ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದ ಕಾರ್ಯಗಳು ಅಡೆತಡೆಗಳಿಲ್ಲದೆ ನಡೆಯುತ್ತವೆ ಎಂಬ ನಂಬಿಕೆಯಿದೆ. ನಿರ್ವಿಘ್ನವಾಗಿ ಕೆಲಸ ಕಾರ್ಯಗಳನ್ನು ನೆರವೇರಿಸುವ ಗಣಪ ವಿದ್ಯೆ, ಬುದ್ದಿ ನೀಡುವ ಮೂಲಕ ಮಕ್ಕಳಿಗೂ ಪ್ರೀತಿಪಾತ್ರ.

ಆದಿ ಶಂಕರರಿಂದ ಪೂಜಿಸಲ್ಪಟ್ಟ 'ಪಂಚಾಯತನ ಪೂಜೆ"ಯಲ್ಲಿ ಬರುವ ಐದು ದೇವತೆಗಳಲ್ಲಿ ಗಣೇಶ ಒಬ್ಬನಾಗಿದ್ದಾನೆ.

ಗಣಾಧಿಪತಿ : ಜಗತ್ತಿನ ಪ್ರತಿ ಚರಾಚರ ವಸ್ತುಗಳನ್ನು ಮನುಷ್ಯ ಗಣ, ಪ್ರಾಣಿ ಗಣ, ಪಕ್ಷಿ ಗಣ ಹೀಗೆ ಹಲವು ಗಣವಾಗಿ ವಿಂಗಡಿಸಲಾಗಿದೆ. ಇವೆಲ್ಲವಕ್ಕೂ ಈ ಶಿವಸುತ ಅಧಿಪತಿಯಾದ್ದರಿಂದ ಅವನನ್ನು "ಗಣಾಧಿಪತಿ" ಅಥವ "ಗಣಪತಿ" ಎಂದು ಕರೆಯುತ್ತಾರೆ.

ಪ್ರಣವರೂಪಿ ಗಣಪ : ಒಮ್ಮೆ ಕೈಲಾಸ ಪರ್ವತ ಮಂಟಪದಲ್ಲಿ ಸಪ್ತಕೋಟಿ ಮಂತ್ರಗಳ ಮೇಲೆ ಶಿವ ಪಾರ್ವತಿಯರ ದೃಷ್ಟಿ ಬೀಳುತ್ತದೆ. ಆಗ ಪ್ರಣವ (ಓಂಕಾರ) ಮಂತ್ರದಿಂದ ಭಗವಾನ್ ಶ್ರೀ ಮಹಾಗಣಪತಿ ಆವಿರ್ಭವಿಸುತ್ತಾನೆ. ಆದ್ದರಿಂದ ಗಣಪನಿಗೆ ಪ್ರಣವ ಸ್ವರೂಪನೆಂದು ಹೇಳುತ್ತಾರೆ. ಗಣೇಶನೇ 'ಓಂ"ಕಾರ ಎಂದು ಹೇಳುತ್ತಾನೆ. ಓಂ ಕಾರ ಶಬ್ದವೇ ಎಲ್ಲ ಶ್ಲೋಕಗಳ ಮೂಲ ಶಬ್ದ. ಓಂ ಕಾರದ ಶಬ್ದದಿಂದಲೇ ಎಲ್ಲ ಮಂತ್ರಗಳು ಉಗಮಿಸಿರುವುದು ಎಂದು ಹೇಳಲಾಗುತ್ತದೆ. ಗಣೇಶನ ಚಿತ್ರವನ್ನು ಪಾರ್ಶ್ವದಿಂದ ನೋಡಿದಲ್ಲಿ ಓಂ ಕಾರವನ್ನು ಹೋಲುತ್ತದೆ.

ವೇದ ವಂದಿತ ಗಣಪ: ನಮ್ಮ ಸಂಸ್ಕೃತಿಯ ಗರಿಮೆಯಾದ ವೇದಗಳಲ್ಲಿ ಗಣಪತಿಯ ಪ್ರಸ್ತಾವನೆ ಇದೆ. ಋಗ್ವೇದದಲ್ಲಿ "ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ" ಎಂದು ಗಣಪತಿಯ ಪ್ರಸ್ತಾಪವಿದೆ. ಈ ಮಂತ್ರವು ಗಣಪತಿಯು ಗಣಗಳ ಪತಿ ಎಂದಷ್ಟೇ ಅಲ್ಲದೆ, ಬ್ರಹ್ಮ-ರುದ್ರಗಳಿಗೂ ಪತಿ ಎಂದು ವರ್ಣಿಸುತ್ತದೆ. ಯಜುರ್ವೇದದಲ್ಲಿ "ಗಣೇಭ್ಯೋ ಗಣಪತಿ ನಮಃ" ಎಂಬ ಮಂತ್ರವಿದೆ. ಅಥರ್ವ ವೇದದಲ್ಲಿ ಗಣಪತಿ ಹೆಸರುಗಳುಳ್ಳ ಒಂದು ಪ್ರತ್ಯೇಕ ಉಪನಿಷತ್ತೇ ಇದೆ.

