ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಕುಂಡಲಿ ಏನನ್ನು ಹೇಳುತ್ತಿದೆ? ಅವರ ಬಗೆಗೆ ಮೃದುವಾಗಿದೆಯೇ? ಇಲ್ಲಾ... ಮಗುಚಿ ಬೀಳಿಸುವ ತವಕ ಹೊಂದಿದೆಯೆ? ನಿಜ, ಸಿದ್ದರಾಮಯ್ಯನವರ ಜನ್ಮ ಕುಂಡಲಿ ಲಭ್ಯವಿದೆಯೇ? ಲಭ್ಯವಿರದಿದ್ದರೆ ಅವರ ಬಗೆಗಿನ ಗ್ರಹ, ತಾರೆ, ನಿಹಾರಿಕೆಗಳ ಕುರಿತು ಹೇಳಲು ಹೇಗೆ ಸಾಧ್ಯ? ಇವೆಲ್ಲದರ ಬಗೆಗೂ ಈ ಲೇಖನದಲ್ಲಿ ವಿವರಗಳನ್ನು ಹಂಚಿಕೊಂಡಿದ್ದೇನೆ.

ಈಗ ರಾಜಧಾನಿ ಬೆಂಗಳೂರು ವಾಸ್ತವವಾಗಿ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲು ರೆಡಿ ಆಗುತ್ತಿದೆಯೆ? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಸದೃಢವಾಗಿ ಸಿದ್ದರಾಮಯ್ಯ ಅವರನ್ನು 2023 ರಲ್ಲಿ ಆಡಳಿತದ ಪೀಠದಲ್ಲಿ ಸ್ಥಿರಗೊಳಿಸಿದ್ದೇ ಶನಿ ಗ್ರಹ ಎನ್ನಬಹುದು. ಆದಾಗ್ಯೂ, ಈಗ ಯಾಕೆ ಸುಮಾರು ಆರು ತಿಂಗಳಿನಿಂದಲೂ ಪದೇಪದೇ ಸಮಸ್ಯೆಯ ಸುಳಿಯಲ್ಲಿ (ಮೇಲೆತ್ತಿ ಅನುಗ್ರಹಿಸಿದ್ದ) ಈ ಶನಿ ಗ್ರಹವೇ ಸುತ್ತಿಸುತ್ತಿ ಇದೀಗ ಬಸವಳಿಸುತ್ತಿದೆ ಅವರನ್ನು?

ಇಲ್ಲಾ ಎಂದಾದರೆ, ಬಹು ವಿಭಿನ್ನ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ಇನ್ನೂ ಸಾಕಷ್ಟು ಗಟ್ಟಿ ಮಾಡಲು, ತಾವಾಗಿಯೇ ಅವರು ವಿಶಿಷ್ಟವಾದ ಶಕ್ತಿ ಸಂಪಾದಿಸಿಕೊಳ್ಳಲಿ ಎಂಬುದಕ್ಕೆ ನಿಗೂಢವಾಗಿ ಶನಿ ಗ್ರಹ ಅವರನ್ನು ಸಜ್ಜುಗೊಳಿಸುತ್ತಿದ್ದೆಯೇ? ಇವೆಲ್ಲ ಸಿದ್ದರಾಮಯ್ಯನವರ ಬಗೆಗಾಗಿ ಸದ್ಯದ ಗೋಚಾರದಲ್ಲಿನ (ಸದ್ಯದ ಗ್ರಹಗಳ ಸ್ಥಿತಿಗತಿಗಳ ಮೂಲಕ ಗ್ರಹಿಸಿ) ಗ್ರಹಗಳ ಮೂಲಕವಾಗಿ ಎದ್ದ ಸದ್ಯದ ಪ್ರಶ್ನೆಗಳು. ಹಳ್ಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರ ಏಳ್ಗೆಗೆ ಕಾರಣವಾದುದು ಶನೈಶ್ಚರ ಸ್ವಾಮಿಯ ಕೃಪೆ ಎಂದೇ ಹೇಳಬೇಕು. ಅವರ ಜೀವನದ ಈವರೆಗಿನ ಸಾಫಲ್ಯಗಳನ್ನು ವಿಶ್ಲೇಷಿಸಿ ಹೇಳುವುದಾದರೆ ಶನೈಶ್ಚರನ ಪಾತ್ರ ದೊಡ್ಡದು. ಜತೆಗೆ ಚಂದ್ರ ಗ್ರಹವೂ ಅವರಿಗೆ ಸಾಕಷ್ಟು ಬೆಂಬಲಿಸುತ್ತಲೇ ಬಂದಿದ್ದಾನೆ. ಹೌದು, ಈ ಕೃಪೆ, ಅನುಗ್ರಹ ಇರದೇ ಹೋಗಿದ್ದರೆ ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಸಿದ್ದರಾಮಯ್ಯ ಬೀಳುತ್ತಲೇ ಇರಲಿಲ್ಲ. ತಮ್ಮ ಪತ್ರಿಕೆಯಲ್ಲಿ ಲಂಕೇಶ್ ಕೂಡಾ ಆಗ ಎಳೆ ವಯಸ್ಸಿನ ಉತ್ಸಾಹಿ ಸಿದ್ದರಾಮಯ್ಯನವರ ಬಗ್ಗೆ ಗಮನ ಸೆಳೆಯುತ್ತಲೇ ಇದ್ದರು.

ಸಿದ್ದರಾಮಯ್ಯನವರ ಜನ್ಮ ಕುಂಡಲಿ:

ವಾಸ್ತವವಾಗಿ ಸಿದ್ದರಾಮಯ್ಯನವರ ಜನ್ಮ ಕುಂಡಲಿಯೇ ಲಭ್ಯವಿಲ್ಲ. ಸರಿಯಾದ ಜನ್ಮ ದಿನಾಂಕ, ಹುಟ್ಟಿದ ಸಮಯ ಅವರಿಗೇ ಸರಿಯಾಗಿ ಲಭ್ಯವಿಲ್ಲ. ಆದರೆ ಅವರ ಶಿಕ್ಷಣ, ರಾಜಕೀಯ ಜೀವನದ ಏಳು ಬೀಳುಗಳು, ಟಿಪ್ಪಣಿಗಳನ್ನು ಇಟ್ಟುಕೊಂಡು, ಕೂಲಂಕಷವಾಗಿ ಇವುಗಳನ್ನು ಪರೀಕ್ಷಿಸಿ, ಗ್ರಹಿಸಿ ಹೇಳುವುದಾದರೆ ಶನಿ ಗ್ರಹ ಹಾಗೂ ಚಂದ್ರ ಗ್ರಹ ಇವರನ್ನು ಮೇಲಕ್ಕೆತ್ತಿ ಮುಖ್ಯಮಂತ್ರಿಯಾಗಿ ಮಿಂಚಲು ಸಹಾಯ ಮಾಡಿದ್ದು ಅಪ್ಪಟ ಸತ್ಯ. ತುಸು ಒರಟುತನವಿದ್ದಾಗ್ಯೂ ಕ್ಲಪ್ತ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ತಳೆಯಲು ಅವರಿಗೆ ಸಹಕರಿಸುತ್ತಿರುವುದು ಚಂದ್ರ ಗ್ರಹ. ಸಾಮಾನ್ಯ ಕುಟುಂಬದ ಹಿನ್ನೆಲೆಯೊಂದಿಗೆ ಬಂದರೂ, ಶನಿ ಗ್ರಹವು ಸೂಕ್ತ ಸಂದರ್ಭದಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ಜತೆ ಸಂಪರ್ಕ ಬರುವಂತೆ ಮಾಡುತ್ತಿತ್ತು.

ಅವರು ಮುಖ್ಯಮಂತ್ರಿಯಾಗುವ ಯೋಗ ಸಿದ್ಧಿಸಿದಲ್ಲಿಂದ ಶುರು ಹಚ್ಚಿದರೆ, 2013ರಿಂದ 2018ರ ತನಕದ ತನ್ನದೇ ಆದ ಶಕ್ತಿ ಸಂಚಯಿಸಿಕೊಂಡು, ಮುಖ್ಯಮಂತ್ರಿಯ ಪಟ್ಟದಲ್ಲಿ ಪ್ರಶ್ನಾತೀತ ಬಲದೊಂದಿಗೆ ಮಿಂಚಿದವರು ಸಿದ್ದರಾಮಯ್ಯ. ಆಗಲೂ ಇವರನ್ನು ಪ್ರಬಲರನ್ನಾಗಿ ಮಾಡಿದ್ದು ಶನಿ ಗ್ರಹವೇ. ತುಲಾ ರಾಶಿಯಲ್ಲಿ ಪರಮೋಚ್ಚ ಶಕ್ತಿ ಹೊಂದಿದ್ದ ಶನಿ ಗ್ರಹ ಇವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಅಗಾಧವಾಗಿ ಮಿಂಚಿಸಿತು ಅನ್ನಬಹುದು. ಆದರೆ ಬೆಂಕಿಯ ರಾಶಿಯಾದ ಧನಸ್ಸು ರಾಶಿಗೆ ಶನಿ ಗ್ರಹ ಬಂದಾಗ ಸಿದ್ದರಾಮಯ್ಯ ದುರ್ಬಲರಾದರು. ಅಂದರೆ ಶನಿ ಗ್ರಹ, ಬೆಂಕಿಯ ರಾಶಿಯಾದ ಧನಸ್ಸು ರಾಶಿಗೆ ಬಂದಾಗಲೇ ಮೈಸೂರಿನಲ್ಲಿ ಸೋತರು. ಬಾದಾಮಿಯಲ್ಲಿ ಅಲ್ಪ ಬಹುಮತದೊಂದಿಗೆ ಗೆದ್ದರು. ಬಾದಾಮಿಯಲ್ಲಿ ಗೆದ್ದರೂ ಸಿದ್ದರಾಮಯ್ಯ ದಟ್ಟವಾಗಿ ಸೋತ ನಾಯಕನೇ ಆದರು. ಮುಖ್ಯಮಂತ್ರಿ ಆಗುವ ಯೋಗ (ಬೆಂಕಿಯ ರಾಶಿಯಾದ ಧನಸ್ಸು ರಾಶಿಯಲ್ಲಿ ಇವರಿಗೆ ಅನುಕೂಲವಾಗಬೇಕಿದ್ದ ಶನಿ ಗ್ರಹವೇ ಬೇಯತೊಡಗಿತ್ತು.) 2018 ರಲ್ಲಿ ಕೂಡಿಬರಲಿಲ್ಲ.

ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್:

ವಿವಂಚನೆಯ ವಿಷಯವಾದರೂ 2018ರಲ್ಲಿ ಒಂದು ಪವಾಡ ಎಂಬಂತೆ ಕಾಂಗ್ರೆಸ್ ಪಕ್ಷ ಷರತ್ತುಗಳೇ ಇರದೆ, ಜೆಡಿಎಸ್ ಪಕ್ಷದೊಂದಿಗೆ ಕೈ ಜೋಡಿಸಿದ್ದು ಸಿದ್ದರಾಮಯ್ಯನವರಿಗೆ ಅಷ್ಟೊಂದು ಸಮಾಧಾನದ ವಿಷಯ ಆಗಿರಲಿಲ್ಲ. ಆದರೂ ಅಸಮಾಧಾನವನ್ನು ನುಂಗಿಕೊಳ್ಳಬೇಕಾಯಿತು. ಧನಸ್ಸು ರಾಶಿಗೆ ಪ್ರವೇಶಮಾಡಿದ್ದ ಶನಿ ಗ್ರಹ ದುರ್ಬಲವಾಗಿ ಸಿದ್ದರಾಮಯ್ಯ ಅವರನ್ನು ಕೈ ಬಿಟ್ಟಿದ್ದ ಎಂಬುದು ಸರಿಯೇ. ಆದರೆ ಅವರ ಪಾಲಿಗೆ ಯಾವಾಗಲೂ ಇನ್ನೊಂದು ರೂಪದಲ್ಲಿ ಸದಾ ಸಹಕರಿಸುವ ಚಂದ್ರ ಗ್ರಹ ಸಿದ್ದರಾಮಯ್ಯನವರ ತಂತ್ರಗಾರಿಕೆಗೆ ಬೇಕಾದ ವ್ಯವಧಾನವನ್ನು ಒದಗಿಸಿದ್ದ ಎಂಬುದು ಗಮನಾರ್ಹವಾಗಿತ್ತು. ಹದಿನಾಲ್ಕು ತಿಂಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ - ಜೆಡಿಎಸ್ ಜೋಡಿ ಅಧಿಕಾರ ಕಳಕೊಂಡು ಬಿಜೆಪಿ ಪಕ್ಷ ಯಡಿಯೂರಪ್ಪ ನಾಯಕತ್ವದಲ್ಲಿ ಅಧಿಕಾರಕ್ಕೆ ಬಂತು. ನೇರವಾಗಿ ಈ ಬೆಳವಣಿಗೆಗೆ ಸಿದ್ದರಾಮಯ್ಯನೇ ಕಾರಣರು ಎಂಬ ಮಾತುಗಳು ಹಲವು ಮಾಧ್ಯಮಗಳಲ್ಲಿ, ಹಲವರ ಬಾಯಲ್ಲಿ ಸಹಜವಾಗಿಯೇ ಇದ್ದವು. ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಸಹಕರಿಸಿದರು ಎಂದು ನೇರವಾಗಿ ಅವರನ್ನು ಟೀಕಿಸಿದವರೂ ಇದ್ದರು. ಆದಾಗ್ಯೂ ವಿಧಾನಸಭೆಯ ವಿರೋಧಪಕ್ಷ ನಾಯಕನಾಗಿ ಸಿದ್ದರಾಮಯ್ಯ ಅವರೇ ನಿಯುಕ್ತಗೊಂಡರು. ಖಾರವಾಗಿ ಮಾತನಾಡಿ, ಜೋರಾಗಿಯೇ ಬಿಜೆಪಿಯನ್ನು ಇಕ್ಕಟ್ಟಿಗೂ ಸಿಲುಕಿಸುತ್ತಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ನ ಬಲವಾದ ಬಂಡವಾಳವೇ ಸಿದ್ದರಾಮಯ್ಯ ಎಂಬುದು ಇದರಿಂದ ಸಾಬೀತಾಯಿತು.

2023ರಲ್ಲಿ ಮತ್ತೆ ಮೇಲೇಳಿಸಿದ ಶನಿ ಗ್ರಹ:

ನಿಸ್ಸಂಶಯವಾಗಿ ಶನಿ ಗ್ರಹವೇ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಮತ್ತೆ ಬೆಂಬಲಕ್ಕೆ ಬಂತು. ಅಹಿಂದ ಕಾರ್ಡ್ ಸಿದ್ದರಾಮಯ್ಯ ಅವರನ್ನು ಕೈ ಬಿಡಲಿಲ್ಲ. 'ಅಹಿಂದ'ದ ಜೀವರಸಾಯನಕ್ಕೆ ಅರ್ಥ ಒದಗಿಸಿದವರೇ ಸಿದ್ದರಾಮಯ್ಯ. 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತು. ಕರ್ನಾಟಕ ಬಿಜೆಪಿಯ ಒಳ ಜಗಳವೋ, ಸರಿಯಾದ ನಿಲುವು ತಳೆಯಲು ಸಾಧ್ಯವಾಗದೇ ಹೋದ ಬಿಜೆಪಿಯ ಹೈಕಮಾಂಡ್ ಸಂದಿಗ್ಧತೆಯೋ, ಚುನಾವಣೆಯ ದಿನಗಳು ಹತ್ತಿರ ಬಂದಾಗಲೂ ಒಕ್ಕಟ್ಟಿನಲ್ಲಿ ಸಿದ್ಧಿ ಇದೆ ಎಂಬುದನ್ನು ತಿಳಿಯಲಾಗದೇ ಹೋದ ಆಡಳಿತ ಪಕ್ಷವಾದ ಬಿಜೆಪಿಯನ್ನು ಜನ ತಿರಸ್ಕರಿಸಿದ್ದರು.

