ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಗಂಗಾಧರಯ್ಯ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ: ಗಾಂಧಿ-ಅಂಬೇಡ್ಕರ್‌ ಹಣತೆಗಳ ಮಾರ್ಗದಲ್ಲಿ...

‘ವೈಷ್ಣವ ಜನತೋ’ ಲೋಕೇಶ ಅಗಸನಕಟ್ಟೆಯವರ ಇತ್ತೀಚಿನ ಕಾದಂಬರಿ. ಅಂತೆಯೇ ಇದು ಇತ್ತೀಚೆಗೆ ಬಂದಿರುವ ತುಂಬಾ ಮಹತ್ವದ ಕಾದಂಬರಿಯೂ ಹೌದು. ತಮ್ಮ ಕಥೆ, ಕಾದಂಬರಿಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಪರಿಚಿತರಿರುವ ಅಗಸನಕಟ್ಟೆ ಅವರನ್ನು ಈ ಕಥನ ಕನ್ನಡ ಸಾಹಿತ್ಯ ಲೋಕದ ಯಶಸ್ವಿ ಕಾದಂಬರಿಕಾರರ ಸಾಲಿನಲ್ಲಿ ಕೂರಿಸಿದೆ.
Last Updated 25 ಡಿಸೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ಗಾಂಧಿ-ಅಂಬೇಡ್ಕರ್‌ ಹಣತೆಗಳ ಮಾರ್ಗದಲ್ಲಿ...

ಕಥೆ: ಅಲ್ಲಿ ಆ ಅಳುವು ಈ ಚಣವೂ...

ಉಡುದಾರದಿಂದ ನುಣುಚಿಕೊಳ್ಳುತ್ತಿದ್ದ ಚೆಡ್ಡಿಯನ್ನು ಮತ್ಮತ್ತೆ ಸಿಕ್ಕಿಸಿಕೊಳ್ಳುತ್ತಾ ದುಕ್ಲಿಸ್ಕಂಡು ಅಳುತ್ತಾ ಮಲ್ಲೇಶ ಸೈಕಲ್ ತಳ್ಳುತ್ತಿದ್ದ. ಬಡ್ಮಲ್ಲಜ್ಜ ಸೊಸೈಟಿಯಲ್ಲಿ ತಗಂಡಿದ್ದ ಅಕ್ಕಿಯ ಚೀಲವನ್ನು ಸೈಕಲ್ಲಿನ ಕ್ಯಾರಿಯರ‍್ರಿನಲ್ಲಿಟ್ಟು ಉಪೂರಕ್ಕೆ ಅದನ್ನಿಡಿದುಕೊಂಡು ನಡೆಯುತ್ತಿದ್ದ.
Last Updated 26 ಜೂನ್ 2021, 19:30 IST
ಕಥೆ: ಅಲ್ಲಿ ಆ ಅಳುವು ಈ ಚಣವೂ...

ಕಥೆ: ಪಿಕ್ಚರ್ ಅಭೀ ಬಾಕೀ ಹೈ

ಕಾವು ಕೂತ ಕೋಳಿಯಂಗೆ ಅಲ್ಲೊಂದು ಇಲ್ಲೊಂದು ತೆಳ್ಳಗೆ ಬಳ್ಳಗೆ ತೋಟ ತುಡಿಕೆಗಳಲ್ಲಿ ಕಾಣುವ ಮನೆಗಳು ದೇವಸ್ಥಾನದ ಪಾಸಲೆಯಲ್ಲಿ ಅಂತೆಯೇ ಇದ್ದೊಂದು ರಸ್ತೆಯ ಆಜುಬಾಜಿನಲ್ಲಿ ಕೂರಗೆ ಕೂತಿರುವ ಒಂದಷ್ಟು ಮನೆಗಳು ಎಲ್ಲಾ ಕೂಡಿದರೂ ಐವತ್ತನ್ನು ದಾಟದ ಎತ್ತಿಂದ ನೋಡಿದರೂ ಊರಿನ ರೂಹುಗಳಿಲ್ಲದ ಆ ಊರಿನಲ್ಲಿ ಅವತ್ತು ಬೆಳ್ಳಂಬೆಳಗ್ಗೆ ಜಗಳದ ಸದ್ದೊಂದು ಎದ್ದು ಬೆಳಗಿನ ಮೌನದ ಕುತ್ತಿಗೆಯನ್ನು ಹಿಸುಕುತ್ತಿತ್ತು.
Last Updated 10 ಏಪ್ರಿಲ್ 2021, 19:30 IST
ಕಥೆ: ಪಿಕ್ಚರ್ ಅಭೀ ಬಾಕೀ ಹೈ

