ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ ಪತ್ತೆಗೆ ಲೇಸರ್!

Last Updated 26 ಡಿಸೆಂಬರ್ 2012, 11:12 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ತಂಡ ಶ್ವಾನಕ್ಕಿಂತ 100 ಪಟ್ಟು ಅಧಿಕ ಆಘ್ರಾಣಿಸುವ ಶಕ್ತಿ ಇರುವ, ತ್ವರಿತಗತಿಯಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚುವ ಲೇಸರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.`ಸ್ಫೋಟಕ ಪತ್ತೆಗೆ ಬಳಸುವ ಬೇರೆಲ್ಲ ಸಾಧನಗಳಿಗಿಂತ ಈ ಲೇಸರ್ ಸಾಧನ ನೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ' ಎನ್ನುತ್ತಾರೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಂಡದ ಮುಖ್ಯಸ್ಥ ಚಾರ್ಲ್ಸ್ ಹರ್ಬ್.


ಈ ಸಾಧನ ಬಳಸಿ ಪ್ರಯಾಣಿಕರ ಬ್ಯಾಗ್, ಸೂಟ್‌ಕೇಸ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿ ಓಡಾಡುವವರ ಇಡೀ ದೇಹದ ತಪಾಸಣೆಯನ್ನು ಸುಲಭವಾಗಿ ಮಾಡಬಹುದು. ಸ್ಫೋಟಕ ಪತ್ತೆಯಾದ ತಕ್ಷಣವೇ ಭದ್ರತಾ ಸಿಬ್ಬಂದಿಗಳನ್ನು ಎಚ್ಚರಿಸುವ ಕೆಲಸವನ್ನೂ ಈ ಸಾಧನ ಮಾಡುತ್ತದೆ.

ಪೊಲೀಸ್ ಇಲಾಖೆ, ಭದ್ರತಾ ಸಿಬ್ಬಂದಿಗೆ ಸಹಾಯಕವಾಗುವ ಹಾಗೂ ವಿಧಿವಿಜ್ಞಾನ ಕೆಲಸಗಳಿಗೆ ಉಪಯೋಗಕ್ಕೆ ಬರುವ ಈ ಸಾಧನವನ್ನು ತಯಾರಿಸಲು ಪೊಲೀಸರೇ ಪ್ರೇರಣೆ ಎಂದಿದೆ ಹರ್ಬ್ ಮತ್ತು ತಂಡ.ಈ ಸಾಧನವನ್ನು ವಾಣಿಜ್ಯ ಬಳಕೆಗೆ ಅಭಿವೃದ್ಧಿಪಡಿಸಲು ಎರಡು ವರ್ಷ ಬೇಕಾಯಿತು ಎನ್ನುತ್ತಾರೆ ಚಾರ್ಲ್ಸ್ ಹರ್ಬ್.
- ವಿವಿಧ ಮೂಲಗಳಿಂದ: ಮಾನಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT