ಕೆಲವರ ಜನ್ಮ ಕುಂಡಲಿಗಳಿಗೆ ಕೆಲವು ಕಾರಣಗಳಿಗಾಗಿ ವಿಶೇಷ ಶಕ್ತಿ ಸಂಪ್ರಾಪ್ತಿಯಾಗಿರುತ್ತದೆ. ಗ್ರಹಗಳು ಒಂದು line of control ದಾಟಿ, ವಾಸ್ತವಕ್ಕೂ ತಂತಮ್ಮ ಹೊರ ವಲಯದ ಮಂಕುತನವನ್ನು ಕಳಚಿಕೊಂಡು ಒಳ ವಲಯದಿಂದ ಹೊರ ಸೂಸುವ ಕಾಂತಿಯಿಂದ ಈ ಕೆಲವರನ್ನು ಪ್ರಬಲರನ್ನಾಗಿ ಮಾಡುತ್ತದೆ. ಅಪರೂಪದ ಅನನ್ಯತೆಯಿಂದಾಗಿ ಇವರ ಜಾತಕ ಕುಂಡಲಿಯ ಗ್ರಹಗಳು ಹೆಚ್ಚು ಹೆಚ್ಚು ಗಮನಾರ್ಹ. ಹೀಗಾಗಿ ವಿಶೇಷವಾದ magical chemistry ಯನ್ನು ಈ ವ್ಯಕ್ತಿಗಳ ಪಾಲಿಗೆ ಕುಂಡಲಿಯ ಒದಗಿಸಿ ಇವರುಗಳ ಜೀವನದ ಯಶಸ್ಸನ್ನು ನಿರಂತರವಾಗಿ ಮಸುಕಾಗದಂತೆ ನೋಡಿಕೊಳ್ಳುತ್ತವೆ. ಮಸುಕಾದರೂ ಭಿನ್ನ ರೀತಿಯ ಚಲನಶೀಲತೆ ಪಡೆದು ಮತ್ತೆ ಸೂಕ್ತವಾದ ಸಮತೋಲನಕ್ಕೆ ವ್ಯಕ್ತಿಯ ವರ್ಚಸ್ಸನ್ನು ಸಂವರ್ಧಿಸಿ ಬಿಡುತ್ತವೆ.

ಆದರೆ ಈ ಭಿನ್ನ ರೀತಿಯ ಚಲನಶೀಲತೆ ಅಂದರೆ ಏನು, ಇದು ಏಕೆ ಹಾಗೂ ಹೇಗೆ magical chemistry ಯನ್ನು ಪ್ರದರ್ಶಿಸುತ್ತವೆ ಎಂಬುದನ್ನು ಶಬ್ದಗಳಲ್ಲಿ ತೆರೆದಿಡುವುದು ಕಷ್ಟ. ತಂತಮ್ಮ ಚಲನವಲನಗಳ ಸಂದರ್ಭದಲ್ಲಿ ಸಾದಾ ಶಕ್ತಿಯನ್ನೇ ಹೆಚ್ಚು ಬಲಾಢ್ಯ ಶಕ್ತಿಯನ್ನಾಗಿ ಇವರ ಕುಂಡಲಿಯ ಗ್ರಹಗಳು, (ಕೆಲವು ಸಲ ವಿಶಿಷ್ಟ ಕ್ಷುದ್ರ ಗ್ರಹಗಳ ಮೂಲಕವೂ ಏಕಾಏಕಿಯಾಗಿ ತಮ್ಮ ಸಂವಿಧಾನಗಳನ್ನು ಪರಿವರ್ತಿಸಿಕೊಂಡು ಬಿಡುತ್ತವೆ.) ಮೂಲದ ತೆಳು ಪದರಿನ ನಿಕ್ಷೇಪವನ್ನು ಹೊಸದೇ ಆದ ವಿರಾಟ ಸ್ವರೂಪದಲ್ಲಿ ಬಲಯುತಗೊಳಿಸಿಕೊಳ್ಳುತ್ತವೆ.