ಕಥೆ: ನೀರ ಮೇಲಣ ಹೆಜ್ಜೆ

ಹೊತ್ತು ಹುಟ್ಟುವ ಹೊತ್ತಿಗಾಗಲೇ ಹೊಸಾ ಬಡಾವಣೆಯಲ್ಲಿ ವಾಕ್ ಮುಗಿಸಿ ಪಾರ್ಕಿನ ಬೆಂಚು ಕಲ್ಲೊಂದರಲ್ಲಿ ಕೂತಿದ್ದ ಪುಟ್ಟಾಲಯ್ಯನನ್ನು ಕಂಡವರು ಎಂದಿನಂತೆ ಮಾತಾಡಿಸಿಯೋ ಇಲ್ಲಾ ಮುಗುಳ್ನಕ್ಕೋ ತಟಾಯುತ್ತಿದ್ದರೆ ಪುಟ್ಟಾಲಯ್ಯನ ಕಣ್ಣುಗಳು ಮಾತ್ರ ದಗ್ಗೀರಜ್ಜನಿಗಾಗಿ ತಡಕಾಡುತ್ತಿದ್ದವು. ಪಾರ್ಕಿನ ಆಚೆ ಬದಿಯಲ್ಲಿ ಮೈ ತುಂಬಾ ಕಾಯಿಡಿದಿದ್ದ ಬೆಲವತ್ತದ ಮರದಲ್ಲಿದ್ದ ಹಕ್ಕಿಗಳಿಗಿನ್ನೂ ಬೆಳಕರಿದಿಲ್ಲವೇನೋ ಎಂಬಂತೆ ಗೊಗ್ಗರು ದನಿ ಮಾತಾಡಿಕೊಳ್ಳುತ್ತಿದ್ದವು. ಅದರಿಂದ ವಾರಾಸಿಗೆ ಕೊಂಚ ದೂರದಲ್ಲಿದ್ದ ಅರಳಿ ಹಾಗೂ ಬೇವಿನ ಜೋಡಿ ಮರಗಳನ್ನು ಜೋಡಿಯೊಂದು ಮಡಿಯುಟ್ಟು ಸುತ್ತಾಕಿ ಅವುಗಳ ಬುಡದಲ್ಲಿದ್ದ ನಾಗರ ಕಲ್ಲಿಗೆ ಶರಣು ಮಾಡಿಕೊಳ್ಳುತ್ತಿತ್ತು. ಅವುಗಳಾಚೆಗಿದ್ದ ಆಕಾಶ ಮಲ್ಲಿಗೆ ಮರದ ತುಂಬಾ ಚೋಟುದ್ದದ ಬಿಳಿಯ ಹೂಗಳು ಎಳೆ ಬಿಸಿಲಿನ ಚಕ್ಕಳಗುಳಿಗೆ ನಗಾಡುತ್ತಿರುವಂತೆ ಕಾಣುತ್ತಿದ್ದವು. ಒಂದು ಚಣ ಅತ್ತಲೇ ದಿಟ್ಟಿಸತೊಡಗಿದ ಪುಟ್ಟಾಲಯಯ್ಯನ ಮನಸು ಮಾತ್ರ, `ಅಜ್ಜ ಕಾಣಿಸ್ಕಂಡು ಏನಿಲ್ಲಾಂದ್ರೂ ಹತ್ತತ್ರ ಎರಡು ವಾರಾಗ್ತಾ ಬಂತು ಅಕಸ್ಮಾತ್...’ ಅಂತ ದಗ್ಗೀರಜ್ಜನಿಗಾಗಿ ಕಾತರಿಸುತ್ತಿತ್ತು. ಹಂಗನಿಸಿದ್ದೇ ತಡ ಪುಟ್ಟಾಲಯ್ಯ ಎದ್ದವನೇ ಹಾಕಿದ್ದ ಟೋಪಿ ಸ್ವೆಟರ್‌ಗಳನ್ನು ಬಿಚ್ಚಿ ಹೆಗಲಿಗಾಕಿಕೊಂಡು ಸೀದಾ ದಗ್ಗೀರಜ್ಜನ ಮನೆಯ ದಾರಿ ಹಿಡಿದ.
Last Updated 20 ಡಿಸೆಂಬರ್ 2020, 2:53 IST
ಕಥೆ: ನೀರ ಮೇಲಣ ಹೆಜ್ಜೆ

