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸದಸ್ಯರಾದ ಅರಮಣ ಮಾಡ ಸತೀಶ್, ಶ್ರೀಧರ್ ನೆಲ್ಲಿತ್ತಾಯ ಮಾತನಾಡಿದರು. ಸಂಚಾಲಕ ಕಿರಣ್, ಮುಖ್ಯ ಶಿಕ್ಷಕಿ ರೀನ ಗಣೇಶ್, ತರಬೇತಿದಾರರಾದ ಡ್ಯಾನಿ, ಚಂಗಪ್ಪ ಹಾಜರಿದ್ದರು. ರೀನಾ ಗಣೇಶ್ ಸ್ವಾಗತಿಸಿದರು. ಮಂಜುರೈ ವಂದಿಸಿದರು. ಶಿಬಿರದಲ್ಲಿ ಬಾಲಕ ಬಾಲಕಿಯರು ಪಾಲ್ಗೊಂಡಿದ್ದು 21 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT