ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಕಾಶ್ ರೈ

ಸಂಪರ್ಕ:
ADVERTISEMENT

ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಕುರುಡ ಆನೆ ನೋಡಿದ ಕತೆ ನಿಮಗೂ ಗೊತ್ತಿರ ಬಹುದು. ಐವರು ಕುರುಡರು ಆನೆಯನ್ನು ನೋಡಿ ಐದು ಕಲ್ಪನೆ ಮಾಡಿಕೊಂಡು ಐದು ಉತ್ತರ ಹೇಳುತ್ತಾರೆ. ಇದನ್ನು ಎಲ್ಲರೂ ನೆಗೆಟಿವ್ ಆಗಿ ಬಳಸುತ್ತಿರುತ್ತಾರೆ. ಆದರೆ ಒಂದು ವಸ್ತುವನ್ನು ಒಂದು ಅನುಭವವನ್ನು ಕಣ್ಣಿರುವವರು ಕೂಡ ಬೇರೆ ಬೇರೆಯಾಗಿಯೇ ನೋಡುತ್ತಾ ಇರುತ್ತಾರೆ. ಹಾಗೆ ನೋಡಿದಾಗಲೇ ಬದುಕು ಸಂಕೀರ್ಣವೂ ಸುಂದರವೂ ಆಗುತ್ತಾ ಹೋಗುವುದು. ಆಗಲೇ ಕಲೆ ಹುಟ್ಟುವುದು.
Last Updated 8 ಡಿಸೆಂಬರ್ 2018, 20:00 IST
ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ನಮ್ಮ ಮರಿಯಾನೆಗೆ ಹಾರಲು ಕಲಿಸೋಣವೇ...

ನಾವೀಗ ಮಕ್ಕಳಿಗೆ ಕನಸು ಕಾಣುವುದನ್ನು ಕಲಿಸುತ್ತಿಲ್ಲ. ‘ಅಸಾಧ್ಯವನ್ನು ಸಾಧ್ಯವಾಗಿಸು’ ಅಂತ ಪಾಠ ಹೇಳುತ್ತಿರುತ್ತೇವೆ. ಈಗಿನ ಹುಡುಗರು ಇಪ್ಪತ್ತೈದನೇ ವರ್ಷಕ್ಕೇ ಸ್ವಂತ ಮನೆ ಸ್ವಂತ ಕಾರು ಹೊಂದಿರುತ್ತಾರೆ. ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸೂ ಇರುತ್ತದೆ. ಆ ನಂತರದ ಜೀವನದ ಸಾರ್ಥಕತೆ ಏನು ಅನ್ನುವುದು ಅವರಿಗೇ ಗೊತ್ತಿರುವುದಿಲ್ಲ. ಮುಂದೇನು ಮಾಡುವುದು ಅಂತ ಗೊತ್ತಾಗುವುದೂ ಇಲ್ಲ. ಕಲೆಯ ಸ್ಪರ್ಶವಿರುವುದಿಲ್ಲ. ಅಂಥವರು ಮುಂದೇನಾಗುತ್ತಾರೆ ಅಂತ ನನಗೂ ಗೊತ್ತಿಲ್ಲ...
Last Updated 1 ಡಿಸೆಂಬರ್ 2018, 20:05 IST
ನಮ್ಮ ಮರಿಯಾನೆಗೆ ಹಾರಲು ಕಲಿಸೋಣವೇ...

ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ನನ್ನ ಕಣ್ಣಿಗೊಂದು ದಿಗಂತ ಕಾಣಿಸಿತು. ಅದನ್ನು ತಲುಪಬೇಕು ಅಂದುಕೊಂಡೆ. ಅಲ್ಲಿಗೆ ಹೋಗಿ ಮುಟ್ಟಿದ್ದೇ ತಡ, ಮತ್ತೊಂದು ದಿಗಂತ ಕಾಣತೊಡಗಿತು. ಅಲ್ಲಿಗೆ ಹೋದಾಗ ಇನ್ನೊಂದು ದಿಗಂತ.
Last Updated 24 ನವೆಂಬರ್ 2018, 20:00 IST
ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ಅಂತೆ ಕಂತೆಗಳ ಸಂತೆಯಲ್ಲಿ...