ಪುರಾಣಗಳಲ್ಲಿ ಗಣಪ: ಹದಿನೆಂಟು ಪ್ರಧಾನ ಪುರಾಣಗಳಲ್ಲಿ ಭಾಗವತ ಪುರಾಣವು ಹೇಗೆ ಅತ್ಯುತ್ತಮವೆನಿಸಿದೆಯೋ ಅದರಂತೆ 18 ಉಪ ಪುರಾಣಗಳಲ್ಲಿ ಶ್ರೀ ಗಣೇಶ ಪುರಾಣವು ಅತಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಇದಕ್ಕೆ ಕಾರಣ ಅವುಗಳಲ್ಲಿ ಅಡಗಿರುವ ಆಧ್ಯಾತ್ಮಿಕ ತತ್ವವಾದವಾಗಿದೆ.

ಗಜಾನನ : ಹುಟ್ಟಿನಿಂದಲೇ ಗಣಪನ ಮುಖ ಆನೆಯದ್ದಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ಸ್ನಾನಕ್ಕೆ ಹೊರಟ ಪಾರ್ವತಿಯು ಮೈಮಣ್ಣಿನಿಂದ ಒಬ್ಬ ಬಾಲಕನನ್ನು ಸೃಷ್ಟಿ ಮಾಡಿ ಸ್ನಾನ ಗೃಹದ ಕಾವಲು ಕಾಯಲು ಹೇಳಿ ಒಳಗೆ ಹೊರಟಳು. ಬಾಲಕನು ಕಾವಲು ಕಾಯುತ್ತಿರಲು ಹೊರಗಿನಿಂದ ಬಂದ ಪರಶಿವನನ್ನು ಬಾಲಕನು, ತಾಯಿಯ ಆಜ್ಞೆಯಂತೆ ಅಡ್ಡಗಟ್ಟಿದನು. ತನ್ನ ಮನೆಯಲ್ಲಿ ತನ್ನನ್ನೇ ಅಡ್ಡಗಟ್ಟಿದ ರೋಷಕ್ಕೆ ತ್ರಿಶೂಲದಿಂದ ಬಾಲಕನ ತಲೆಯನ್ನೇ ಶಿವನು ತೆಗೆಯುತ್ತಾನೆ. ನಂತರ ವಿಷಯ ತಿಳಿದು ತನ್ನ ಗಣರಿಗೆ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾರದೇ ತಲೆಯನ್ನು ತನ್ನಿರೆಂದು ಹೇಳುತ್ತಾನೆ. ಅವರು ಆನೆಯ ತಲೆಯನ್ನು ತಂದುಕೊಟ್ಟರು. ಗಣಪನಿಗೆ ಆನೆಯ ತಲೆಯನ್ನು ಜೋಡಿಸಿ ಪ್ರಾಣ ತುಂಬಿದಾಗ ಗಜಾನನನಾಗಿ ಮರುಜನ್ಮ ಪಡೆದನು.

ವಕ್ರತುಂಡ:

"ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ"

