ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ರಮಾ ವಿ ಬೆಣ್ಣೂರ್

ಸಂಪರ್ಕ:
ADVERTISEMENT

ಸಾಂಸ್ಕೃತಿಕ ನಗರಿಯ ತುರಾಯಿಗೆ ರಮಾಗೋವಿಂದ ರಂಗಮಂದಿರ ಸೇರ್ಪಡೆ

ಮೈಸೂರಿನಲ್ಲಿ ನಡೆಯುವ ನಿರಂತರ ರಂಗ ಚಟುವಟಿಕೆಗಳಿಗೆ ₹85 ಲಕ್ಷ ವೆಚ್ಚದಲ್ಲಿ ಅತ್ಯಂತ ಸೂಕ್ತ ರೀತಿಯಲ್ಲಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ರಂಗ ಮಂದಿರ ಇಂದು ಸರ್ವ ರೀತಿಯಲ್ಲೂ ಸಜ್ಜಾಗಿ, ಲೋಕಾರ್ಪಣೆಗೊಂಡು ನಿಂತಿದೆ.
Last Updated 29 ನವೆಂಬರ್ 2020, 19:30 IST
ಸಾಂಸ್ಕೃತಿಕ ನಗರಿಯ ತುರಾಯಿಗೆ ರಮಾಗೋವಿಂದ ರಂಗಮಂದಿರ ಸೇರ್ಪಡೆ

ಯುವ ಕಲಾವಿದನಿಗೆ ದೊರೆತ ಪುರಸ್ಕಾರ

ಉತ್ತಮ ಮನೋಧರ್ಮ ಮತ್ತು ಸಾಹಿತ್ಯಕ್ಕೆ ಪೂರಕವಾಗುವಂತಹ ವಾದನಶೈಲಿಯನ್ನು ರೂಢಿಸಿಕೊಂಡಿರುವ ಹರೀಶ್ ಪಾಂಡವ ಅವರು, ಜೋರು ಧ್ವನಿಯ ವಾದ್ಯವನ್ನು ಹಿತವಾಗುವಂತೆ ನುಡಿಸಬಲ್ಲ ಕೌಶಲವನ್ನು ಅಳವಡಿಸಿಕೊಂಡಿದ್ದಾರೆ.
Last Updated 20 ಜನವರಿ 2020, 19:45 IST
ಯುವ ಕಲಾವಿದನಿಗೆ ದೊರೆತ ಪುರಸ್ಕಾರ

ಬಿ.ಎಸ್.ಪಂಡಿತರ ಸ್ಮರಣಾರ್ಥ ‘ಸರಸ್ವತಿ’

ಮೈಸೂರಿನ ವಿದ್ಯಾ ಕ್ಷೇತ್ರದಲ್ಲಿ ಬಿ.ಎಸ್.ಪಂಡಿತರ ಹೆಸರು ಚಿರಪರಿಚಿತ. ಶೈಕ್ಷಣಿಕ ವಲಯದಲ್ಲಿ ಅವರ ಸಾಧನೆಯ ಹೆಗ್ಗುರುತಾಗಿ ಗೀತಾ ಶಿಶು ಶಿಕ್ಷಣ ಸಂಸ್ಥೆಗಳು ತಲೆಎತ್ತಿ ನಿಂತಿವೆ. ಹೆಣ್ಣು ಮಕ್ಕಳಿಗಾಗಿಯೇ ಇರುವ ಈ ಶಿಕ್ಷಣ ಸಂಸ್ಥೆಗಳ ಶಾಖೆಗಳು ಹತ್ತಾರು ವಿಷಯಗಳಲ್ಲಿ ಅವರನ್ನು ಸಮರ್ಥರನ್ನಾಗಿಸುತ್ತಿವೆ. ಇದು ಪಂಡಿತರ ದೂರದರ್ಶಿತ್ವದ ನಿದರ್ಶನ. ಅವರು ತೀರಿಕೊಂಡ ಹಲವು ವರ್ಷಗಳ ನಂತರ ಇದೀಗ ಗೀತಾ ಶಿಶು ಶಿಕ್ಷಣ ಸಂಘವು ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಸಂಗೀತ ಕಛೇರಿಯನ್ನು ಏರ್ಪಡಿಸಿ, ಅವರಿಗೆ ನಾದ ನಮನವನ್ನು ಸಮರ್ಪಿಸಲು ನಿರ್ಧರಿಸಿದೆ. ಅದರ ಪ್ರಾರಂಭವು ನಾಡಿನ ಖ್ಯಾತ ಸಂಗೀತ ವಿದುಷಿ ಸುಧಾ ರಘುನಾಥನ್ ಅವರ ಸಂಗೀತ ಕಛೇರಿಯಿಂದ ಇದೇ ನ.16ರಂದು ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮೈಸೂರಿನ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಿದರು.
Last Updated 25 ನವೆಂಬರ್ 2019, 19:31 IST
ಬಿ.ಎಸ್.ಪಂಡಿತರ ಸ್ಮರಣಾರ್ಥ ‘ಸರಸ್ವತಿ’