ಕಥೆ | ಜಲರೇಖೆ

ಗೇಣುದ್ದದ ಕಣಿಗಿಲೆ ಕವೆಯ ತುದಿಗಳೆರಡನ್ನೂ ಒಂದೊಂದು ಕೈಯ್ಯಲಿಡಿದು ತೋಟದಗಲಕೂ ಸುತ್ತಾಡಿದ ವಿರುಪಣ್ಣ.
Last Updated 18 ಜನವರಿ 2020, 19:30 IST
ಕಥೆ | ಜಲರೇಖೆ

ಹೊರಗಲ ಗುಡಿ

ಕರ‍್ರಂಗಪ್ಪ ಊರಿನ ಕುಳುವಾಡಿಕೆ, ತಟ್ಟಿ ಬುಟ್ಟಿಗಳ ಎಣಿಗೆಯೊಂದಿಗೆ ಬಿಡುವಿನಲ್ಲಿ ಮರ ಕುಯ್ಯುವ ಕೆಲಸಕ್ಕೂ ಹೋಗುತ್ತಿದ್ದ. ಒಂದಿನ ಗುಂಡಿಯೊಳಗೆ ನಿಂತು ಗರಗಸವನ್ನಾಡಿಸುತ್ತಿದ್ದಾಗ ದಿಮ್ಮಿ ತಲೆಗಪ್ಪಳಿಸಿತ್ತು. ಅವನನ್ನು ಮೇಲೆತ್ತುವಷ್ಟರಲ್ಲಿ ಪ್ರಾಣಪಕ್ಷಿ ಹಾರಿತ್ತು.
Last Updated 17 ಆಗಸ್ಟ್ 2019, 19:30 IST
ಹೊರಗಲ ಗುಡಿ

ಮುರ್ಕಲಸಿನ ಮರ

ಮುರ್ಕಲಸಿನ ಮರವನ್ನು ಯಾರು ನೆಟ್ಟಿದ್ದು ಅಂತ ಬಾಳಪ್ಪನಿಗಿರಲಿ ಅವನ ತಾತ ಕೆಂಪ್ನಿಂಗಜ್ಜನಿಗೂ ನೆನಪಿರಲಿಲ್ಲ. ಅದಿನ್ನೂ ಪ್ರಾಯದ ಗಿಡವಾಗಿದ್ದಾಗಲೇ ಅದರ ಒಂದು ಕೊಂಬೆ ಅರ್ಧಕ್ಕೇ ಮುರಿದುಹೋಗಿದ್ದ ಕಾರಣಕ್ಕೆ ಅದು ಎಲ್ಲರಿಗೂ ಮುರ್ಕಲಸಿನ ಮರವಾಗಿತ್ತು.
Last Updated 9 ಫೆಬ್ರುವರಿ 2019, 19:30 IST
ಮುರ್ಕಲಸಿನ ಮರ
ADVERTISEMENT
ADVERTISEMENT
ADVERTISEMENT
ADVERTISEMENT