ಅತ್ತ, ಬಡವರ ಭಾಗ್ಯದ ಯೋಜನೆಗಳು 2023ರ ಚುನಾವಣೆಯ ಗೆಲುವಿನ ದಾಳಗಳಾದವು ಕಾಂಗ್ರೆಸ್ಗೆ. ಈ ದಾಳಗಳನ್ನು ಚಾಣಾಕ್ಷತನದಿಂದ ಉರುಳಿಸಿದ ಕೀರ್ತಿ ಸಿದ್ದರಾಮಯ್ಯ ಅವರದು. ಚುನಾವಣಾ ಪ್ರಚಾರ ಸಭೆಯಲ್ಲಿ ಹಾಸ್ಯಭರಿತ ಮಾತಿನ ಮೊನಚುಗಳೊಡನೆ ಮಾತನಾಡತೊಡಗಿದರು. ಇದರ ಪರಿಣಾಮವಾಗಿ ನಿರೀಕ್ಷಿತ ಸಂಖ್ಯೆಗೂ ಮೀರಿ ಪಡೆದ ಬಹುಮತ ಅದ್ಭುತವಾಗಿತ್ತು. ಈ ಅಂದಾಜು ಮೀರಿದ ಗೆಲುವು ಸಿದ್ದರಾಮಯ್ಯನವರಿಗೆ ವಿಸ್ಮಯದ ಸಂಗತಿಯಾಗಿತ್ತು. ಎಂಎಲ್ಎಗಳ ಬೆಂಬಲ ಸಿದ್ದರಾಮಯ್ಯ ಅವರಿಗೇ ಜಾಸ್ತಿ ಇತ್ತು. ಹೀಗಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಕಾತರಿಸಿದ್ದ ಡಿ.ಕೆ.ಶಿವಕುಮಾರ್ ತಾಳ್ಮೆ ವಹಿಸಿದರು. ಹೈಕಮಾಂಡ್ ಸೂಚನೆಯ ಮೇರೆಗೆ ಎಲ್ಲವೂ ಸರಿಯಾಗಿದೆ ಎಂಬುದನ್ನು ಬಿಂಬಿಸಿ ಸಿದ್ದರಾಮಯ್ಯ ಉತ್ಸಾಹದೊಂದಿಗೆ ಮತ್ತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು.

ಮುಖ್ಯಮಂತ್ರಿಯಾಗಿ ಸರಿ ಹೋಗುತ್ತಿರುವಂತೆಯೇ 'ಎಲ್ಲವೂ ಸರಿ ಇಲ್ಲ' ಎಂಬುದನ್ನು ಕ್ರಮೇಣ ಮಾಧ್ಯಮಗಳು ಚರ್ಚಿಸುತ್ತಲೇ ಹೋದವು. ಕಾಂಗ್ರೆಸ್ನಲ್ಲಿ ಪಂಗಡಗಳಾದವು ಎಂಬುದಂತೂ ಸ್ಪಷ್ಟ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊರೆತ ದೊಡ್ಡ ಯಶಸ್ಸಿನಿಂದಾದ ಕಾಂಗ್ರೆಸ್ ಮುಖ ಭಂಗ, ಬಡವರ ಭಾಗ್ಯದ ಯೋಜನೆಗಳ ನಿರ್ವಹಣೆಯಲ್ಲಿನ ತೊಡಕುಗಳು, ಏಕಾಏಕಿ ಹಲವು ರೀತಿಯ ಬೆಲೆ ಏರಿಕೆಗಳು, ಸ್ಟ್ಯಾಂಪ್ ಡ್ಯೂಟಿ ಶುಲ್ಕ ಏರಿಕೆ, ಮದ್ಯದ ಬೆಲೆ ಏರಿಕೆ, ವಾಲ್ಮೀಕಿ ನಿಗಮದ ಹಗರಣದ ಕಾವು, ಮುಡಾ ಹಗರಣದ ಬಿಸಿ ಮುಂತಾದವು ಸಿದ್ದರಾಮಯ್ಯನವರನ್ನು ಆರಾಮವಾಗಿ ಇರಲು ಕ್ರಮೇಣ ಬಿಡದಾದವು. ಎಲ್ಲವೂ ಬ್ರೇಕಿಂಗ್ ನ್ಯೂಸ್ ಆಗಿ ಮಾಧ್ಯಮಗಳಲ್ಲಿ ಸದ್ದು ಮಾಡತೊಡಗಿದವು. ಈ ನಡುವೆ, ಶನಿ ಗ್ರಹ ಮೀನ ರಾಶಿಗೆ ಪ್ರವೇಶಿಸುತ್ತಿದ್ದಂತೆ (ಅಂದರೆ 2025 ಮಾರ್ಚ್ ತಿಂಗಳ ಅಂತ್ಯದಲ್ಲಿ) ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೆ ಧಕ್ಕೆ ಬಂತೆಂಬಂತೆ ಹಲವು ಘಟನೆಗಳು ಹರಳುಗಟ್ಟತೊಡಗಿದವು. RCB ತಂಡದ ಗೆಲುವು, ನಂತರದ ಕಾಲ್ತುಳಿತ ಪ್ರಸಂಗಗಳು ಬಹುರೀತಿಯ ಘಾತಕ ಕ್ರಿಕೆಟ್ ಚೆಂಡಿನಂತೆ ಬಂದು ಬಡಿಯಿತು. ಹೈಕಮಾಂಡ್ ಕಡೆಯಿಂದ ಸುರ್ಜೇವಾಲಾ ಬಂದು ಕಾಂಗ್ರೆಸ್ ಶಾಸಕರೊಡನೆ ಒನ್-ಟು-ಒನ್ ಮಾತುಕತೆಗೆ ಬಂದು ಕುಳಿತರು. "ಪೂರ್ತಿ ಐದು ವರ್ಷಗಳ ಅವಧಿಗೆ ತಾನೇ ಕರ್ನಾಟಕ ರಾಜ್ಯದ ಶಿಖರಾಗ್ರದಲ್ಲಿ" ಎಂದು ಆಂಗ್ಲ ಪತ್ರಿಕೆಯವರನ್ನು ಕರೆಸಿ ಹೇಳುವ ಸನ್ನಿವೇಶ ಸಿದ್ಧರಾಮಯ್ಯ ಅವರಿಗೆ ಬಂತು. ಅಂತೂ ತಾಪತ್ರಯಗಳು ಒಂದೇ, ಎರಡೇ?