ಈ ವಿಶಿಷ್ಟ ಪ್ರಕ್ರಿಯೆಯಿಂದಾಗಿ ನಿರೀಕ್ಷಿಸಲಾದ ಶಕ್ತಿಗಿಂತಲೂ ಅಧಿಕ ಕಸುವನ್ನು ಕುಂಡಲಿಯ ಗ್ರಹಗಳು ಪಡೆದು ಉತ್ತಮ ಫಲ ಕೊಡಲು ಸಜ್ಜಾಗುತ್ತವೆ. ಪರಿವರ್ತನ ಯೋಗ, ನೀಚ ಭಂಗ ರಾಜಯೋಗ, ವಿಪರೀತ ರಾಜ ಯೋಗ, ಶತ್ರು ಮುಖೋದ್ಗತ ಬಹು ಸಿದ್ಧಿ ಯೋಗಗಳನ್ನು ಸಂಯೋಜಿಸಿದ ಗ್ರಹಗಳು ಬಹು ವಿಧವಾಗಿ ಈ ರೀತಿಯ ಪವಾಡಗಳನ್ನು ನಡೆಸುತ್ತವೆ. ಹಲವು ವ್ಯಕ್ತಿಗಳ ಜನ್ಮ ಕುಂಡಲಿಯಲ್ಲಿ ಕ್ಲಪ್ತ ಸಂದರ್ಭದಲ್ಲಿ ಇವೆಲ್ಲ ಹೆಚ್ಚು ಸ್ಪಷ್ಟ. ಅಪರೂಪದಲ್ಲಿ ಅಪರೂಪವಾಗಿ ಬಹಳಷ್ಟು ಜನ ಈ ಕಾರಣದಿಂದಾಗಿ, ನಿರಂತರವಾಗಿ ಚಲಾವಣೆಯಲ್ಲಿ ಇರುತ್ತಾರೆ. ವೈಯಕ್ತಿಕ ಜೀವನದ ಬಹು ಕ್ಲಿಷ್ಟ ಸಂದರ್ಭಗಳಲ್ಲೂ ಕ್ಷಿಪ್ರವಾಗಿ ಪಾರಾಗಿ ಹೊರ ಬರುತ್ತಾರೆ. ಇಂತಹ ಅಪರೂಪದ ಅತುಳ ಬಲವನ್ನು ಅಮಿತಾಭ್ ಬಚ್ಚನ್ ಅವರ ಜನ್ಮ ಕುಂಡಲಿಯ ಗ್ರಹಗಳು ಪಡೆದಿರುತ್ತವೆ ಎಂಬುದು ಇಲ್ಲಿ ಗಮನಾರ್ಹ.

ಮರಣ ಸ್ಥಾನದಲ್ಲಿ ಯೋಗಗಳ ಗೊಂಚಲು: ಬಾಲಿವುಡ್ ನ ಬಹುಮುಖ ಪ್ರತಿಭೆಯ ಪ್ರಧಾನ ನಟ, ಕಳೆದ ಎಪ್ಪತ್ತು, ಎಂಭತ್ತನೇ ದಶಕಗಳಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ಅಮಿತಾಭ್ ಬಚ್ಚನ್ ಅವರ ಜನ್ಮ ಕುಂಡಲಿಯಲ್ಲಿ ಹಲವು ಪ್ರಧಾನ ಯೋಗಗಳು ಜಾತಕದ ಅಷ್ಟಮ ಸ್ಥಾನವಾದ ಮರಣದ ಮನೆಯಲ್ಲಿ ಹರಳುಗಟ್ಟಿವೆ. ಆಯುಷ್ಯಕಾರಕನೂ, ತನು ಭಾವದ ಯಜಮಾನನೂ ಆದ ಶನಿ ಮಹಾರಾಜ ಅಮಿತಾಭ್ ಅವರನ್ನು ಉದ್ದೇಶಪಟ್ಟು ಆರಿಸಿಕೊಂಡಿದ್ದ (ಹಿಂದಿ ಚಿತ್ರ ರಂಗದ ನಟನಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತು ಆರಿಸಿಕೊಂಡಿದ್ದ) ಸಿನಿಮಾ ರಂಗದಲ್ಲಿ, ನಿರಂತರವಾದ ಸೋಲುಗಳ ಸರಮಾಲೆಯಿಂದ ಅವರನ್ನು ಹೊರ ತಂದದ್ದು 1971ರ ಸಂದರ್ಭದಲ್ಲಿ. ಶನಿ ಗ್ರಹ ಅತ್ಯಂತ ಬಲಾಢ್ಯನಾಗಿ ಬಚ್ಚನ್ ಅವರ ಸುಖ ಸ್ಥಾನವಾದ ವೃಷಭ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಶನಿ ದಶಾ ಸಂದರ್ಭ 1970 ಪ್ರಾರಂಭವಾಗುತ್ತಿದ್ದಂತೆ ಹೃಷಿಕೇಶ್ ಮುಖರ್ಜಿ ಅಂತಹ ಖ್ಯಾತ ನಿರ್ದೇಶಕರ ನಿರ್ದೇಶನದ 'ಆನಂದ್' ಚಿತ್ರದ ಪ್ರಧಾನ ಭೂಮಿಕೆಗೆ ಆಯ್ಕೆ ಆದರು. 'ಆನಂದ್' ಚಿತ್ರ, ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು.