ಗಣೇಶನನ್ನು ವಕ್ರತುಂಡ ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನಮಗೆಲ್ಲ ತಿಳಿದ ಒಂದು ಕಥೆ ಇದೆ. ಒಮ್ಮೆ ಹೀಗೆ ಹೊಟ್ಟೆ ತುಂಬ ಉಂಡು ಮೂಷಿಕವನ್ನೇರಿ ಗಣೇಶನು ಬರುತ್ತಿದ್ದಾಗ, ದಾರಿಯಲ್ಲಿ ಒಂದು ಹಾವನ್ನು ಕಂಡು ಮೂಷಿಕ ಭಯಗೊಂಡು, ಗಣೇಶನನ್ನು ಬೀಳಿಸಿ ಓಡಿತಂತೆ. ಕೆಳಕ್ಕೆ ಬಿದ್ದ ಗಣಪ ಹೊಟ್ಟೆ ಒಡೆದು, ತಿಂದ ಕಡುಬೆಲ್ಲ ನೆಲಕ್ಕೆ ಬೀಳಲು, ಅವನು ಅದನ್ನೆಲ್ಲಾ ತನ್ನ ಹೊಟ್ಟೆಗೆ ತುಂಬಿಸಿ, ಸರಿದು ಹೋಗುತ್ತಿದ್ದ ಹಾವನ್ನೇ ತನ್ನ ಹೊಟ್ಟೆಗೆ ಕಟ್ಟಿಕೊಂಡನಂತೆ. ಇವೆಲ್ಲವನ್ನೂ ಮೇಲಿನಿಂದ ನೋಡುತ್ತಿದ್ದ ಚಂದ್ರ ಜೋರಾಗಿ ನಗುತ್ತಾನೆ. 'ನೀನು ಕ್ಷೀಣಿಸಿ ಹೋಗು" ಎಂದು ಶಾಪವನ್ನು ಗಣೇಶನು ನೀಡುತ್ತಾನೆ. ಈ ಶಾಪದಿಂದಾಗಿ ಚಂದ್ರನು ಶುಕ್ಲ ಪಕ್ಷದಲ್ಲಿ ವೃದ್ದಿಸುತ್ತಾನೆ. ಕೃಷ್ಣಪಕ್ಷದಲ್ಲಿ ಕ್ಷೀಣಿಸುತ್ತಾನೆ.

ಏಕದಂತ : ವೇದವ್ಯಾಸರು ಮಹಾಭಾರತವನ್ನು ಬರೆಯುವಾಗ ತಾವು ಹೇಳುವ ಶ್ಲೋಕಗಳನ್ನು ಬರೆಯಲು ಗಣೇಶನೇ ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಅವನನ್ನು ಕೇಳುತ್ತಾರೆ. ಗಣೇಶನು ವ್ಯಾಸರು ಸ್ವಲ್ಪವೂ ನಿಲ್ಲಿಸದೆ ಶ್ಲೋಕಗಳನ್ನು ಹೇಳಿದರೆ ಮಾತ್ರ ತಾನು ಬರೆಯುವುದಾಗಿ ತಿಳಿಸಿದನಂತೆ. ಅದಕ್ಕೆ ಪ್ರತಿಯಾಗಿ ವ್ಯಾಸರು ತಾವು ಹೇಳುವ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿಕೊಂಡು ಬರೆಯಬೇಕೆಂದು ಶರತ್ತು ವಿಧಿಸಿದರಂತೆ. ಬರೆವಣಿಗೆ ಸಾಗುತ್ತಿರಲು ಲೇಖನಿಯಾದ ನವಿಲುಗರಿ ಮುರಿಯಿತು. ಕೂಡಲೇ ಗಣೇಶನು ತನ್ನ ದಂತವನ್ನು ಮುರಿದುಕೊಂಡು ಬರವಣಿಗೆಯನ್ನು ಮುಂದುವರೆಸಿದನು. ಹೀಗಾಗಿ ಅವನ ದಂತವು ತುಂಡಾಯಿತು ಎಂಬ ಕಥೆಯಿದೆ.

ಸಿದ್ಧಿ ವಿನಾಯಕ : ಗಣೇಶನ ಸೊಂಡಿಲು ಸಾಮಾನ್ಯವಾಗಿ ಎಡಗಡೆ ತಿರುಗಿರುತ್ತದೆ. ಅದನ್ನು ಚಂದ್ರನೆಂದು ಹೇಳುತ್ತಾರೆ. ಬಲಗಡೆ ತಿರುಗಿರುವ ಸೊಂಡಿಲುಳ್ಳ ಗಣೇಶನನ್ನು 'ಸಿದ್ಧಿ ವಿನಾಯಕ’ ಎಂದು ಕರೆಯುತ್ತಾರೆ. ಬಲಕ್ಕೆ ತಿರುಗಿರುವ ಸೊಂಡಿಲನ್ನು ಸೂರ್ಯನೆಂದು ಕರೆಯಲಾಗುತ್ತದೆ. ಪೂಜಾವಿಧಿ ಬಹಳ ಶ್ರದ್ದೆಯಿಂದ ನೆಡೆಯಬೇಕು. ಇಲ್ಲದಿದ್ದಲ್ಲಿ ಅದು ಬೆಂಕಿಯ ಸಮಾನ ಎಂದು ಹೇಳುತ್ತಾರೆ.