ಜಲ ತತ್ವದ ಮೀನ ರಾಶಿ ಶನಿ ಗ್ರಹಕ್ಕೆ ಅಪಥ್ಯವಾಯ್ತು:

ತನ್ನ ಒಡೆತನದ ಕುಂಭ ರಾಶಿಯನ್ನು ತೊರೆದು ಜಲ ತತ್ವದ ಮೀನ ರಾಶಿಗೆ ಶನಿ ಗ್ರಹ ಕಾಲಿಡುತ್ತಿದ್ದಂತೆ ಹಲವಾರು ರೀತಿಯಲ್ಲಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೆ ಸವಾಲುಗಳು ಎದುರಾಗತೊಡಗಿದವು. "ಅಧಿಕಾರವನ್ನು ಒದ್ದು ಪಡೆಯಬೇಕು ಎಂಬುದು ನನಗೆ ಗುರು ಬೋಧನೆ ಆಗಿದೆ" ಎಂದು ವಿಧಾನಸಭಾ ಕಲಾಪದಲ್ಲೇ ಡಿಸಿಎಂ ಶಿವಕುಮಾರ್ ಹೇಳಿದ ಮಾತು ತುಂಬಾ ಸದ್ದು ಮಾಡಿತು. ಇಂಗ್ಲಿಷ್ ಪತ್ರಿಕೆಗಳಿಗೆ ಶಿವಕುಮಾರ್ ಕೊಟ್ಟ ಇಂಟರ್ವ್ಯೂ ಕೂಡಾ ಸಿದ್ದರಾಮಯ್ಯ ಅವರನ್ನು ಗಲಿಬಿಲಿಗೊಳಿಸುವಂತಿತ್ತು. 2025ರ ಏಪ್ರಿಲ್ ಪ್ರಾರಂಭದಿಂದ ಸುಮಾರು 2026ರ ಮಕರ ಸಂಕ್ರಾಂತಿಯವರೆಗೂ ಅನೇಕ ರೀತಿಯ ಬಿಕ್ಕಳಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸಬೇಕಾಗಬಹುದು ಎಂಬುದರ ಮುನ್ಸೂಚನೆಗಳು ಶುರುಗೊಂಡಿವೆ ಎಂಬುದಂತೂ ಸುಳ್ಳಲ್ಲ. ಸಹಕರಿಸಬೇಕಾದ ಶನಿ ಗ್ರಹ ಮೀನ ರಾಶಿಯಲ್ಲಿ ಈಗ ದುರ್ಬಲವಾಗಿದ್ದಾನೆ ಸಿದ್ದರಾಮಯ್ಯನವರಿಗೆ. ಅದೂ ಈಗ ಪೂರ್ವಾಭದ್ರ ನಕ್ಷತ್ರ ಮಂಡಲದಲ್ಲಿ ತೆವಳಾಡುತ್ತಿದ್ದಾನೆ. ವರ್ತಮಾನದ ಬಿಸಿ ಸಿದ್ದರಾಮಯ್ಯನವರಿಗೆ ವಿರುದ್ಧವಾಗಿದೆ.