ಬಚ್ಚನ್ ಈ ಚಿತ್ರದಲ್ಲಿ ಮಿಂಚಿದ್ದರು ಎಂಬುದು ಸತ್ಯ. ಆದರೆ ಯಶಸ್ಸಿಗಾಗಿ ಪರದಾಡುತ್ತಿದ್ದ ರಾಜೇಶ್ ಖನ್ನಾ 'ಆನಂದ್' ಮೂಲಕ ಬಚ್ಚನ್ ಅವರು ಮಿಂಚಿದ್ದಕ್ಕಿಂತ ಹೆಚ್ಚೇ ಮಿಂಚಿದ್ದರು. ಹೀನಾಯವಾದ ಸೋಲಿನ ಸರಮಾಲೆಯನ್ನು ಕಳಚಿಕೊಂಡು ಒಮ್ಮಿಂದೊಮ್ಮೆಗೇ ತಾರಾ ಮೌಲ್ಯ ಪಡೆದರು. ಆವರೆಗೂ ಯಾರೂ ಪಡೆದಿರದ ಮೇಲ್ಮಟ್ಟದ ಮೌಲ್ಯ ಅದು. ಒಂದೆರಡು ವರ್ಷಗಳಲ್ಲಿ 'ಝಂಜೀರ್' ಸಿನಿಮಾ (1973 ರಲ್ಲಿ) ಬಂತು. ಅಮಿತಾಭ್ಗೂ ಸೂಪರ್ ಸ್ಟಾರ್ ಪಟ್ಟ ಸಿಗಲು 'ಝಂಜೀರ್' ವೇದಿಕೆ ನೀಡಿತು ಎಂದೆನ್ನಬಹುದು. ಅಗಾಧ ತಾರಾ ಮೌಲ್ಯದ ರಾಜೇಶ್ ಖನ್ನಾ ಕೂಡಾ ತುಸು ಮಂಕಾಗುವಂತೆ ಅಮಿತಾಭ್ ಮೌಲ್ಯ ನಿಧಾನವಾಗಿ ತದನಂತರ ಏರುತ್ತಲೇ ಹೋಗಿತ್ತು. ಅಮಿತಾಭ್ ಅವರ ಕುಂಡಲಿಯ ಶನಿ ಗ್ರಹ ಇನ್ನಿಲ್ಲದ ವರ್ಚಸ್ಸನ್ನು ಅವರಿಗೆ ಒದಗಿಸಿದ್ದ ಎನ್ನಬಹುದು. ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಕಾಲವಾಗಿ ಪರಿವರ್ತನವಾಗಿತ್ತು ಅವರ ವರ್ತಮಾನ. "ಯಾರು ನೀನು, ಎಷ್ಟು ಕುರೂಪಿಯಾಗಿದ್ದೀಯಾ, ನಿನ್ನ ಮುಖ ನೋಡಿಕೋ ಒಮ್ಮೆ ಕನ್ನಡಿಯಲ್ಲಿ" ಎಂದು ಯಾರೆಲ್ಲ ಮೂದಲಿಸಿದ್ದರೋ ಅವರೇ ಇವರ ಕಾಲ್ಶೀಟ್ಗೆ ಸರತಿ ಸಾಲಲ್ಲಿ ನಿಂತರು. ನಿನ್ನದು ಗೊಗ್ಗರು ಧ್ವನಿ ಎಂದು ಹಾಸ್ಯ ಮಾಡಿದವರು ಕೈ ಮುಗಿದು ನಿಂತರು. ಮಹತ್ವದ Audition Test ನಲ್ಲಿ ಉತ್ತೀರ್ಣರಾಗಲು ವಿಫಲವಾದ ಬಚ್ಚನ್ - ನಂತರ ಅದೇ ಧ್ವನಿಯ ಮೂಲಕ ವಿಶ್ವದ ಗಮನ ಸೆಳೆದರು. ಇವೆಲ್ಲವೂ ಶನೈಶ್ಚರ ಸ್ವಾಮಿಯ ದಿವ್ಯ ಅನುಗ್ರಹವಾಗಿತ್ತು. ಅಮಿತಾಭ್ ಹಿನ್ನಡೆಗಳೆಲ್ಲ ಮುರಿದುಬಿದ್ದವು.