ವರಸಿದ್ಧಿ ವಿನಾಯಕ : ಬ್ರಹ್ಮನು ಗಣೇಶನಿಗೆ ರದ್ಧಿ ಸಿದ್ಧಿ ಎಂಬ ತನ್ನ ಇಬ್ಬರು ಮಾನಸ ಪುತ್ರಿಯರನ್ನು ಧಾರೆ ಎರೆದು ಕೊಟ್ಟನೆಂಬ ಪ್ರತೀತಿಯಿದೆ. ವಿನಾಯಕ ವ್ರತದಲ್ಲಿ ವಿನಾಯಕನನ್ನು ರದ್ಧಿ ಸಿದ್ಧಿಯರ ಜೊತೆಯಲ್ಲಿ ಪೂಜಿಸುವುದಿಂದ ಶೀಘ್ರವಾಗಿ ವರವನ್ನು ಕರುಣಿಸುತ್ತಾನೆ. ಆದ್ದರಿಂದ ಅವನನ್ನು "ವರಸಿದ್ಧಿ ವಿನಾಯಕ" ಎಂದು ಕರೆಯುತ್ತಾರೆ.

ಸಿಂಧೂರ ವರ್ಣ ಪ್ರಿಯ ಗಣಪ : ಗಣಪತಿಯು ಮೂಲಾಧಾರ ಕ್ಷೇತ್ರ ಸ್ಥಿತ ದೇವತೆ. ಮೂಲಾಧಾರ ತತ್ವವು ಪೃಥ್ವಿತತ್ವ ರಕ್ತವರ್ಣವಾಗಿದೆ. ಗಣಪತಿಗೂ ಇವೆರಡಕ್ಕೂ ನಿಕಟ ಸಂಬಂಧವಿದೆ. ಗಣಪತಿ ಮಣ್ಣಿನ ಮಗ. ಪಾರ್ವತಿಯ ಮೈಮಣ್ಣಿನಿಂದ ಹುಟ್ಟಿದವನು. ಪೃಥ್ವಿ ತತ್ವ ಮಣ್ಣಿಗೆ ಸಂಬಂಧಿಸಿದ್ದು. ಮೂಲಾಧಾರ ಚಕ್ರದ ದಳಗಳ ಬಣ್ಣ ರಕ್ತವರ್ಣವಾಗಿದೆ. ಆದ್ದರಿಂದಲೇ ಗಣಪನು ರಕ್ತಗಂಧಾನುಲಿಪ್ತಾಂಗ ರಕ್ತ ಪುಷ್ಪ ಪೂಜಿತನಾಗಿದ್ದಾನೆ.

ಭಾವೈಕ್ಯತೆ ಸಂಸ್ಕೃತಿಯ ಪ್ರತೀಕ ಗಣಪ : ಸಮಾನತೆ ಭ್ರಾತೃತ್ವವನ್ನು ಸಾಧಿಸಿ ತೋರಿಸಬಹುದೆಂಬುದಕ್ಕೆ ಗಣೇಶನ ಉತ್ಸವಕ್ಕಿಂತ ಬೇರೆ ಉದಾಹರಣೆ ಇಲ್ಲ. ಶ್ರದ್ಧೆ, ಭಕ್ತಿಯೊಂದಿಗೆ ಮನರಂಜನೆ ಸಾಧ್ಯವಾಗುವುದು ಗಣೇಶನ ಹಬ್ಬದಲ್ಲೇ ಹೆಚ್ಚು. ಹೇಗೆಂದರೆ ಗಣೇಶ ತಾನು ಕುಳಿತಿರುವಲ್ಲೇ ಸುಮ್ಮನೆ ಕೂರುವುದಿಲ್ಲ. ಅಲ್ಲಿ ಚಿಣ್ಣರು, ಹುಡುಗರು, ಯುವಕರು ಎಲ್ಲರೂ ತಮ್ಮ ಪ್ರತಿಭಾ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಭಕ್ತಿಗೂ ಕೂಡಾ ಒಂದು ಚಳುವಳಿಯ ರೂಪ ಬರುತ್ತದೆ ಎಂದಾದರೆ, ಅದು ಕೂಡ ಗಣೇಶನಿಂದಲೇ ಎಂದರೆ ಅತಿಶಯೋಕ್ತಿಯೇನಲ್ಲ! ಕೇವಲ ವಿಘ್ನ ವಿನಾಯಕನಲ್ಲದೆ ಸಾಮಾಜಿಕ ಸಂಘಟನೆಗೆ ರೂಪವನ್ನಿತ್ತ ರಾಷ್ಟ್ರೀಯ ಜಾಗೃತಿಗೆ ಒಂದು ಆಯಾಮವನ್ನಿತ್ತ ಸಾಧನೆ ನಮ್ಮ ವಿನಾಯಕನದು.