ಶನಿ ಗ್ರಹ, ಕಾಲ ಪುರುಷನ ನಷ್ಟದ ಸ್ಥಳದಲ್ಲಿ ಈಗ ಇದೆ. ಹಾಗೂ ರಾಹುವಿನ ಜತೆಗೂ ಶನಿ ಗ್ರಹ ನಿಗೂಢ ಸಿರಿ ಹಾಗೂ ನಷ್ಟಗಳ ತೂಗುಯ್ಯಾಲೆಯನ್ನು (ದ್ವಿದ್ವಾದಶ ಸ್ಥಿತಿ ಎಂದು ಭಾರತೀಯ ಜ್ಯೋತಿಷವು ಇದನ್ನು ಹೆಸರಿಸುತ್ತದೆ.) ಆಡುತ್ತಿದ್ದಾನೆ. ಈ ಸ್ಥಿತಿಯಿಂದಾಗಿ ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ಸವಾಲನ್ನು ಇನ್ನೂ ಹತ್ತು ತಿಂಗಳು ಸಿದ್ದರಾಮಯ್ಯ ಎದುರಿಸಲೇ ಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದ ಒಡೆಯುವಿಕೆಗೂ ಇದು ಅವಕಾಶ ಒದಗಿಸಬಹುದಾದ ಸಾಧ್ಯತೆ ಅಧಿಕ. ಎದುರಾಳಿಯಾದ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಸಾಧ್ಯವಾಗುವ ಸ್ಥಿತಿ ಇದೆಯೇ ಎಂದು ಕೇಳಿದರೆ "ಹೌದು" ಎನ್ನಲು ಯಾರೂ ಸಿದ್ಧರಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಪಾಲಿಗೆ ಕರ್ನಾಟಕ ಮೃದುವಾಗಬಹುದೇ ಎಂಬುದೂ ತಿಳಿಯದು. (ಇವರ ಜನ್ಮ ಕುಂಡಲಿಯೂ ಲಭ್ಯವಿಲ್ಲ.)

ಮತ್ತೆ ಮಧ್ಯಕಾಲೀನ ಚುನಾವಣೆಗೆ ಅವಕಾಶ ಆಗಬಹುದೆ? ಆದರೆ ಸದ್ಯ ಚುನಾವಣೆ ಎದುರಿಸಲು ಯಾರೂ ಸಿದ್ಧರಿಲ್ಲ ಎಂಬುದೇ ಸಿದ್ದರಾಮಯ್ಯನವರ ಸದ್ಯದ ಅದೃಷ್ಟವಾಗಿದೆ. ಇದು ಸದಾ ಅವರ ನೆರವಿಗೆ ಬರುವ ಚಂದ್ರನ ಅನುಗ್ರಹದ ಫಲ. 2026 ಏಪ್ರಿಲ್ ಹೊತ್ತಿಗೆ ಕಾರ್ಮೋಡಗಳೆಲ್ಲ ಸಿದ್ದರಾಮಯ್ಯನವರ ಪಾಲಿಗೆ ಸಂಪೂರ್ಣವಾಗಿ ದೂರವಾಗಿಯೇ ತೀರುತ್ತವೆಯೇ ಎಂಬುದು ಗ್ರಹಗಳ ಅಂದಿನ ನಡೆಗಳನ್ನು ಊಹಿಸಿ ಹೇಳಬಹುದು. (ಯಾಕೆಂದರೆ ಶನಿ ಗ್ರಹ ತನ್ನ ಆಧಿಪತ್ಯದ ಉತ್ತರಾಭಾದ್ರ ನಕ್ಷತ್ರ ಮಂಡಲವನ್ನು ಆಗ ಪ್ರವೇಶಿಸುತ್ತದೆ.) ಆದಾಗ್ಯೂ ಅಲ್ಲಿಯ ತನಕ...? ಸುಡು ಕೆಂಡದ ಮೇಲೇ ಇರಬೇಕಾದ ಸ್ಥಿತಿಯಂತೂ ಸಿದ್ದರಾಮಯ್ಯನವರಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.