ಸಾವಿನ ಮನೆ ದೂರವಿರಲಿಲ್ಲ: ಹಾಗೆ ನೋಡಿದರೆ 1982ರಲ್ಲಿ ಅಮಿತಾಭ್ ಪ್ರಾಣಾಂತಿಕ ಘಟ್ಟ ತಲುಪಿದ್ದರು. ಬದುಕಿದ್ದು ಒಂದು ದೊಡ್ಡ ಪವಾಡವೇ ಸರಿ. ವೈದ್ಯರು ಧೈರ್ಯ ಹೇಳುತ್ತಿದ್ದರೂ, ಅಮಿತಾಭ್ ಬದುಕು ಸಾವಿನ ತೂಗುಯ್ಯಾಲೆಯಲ್ಲಿ ಮಲಗಿದ್ದರು ಆಸ್ಪತ್ರೆಯಲ್ಲಿ. ಕೋಟಿಗಟ್ಟಲೆ ಅಭಿಮಾನಿಗಳು ಅವರ ಪ್ರಾಣ ಉಳಿಸಲು ದೇವರನ್ನು ಅವಿರತವಾಗಿ ಪ್ರಾರ್ಥಿಸತೊಡಗಿದ್ದರು. ಸಾಡೇಸಾತಿ ದಿನಗಳ ಕಾಟದ ಸಂದರ್ಭ ಅದು. ಪ್ರಾಣ ಉಳಿಸಬೇಕಾದ ಶನೈಶ್ಚರನೇ ಸಾವಿನ ಮನೆಯನ್ನು ಹೊಕ್ಕಿದ್ದ ಬಚ್ಚನ್ ಜಾತಕ ಕುಂಡಲಿಯಲ್ಲಿ. 'ಕೂಲಿ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದುರಂತ ಸಂಭವಿಸಿತ್ತು. ಅದೂ ಬೆಂಗಳೂರಿನಲ್ಲಿ. ಕೇಡಿಗಳ ಜತೆಗಿನ ಫೈಟಿಂಗ್ ದೃಶ್ಯ ಚಿತ್ರೀಕರಣದ ಸಮಯ ಅದು. ಸಹ ಕಲಾವಿದ ಅಕಸ್ಮಾತ್ತಾಗಿ ಲೆಕ್ಕ ತಪ್ಪಿ ಜೋರಾಗಿ ಅಮಿತಾಭ್ ಅವರನ್ನು ದೂಡಿದ್ದು ಅನಾಹುತ ಎಬ್ಬಿಸಿತು. ಟೇಬಲ್ ಒಂದರ ಚೂಪು ತುದಿ ಅಮಿತಾಭ್ ಅವರ ಉದರವನ್ನು ಅಕ್ಷರಶಃ ಸೀಳಿದಂತಿತ್ತು. ವರದಿಗಳ ಪ್ರಕಾರ ಲಿವರ್ ಡ್ಯಾಮೇಜ್ ತೀವ್ರ ಸ್ವರೂಪದ್ದಿತ್ತು. ಸಾಡೇಸಾತಿ ಶನಿ ಕಾಟದ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿತ್ತು. ಆರೋಗ್ಯ, ಕೆಲವು ಕೌಟುಂಬಿಕ ಸಮಸ್ಯೆಗಳು, ಬದುಕುಳಿಯಬಲ್ಲೆನೇ ಎಂಬುದಕ್ಕೆ ಸೂಕ್ತ ಉತ್ತರ ದೊರಕದಾಗಿದ್ದ ಸಮಯ ಅದು. ಆದರೆ ಮರಣ ಸ್ಥಾನದಲ್ಲಿ ಸುಮಾರು ಹತ್ತು ರೀತಿಯ ಮಹತ್ವದ ಯೋಗಗಳು ಅಮಿತಾಭ್ ಜನ್ಮ ಕುಂಡಲಿಯಲ್ಲಿ ಗೊಂಚಲು ಕಟ್ಟಿದ್ದ ಕಾರಣದಿಂದ ಯಮ ಧರ್ಮರಾಯನ ಆಟ ಅಮಿತಾಭ್ ವಿರುದ್ಧ ನಡೆಯಲಿಲ್ಲ ಎಂದೇ ಅನ್ನಬಹುದು.