ಮೈಸೂರು | ಮನಸೂರೆಗೊಂಡ ಸಂಗೀತ ಕಛೇರಿಗಳು

ಎಂಟನೆಯ ಕ್ರಾಸ್ ಗಣೇಶ ಸಂಗೀತ ಮಹೋತ್ಸವದ ಆರಂಭವು ಎಷ್ಟು ಸೊಗಸಾಗಿದ್ದಿತೋ ಅಂತ್ಯವೂ ಅಷ್ಟೇ ಸಂಗೀತಮಯವಾಗಿತ್ತು. ಅದರ ಕೊನೆಯ ಎರಡು ದಿನಗಳು ಎರಡು ಭರ್ಜರಿ ಶಾಸ್ತ್ರೀಯ ಸಂಗೀತ ಕಛೇರಿಗಳು ಮಹೋತ್ಸವಕ್ಕೆ ಉತ್ತಮ ಅಂತ್ಯ ನೀಡಿ ಪರದೆಯನ್ನು ಎಳೆದವು.
Last Updated 20 ಸೆಪ್ಟೆಂಬರ್ 2019, 19:42 IST
ಮೈಸೂರು | ಮನಸೂರೆಗೊಂಡ ಸಂಗೀತ ಕಛೇರಿಗಳು

ರಂಗದ ಮೇಲೆ ನೃತ್ಯ ಕ್ಷೇತ್ರದ ಧ್ರುವತಾರೆ

ಬಾಲ ಸರಸ್ವತಿಯವರ ಇಡೀ ಬದುಕನ್ನು ಒಂದೂವರೆ ಗಂಟೆಯಲ್ಲಿ ತೋರಿಸುವುದು ಹುಡುಗಾಟದ ಮಾತಲ್ಲ. ಮೊದಲನೆಯದಾಗಿ ಅವರ ಬದುಕನ್ನು ನಾಟಕದ ರೂಪಕ್ಕೆ ಇಳಿಸುವುದೇ ಹರಸಾಹಸದ ಮಾತು.
Last Updated 18 ಸೆಪ್ಟೆಂಬರ್ 2019, 11:22 IST
ರಂಗದ ಮೇಲೆ ನೃತ್ಯ ಕ್ಷೇತ್ರದ ಧ್ರುವತಾರೆ

‘ರಾಜೀವ್‌’ ಸರೋದ್‌ ಮೋಡಿ

ತನ್ನ 58ನೇ ಪಾರಂಪರಿಕ ಸಂಗೀತೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಟ್ರಸ್ಟ್ ತನ್ನ ಕಛೇರಿಗಳಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪದ್ಧತಿಗಳನ್ನು ಒಳಗೊಂಡಿರುತ್ತದೆ. ಹೆಸರು ಮಾಡಿರುವ ಹಿರಿಯ ಸಂಗೀತಗಾರರಿಗಷ್ಟೇ ಅಲ್ಲದೆ ಕಿರಿಯ ಉದಯೋನ್ಮುಖ ಕಲಾವಿದರಿಗೂ ವೇದಿಕೆಯನ್ನು ಒದಗಿಸಿಕೊಡುತ್ತದೆ. ಜೊತೆಗೆ ಪ್ರತಿ ನಿತ್ಯವೂ ಕಛೇರಿಯ ಆರಂಭದ ಮೊದಲು ಒಂದು ಗಂಟೆವರೆಗೆ ಗಮಕ ವಾಚನ ಮತ್ತು ವ್ಯಾಖ್ಯಾನವನ್ನೂ ಏರ್ಪಡಿಸುವುದರ ಮೂಲಕ ನಮ್ಮ ಪ್ರಾಚೀನ ಪರಂಪರೆಗೂ ಮಹತ್ವ ಕೊಡುತ್ತಾ ಬಂದಿದೆ.
Last Updated 13 ಸೆಪ್ಟೆಂಬರ್ 2019, 19:45 IST
‘ರಾಜೀವ್‌’ ಸರೋದ್‌ ಮೋಡಿ

ಸುಂದರ ನೃತ್ಯರೂಪ ‘ಮಂಜರಿ’

ಅಲರಿಪು, ಕೃತಿ, ವರ್ಣ, ಜಾವಳಿ, ಪದ ಮತ್ತು ತಿಲ್ಲಾನದ ಹೊರಮೈಯನ್ನು ಹೊಂದಿದ್ದ ಈ ಎರಡು ಗಂಟೆಗಳ ನೃತ್ಯ ಕಾರ್ಯಕ್ರಮವು ನೋಡುಗರನ್ನು ಸಂಪೂರ್ಣವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
Last Updated 11 ಜೂನ್ 2019, 7:20 IST
ಸುಂದರ ನೃತ್ಯರೂಪ ‘ಮಂಜರಿ’
ADVERTISEMENT
ADVERTISEMENT
ADVERTISEMENT
ADVERTISEMENT