ಸೀಮಾತೀತ ಗಣಪ : ಭಾರತೀಯ ಸಂಸ್ಕೃತಿಗೆ ದೇಶ ವಿದೇಶಗಳ ಗಡಿಯಿಲ್ಲ, ತರ್ಕ- ವಿತರ್ಕಗಳ ಸೀಮೆಯಿಲ್ಲ, ಈ ಸಂಸ್ಕೃತಿ ಮುಟ್ಟದ ತೀರಗಳಿಲ್ಲ, ನುಸುಳದ ಖಂಡಗಳಿಲ್ಲ, ಪ್ರಭಾವಗೊಳಿಸದ ಪ್ರದೇಶವಿಲ್ಲ. "ಸಭೂಮಿo ವಿಶ್ವತೋವೃತ್ವಾ ಅತ್ಯಷ್ಟತ್ ದಶಾಂಗುಲಂ" ಹೀಗೆ ವಿಶ್ವ ವ್ಯಾಪಿತ್ವದಿಂದ ಭಾರತದ ಹಿರಿಯ ಭಾವಗಳನ್ನು ಕೊಂಡೊಯ್ದು ಎಲ್ಲಾ ಕಡೆಗೂ ಸಮನ್ವಯ ಸಂಸ್ಕೃತಿಯನ್ನು ಗಣಪತಿ ಹರಡಿದ್ದಾನೆ. ಬಹುಶ: ಭಾರತದ ದೇವರುಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದವನೇ ಈ ಗಣೇಶ.

ಲಂಬೋದರ : ಲಂಬೋದರನು ಸ್ಥೂಲಕಾಯದವನಾದ ಗಣೇಶನ ಭಾರವನ್ನು ತಡೆಯಲು ಇಲಿಯಿಂದ ಸಾಧ್ಯವೇ? ಇಲಿಯು ನಾಶದ, ಲೂಟಿಯ ಸಂಕೇತ. ಕಣದಲ್ಲಿ ತುಂಬಿದ ದವಸ ಧಾನ್ಯಗಳನ್ನು, ದಾಸ್ತಾನುಗಳನ್ನು ತಿಂದು ಬಹಳ ಹಾನಿಯನ್ನು ವಿಪತ್ತನ್ನು ಉಂಟುಮಾಡುತ್ತದೆ. ಚಪಲತೆ ಮತ್ತು ಭೋಗಗಳ ಪ್ರತೀಕವಾದ ಇಲಿ ನಿಶಾಚರಿ, ಮೋಹ ಮತ್ತು ಜ್ಞಾನಗಳ ರೂಪವೂ ಹೌದು. ಅದನ್ನು ದಮನ ಮಾಡುವೆನು ಎಂಬಂತೆ ಗಣಪತಿ ಇಲಿಯನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.

ಮೋಹ ಮತ್ತು ತಮೋ ಗುಣದ ಪ್ರತೀಕವಾದ ಪಾಶವನ್ನು ಹಿಡಿದು ರಜೋಗುಣದ ಪ್ರತೀಕವಾದ ಅಂಕುಶವೆಂಬ ಮಾಯಾ ಪಾಶವನ್ನು ಬಿಗಿಹಿಡಿದು, ಅಹಂಕಾರವನ್ನು ಅಂಕೆಯಲ್ಲಿ ಇಟ್ಟುಕೊಂಡು ಹಾವು ಇಲಿಗಳ ವೈರತ್ವಕ್ಕೆ ಇತಿಶ್ರೀ ಹಾಡುವಂತೆ ಅವೆರಡನ್ನು ಒಟ್ಟಿಗೆ ಸೇರಿಸುವ ರೀತಿಯಲ್ಲಿ ಗಣಪತಿ ಅರ್ಥಗರ್ಭಿತವೂ ಪ್ರತಿಮಾ ಪೂರ್ಣವೂ ಆದ ಸಾತ್ವಿಕ ರೂಪದಲ್ಲಿ ವಿರಾಜಿಸಿದ್ದಾನೆ.

ಗಣಪನು ಭಕ್ತಜನ ವತ್ಸಲನಾಗಿದ್ದಾನೆ. ಭಕ್ತರು ಭಕ್ತಿ ಪ್ರೀತಿಯಿಂದ ಕೊಟ್ಟ ಏನ್ನನ್ನೂ ನಿರಾಕರಿಸಲಾರ. ದುಷ್ಟ ಶಿಕ್ಷಕ - ಶಿಷ್ಟರಕ್ಷಕನೂ ಹೌದು. ವಿನಾಯಕ ಚೌತಿಯಂದು ನಮ್ಮ ಒಳ್ಳೆಯ ಕಾಮನೆಗಳನ್ನು ಈಡೇರಿಸಿ ಸರ್ವರಿಗೂ ಸನ್ಮಂಗಳವನ್ನು ಕರುಣಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.