ಚಂದ್ರನೇ ಖಳ ನಾಯಕ: ಬೆಂಗಳೂರಿನಲ್ಲಿ ನಡೆಯುತ್ತಿದ್ದ 'ಕೂಲಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಅಮಿತಾಭ್ ಅವರ ಹೊಟ್ಟೆಗೆ ಬಲವಾದ ಏಟು ಬಿದ್ದಿದ್ದು ಸಾಡೇಸಾತಿ ಶನಿ ಕಾಟ ಬಂದಾಗಲೇ ಎಂಬುದು ಸತ್ಯ ಇರಬಹುದು. ಆದರೆ, ಪ್ರಾಣಾಂತಿಕವಾದ ಏಟು ಬಿದ್ದಿದ್ದಕ್ಕೆ ದೊಡ್ಡ ಕಾರಣವೇ ಇವರ ಜಾತಕ ಕುಂಡಲಿಯ ದೊಡ್ಡ ಖಳ ನಾಯಕನಾದ ಚಂದ್ರನ ಕಾರಣದಿಂದ ದೊಡ್ಡ ಅಪಾಯವೇ ಎದುರಾಯ್ತೇನೋ ಎಂದು ಎನ್ನಬಹುದು. ಇವರ ಜಾತಕದಲ್ಲಿ ಚಂದ್ರ ಹೊಟ್ಟೆಯ ಭಾಗವನ್ನು ಸಂಕೇತಿಸುವ ಗ್ರಹವಾಗಿ ಮರಣದ ಮನೆಯಲ್ಲಿ ಸ್ಥಿತನಾಗಿದ್ದಾನೆ. ಮಾರಣಾಂತಿಕವಾದ ಏಟು ಚಂದ್ರನ ಕಾರಣದಿಂದಲೇ ಅಮಿತಾಭ್ ಹೊಟ್ಟೆಗೆ ಬಿದ್ದಿದೆ. ಏಟು ಬಿದ್ದಾಗ ಚಂದ್ರ ಭುಕ್ತಿ ಕೂಡಾ ಇತ್ತು. ಒಟ್ಟಿನಲ್ಲಿ ಚಂದ್ರನಿಗೆ ಶನಿ ಗ್ರಹದ ಜತೆಗಿನ ಸಾಡೇಸಾತಿ ತಿಕ್ಕಾಟ ಬಂದಾಗಲೇ ಬಚ್ಚನ್ ಏಟು ಬಿದ್ದು ಒದ್ದಾಡಿದ್ದು. ಚಂದ್ರ ಗ್ರಹ, ಛಿದ್ರ ಸ್ಥಾನದ ಯಜಮಾನನಾಗಿ ಪರಮೋಚ್ಚ ಘಾತಕನಾಗಿದ್ದಾನೆ. ಆದಾಗ್ಯೂ ಚಂದ್ರ ಬೃಹಸ್ಪತಿ ಕೇಂದ್ರ ಯೋಗ ಇದ್ದಿದ್ದರಿಂದ ಚಂದ್ರನಿಗೆ ಅಂತಿಮವಾದ ಪ್ರಾಣ ಹರಣಕ್ಕೆ ಸಾಧ್ಯವಾಗಲಿಲ್ಲ. ಕೊನೆಗೂ ಮರಣವನ್ನು ತಪ್ಪಿಸುವ ನಿಟ್ಟಿನಲ್ಲಿ ರವಿ, ಬುಧ, ಶುಕ್ರ ಹಾಗೂ ಮಂಗಳ ಗ್ರಹಗಳು ಗೆದ್ದಿದ್ದವು. ಅಮಿತಾಭ್ ಮರು ಹುಟ್ಟು ಪಡೆದರು.

ಬುಧ ಗ್ರಹ ಮತ್ತು ಆರ್ಥಿಕ ದಿವಾಳಿ: ಬುಧ ಗ್ರಹ 1995 - 1996 ರ ಕಾಲ ಘಟ್ಟದಲ್ಲಿ ಅಮಿತಾಭ್ರನ್ನು ಪೂರ್ತಿ ದಿವಾಳಿಗೆ ದೂಡಿತು. 1990ರಲ್ಲೇ ಬುಧ ದಶಾ ಶುರುವಾಗಿತ್ತು. ಸುಮಾರು ಕಳೆದ ಎಪ್ಪತ್ತರ ದಶಕದ ಪ್ರಾರಂಭದಿಂದಲೂ ಜಿಗಿದು ಮೇಲೆದ್ದು ನಿಂತಿದ್ದ ಬಚ್ಚನ್ ಸಾಮ್ರಾಜ್ಯ ಕುಸಿಯತೊಡಗಿತ್ತು. ಪಂಚಮ ಶನಿ ಕಾಟ ಕೂಡಾ ಅಮಿತಾಭ್ ಅವರನ್ನು ಆವರಿಸಿದ್ದರಿಂದ ತಾವು ನಿಭಾಯಿಸಲು ಕಷ್ಟವೇ ಆಗಿದ್ದ ABCL ಕಂಪನಿಯಿಂದಾಗಿ ಅಕ್ಷರಶಃ ಕುದಿ ಎದ್ದ ಬಿಸಿ ಎಣ್ಣೆಯ ಕೊಪ್ಪರಿಗೆಯ ಮೇಲೆ ನಿಂತ ಅನುಭವದಿಂದಾಗಿ ಬಚ್ಚನ್ ಅವರಿಗೆ ಉಸಿರುಗಟ್ಟಿಸಲಾರಂಭಿಸಿತ್ತು. ಅಮಿತಾಭ್ ಒಡೆತನದ ABCL ಕಂಪನಿ ಬೆಂಗಳೂರಿನಲ್ಲಿ ನಡೆಸಿದ ಮಿಸ್ ವರ್ಲ್ಡ್ ಕಾಂಟೆಸ್ಟ್ ಅಮಿತಾಭ್ ಅವರಿಗೆ ಬಹು ದೊಡ್ಡ ಹಿನ್ನಡೆ ಒದಗಿಸಿತು. ನಷ್ಟ ಒಂದೇ ಅಲ್ಲ, ಜನರ ಪ್ರತಿಭಟನೆಗಳನ್ನು ಕೂಡಾ ಅಮಿತಾಭ್ ಎದುರಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯೇ ಅನಾಗರಿಕವಾದುದು ಎಂಬ ಪ್ರತಿಭಟನೆ ಎದುರಿಸಿದರು.

ಅಂತೂ ಒಂದು ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಇವೆಲ್ಲವೂ ಸಂಯುಕ್ತವಾಗಿ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದು ಸುಳ್ಳಲ್ಲ. ಗರಿಷ್ಠ ಮಟ್ಟದ ಆರ್ಥಿಕ ದಿವಾಳಿಯನ್ನು ನಿರ್ಮಿಸಿ ಬುಧ, ಅಮಿತಾಭ್ ಪೂರ್ತಿ ತತ್ತರಿಸಿ ಹೋಗುವ ಏಟನ್ನು ದೊಡ್ಡದಾಗಿಯೇ ಕೊಟ್ಟ. ಎರಡೂವರೆ ದಶಕಗಳ ಕಾಲ ಇಡೀ ಬಾಲಿವುಡ್ನ ಪ್ರಶ್ನಾತೀತ ಪ್ರಭಾವಿಯಾಗಿ, 1984 ರಲ್ಲಿ ಸಂಸತ್ ಸದಸ್ಯನೂ ಆಗಿ ವಿಜೃಂಭಿಸಿದ್ದ ಅಮಿತಾಭ್ ಮುಂದೇನು ದಾರಿ ಎಂಬಷ್ಟರ ಮಟ್ಟಿಗೆ ತಳ ಕಚ್ಚಿದ್ದರು. ಇದರ ಅರ್ಥ, ಬುಧ ಗ್ರಹದ Chemistry ಅಮಿತಾಭ್ ಅವರನ್ನು ಆರ್ಥಿಕವಾಗಿ ಮುಗಿಸಬೇಕು ಎಂಬ ದುಷ್ಟತನ ಹೊಂದಿತ್ತು ಎಂಬುದಲ್ಲ. ಆದರೆ ಉಚ್ಚನಾಗಿ ಬುಧ ಮರಣ ಸ್ಥಾನದಲ್ಲಿ ಇದ್ದು ಅವರ ಆಯುಷ್ಯಕ್ಕೆ ಧಕ್ಕೆ ಬಾರದಂತೆ ಹೆಣಗಾಡುವುದಾಯ್ತೇ ವಿನಾ, ದುಷ್ಪರಿಣಾಮದ ಪರಮೋಚ್ಚ ಘಾತಕ ಲೇಪ ಹೊಂದಿದ್ದ ಕುಜ ಶುಕ್ರರು ಅನೇಕ ರೀತಿಯಲ್ಲಿ ಅಮಿತಾಭ್ ಅವರ ದಿವಾಳಿಗೆ ಕಾರಣರಾದರು. ವರ್ಚಸ್ಸನ್ನು ಹೆಚ್ಚಿಸಬೇಕಿದ್ದ ಶನಿ ಗ್ರಹ, ಆ ಹೊತ್ತಿಗೇ ಇದ್ದಿದ್ದ ಪಂಚಮ ಶನಿ ಕಾಟದ ಕಾರಣದಿಂದಾಗಿಯೂ ಪರದಾಡಿದ್ದರು. ತೀವ್ರತರದ ಅರಿಷ್ಟ ಧಾತುಗಳು ಅವರನ್ನು ಸುತ್ತುವರಿದವು.

ಬುಧ ಗ್ರಹವೇ ಮತ್ತೆ ಎದ್ದು ನಿಲ್ಲಿಸಿತು: ಬುಧ ದಶಾದ ಗುರು ಭುಕ್ತಿಯ ಕೊನೆಯ ಘಟ್ಟ ಮತ್ತೆ ಅಮಿತಾಭ್ರನ್ನ ಮೇಲೆಬ್ಬಿಸಿ ನಿಲ್ಲಿಸಿತು. 'ಕೌನ್ ಬನೇಗಾ ಕರೋಡ್ ಪತಿ' ಟಿವಿ ಕಾರ್ಯಕ್ರಮ ಅಮಿತಾಭ್ ಆರ್ಥಿಕವಾಗಿ ಪುನಃಶ್ಚೇತನ ಪಡೆಯಲು ಅವಕಾಶ ನೀಡಿತು. ಅಮಿತಾಭ್ಗೆ ಬಲಿಷ್ಠನಾದ ಶನೈಶ್ಚರನು ನೀಡಿದ ದೊಡ್ಡ ಅಮೃತತ್ವ ಹಾಗೂ ಬೆಂಬಲ ಅಂದರೆ (ಆಯುಷ್ಕಾರಕನಾಗಿ ಆಯಸ್ಸು) ಅವರೊಳಗಿನ ಅದ್ಭುತ ನಟನಾ ಸಾಮರ್ಥ್ಯದ ಕೌಶಲ್ಯ. ಈ ಕೌಶಲ್ಯವೇ ಮತ್ತೆ ಅವರನ್ನು ಎದ್ದು ನಿಲ್ಲಿಸಿತು. ಧೀರೂ ಭಾಯ್ ಅಂಬಾನಿ ಬೆಂಬಲಕ್ಕೆ ಬಂದರು. ಹಾಗೆ ನೋಡಿದರೆ ಅಂಬಾನಿ ಒಂದೇ ಅಲ್ಲ, ಅಮಿತಾಭ್ ಅವರ ಇತರ ಹಲವು ಶ್ರೀಮಂತ ಅಭಿಮಾನಿಗಳೂ, ಅಮಿತಾಭ್ ಅವರಿಗೆ ವಿವಿಧ ರೀತಿಯ ಸಹಾಯ ನೀಡಿದರು. ಅಪ್ಪಟ ಸ್ವಾಭಿಮಾನಿ, ವೃದ್ಧಾಪ್ಯದ ಕಾರಣದಿಂದ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಹಾಗೆಯೇ ಅವರು ಎಂದೂ ಜಡತ್ವ ಪಡೆಯಲಿಲ್ಲ. ಇಂದೂ ವರ್ಚಸ್ಸನ್ನು ಹೊಂದಿದ್ದಾರೆ. ಚುರುಕಾದ ದುಡಿತವನ್ನು ನಡೆಸಿಕೊಂಡೇ ಚಟುವಟಿಕೆಯಿಂದ ಇದ್ದಾರೆ.

1982 ರಲ್ಲಿ ಹೊಟ್ಟೆಗೆ ಬಿದ್ದ ಏಟು, ಅಂದಿನಿಂದ ಇಂದಿನ ತನಕವೂ, ಅಮಿತಾಭ್ ಅವರನ್ನು, ಪುನಃಪುನಃ ಜ್ವಾಲಾಮುಖಿಯ ಮೇಲೇ (ನಾಲ್ಕೂವರೆ ದಶಕಗಳಿಂದಲೂ) ನಿಲ್ಲಿಸಿದೆ ಎನ್ನಿ. ಆಗಾಗ ಸಾವು ಹಾಗೂ ಬದುಕಿನ ನಡುವೆ ಇರಿಸಿದೆ. ಆ ಹಿಂದಿನ ಏಟು ನಿರಂತರವಾಗಿ ಅವರನ್ನು ಕಾಡುತ್ತಲೇ ಇರುವುದು ಅತಿಶಯೋಕ್ತಿ ಏನಲ್ಲ. ಆದರೂ ಮೃತ್ಯುಂಜಯನ ಅನುಗ್ರಹ ಶನಿ ಹಾಗೂ ಬುಧನ ರೂಪದಲ್ಲಿ ಗ್ರಹಗಳು, ಅವರನ್ನು ಇದೀಗ 83 ನೇ ವಯಸ್ಸಿನಲ್ಲೂ Big B ಎಂದೇ ಪ್ರಪಂಚ ಮುಖಕ್ಕೆ ರಾರಾಜಿಸಿ ನಿಲ್ಲಲು ಅನುಗ್ರಹಿಸಿದ್ದಾವೆ. ದೈಹಿಕ ಹಾಗೂ ಮಾನಸಿಕ ನೋವು ಅದರ ಪಾಡಿಗೆ ಅವು ಅವರಲ್ಲಿ ಇದ್ದೇ ಇವೆ. ಆದಾಗ್ಯೂ ಪ್ರಪಂಚದಲ್ಲಿ ಒಬ್ಬನೇ ಅಮಿತಾಭ್ ಆಗಿ ಗಂಭೀರವಾದ ಗಟ್ಟಿ ಹೆಜ್ಜೆಗಳನ್ನು ಇಡುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.