ಎಲ್ಲ ಮಾತುಗಳನ್ನೂ ತಿರುಚುವುದಾದರೆ, ಎಲ್ಲವನ್ನೂ ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಾದರೆ, ನಾವೇನು ಮಾಡುತ್ತಿದ್ದೇವೆ? ನಾವೆತ್ತ ಸಾಗುತ್ತಿದ್ದೇವೆ? ಇಮ್ಯಾಜಿನೇಷನ್ ಎಂಬ ಪದದ ಅರ್ಥವೇ ಬದಲಾಗಿದೆಯೇ? ಈ ಅಂತೆ ಕಂತೆಗಳ ಸಂತೆಯಲ್ಲಿ ನಿಂತು ಆಲೋಚಿಸುತ್ತಿದ್ದರೆ ಎಷ್ಟೋ ಸಲ ಗಾಬರಿಯಾಗುತ್ತದೆ. ನಾವಾಡುವ ಮಾತುಗಳು ಅಂತಿಮವಾಗಿ ಒಬ್ಬ ವ್ಯಕ್ತಿಯನ್ನು ಹೇಗೆ ತಲುಪುತ್ತವೆ. ನಾವು ಆಡಿದ ರೀತಿಯಲ್ಲೇ ಅಥವಾ ಅದನ್ನು ತಲುಪಿಸಿದವರಿಗೆ ಬೇಕಾದ ರೀತಿಯಲ್ಲೇ?
Last Updated 17 ನವೆಂಬರ್ 2018, 19:45 IST
ಅಂತೆ ಕಂತೆಗಳ ಸಂತೆಯಲ್ಲಿ...

ಕರುಳ ಭಾಷೆಯೇ ಕೊರಳ ಭಾಷೆಯಾದಾಗ...

ನನ್ನ ಪ್ರಕಾರ ಭಾಷೆ ಎನ್ನುವುದು ನಮ್ಮ ಅಭಿವ್ಯಕ್ತಿಯ ರೂಪ, ಸುಖ- ದುಃಖಗಳನ್ನು ವ್ಯಕ್ತಪಡಿಸುವ ವಾಹಿನಿ. ನಾವು ಬದುಕುವ ಪ್ರದೇಶದಲ್ಲಿ, ನಮ್ಮ ಸುತ್ತ ಇರುವ ಜನ ಯಾವ ಭಾಷೆಯನ್ನು ಮಾತನಾಡುತ್ತಾರೋ, ಅದನ್ನು ಶುದ್ಧವಾಗಿ ಮಾತನಾಡುವುದೇ ನಾವು ಅವರಿಗೆ ಕೊಡುವ ಮರ್ಯಾದೆ. ನಾನು ನಿಮ್ಮ ಹಾಗಿಲ್ಲ, ಡಿಫರೆಂಟ್ ಅಂತ ತೋರಿಸಿಕೊಳ್ಳಲು ಮಾತನಾಡುವುದು ನಮ್ಮೊಳಗಿನ ಅನಾಗರಿಕತೆಯ ಕುರುಹು...
Last Updated 3 ನವೆಂಬರ್ 2018, 20:09 IST
ಕರುಳ ಭಾಷೆಯೇ ಕೊರಳ ಭಾಷೆಯಾದಾಗ...

ಗುಂಪಿನಲ್ಲಿ ಗೋವಿಂದಾ... ಗೋವಿಂದ

ಗುಂಪಿನಲ್ಲಿದ್ದಾಗ ಯಾರ ಧ್ವನಿಯೂ ಗುರುತಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೂಗಬಹುದು. ಚೀರಬಹುದು, ಛೀಮಾರಿ ಹಾಕಬಹುದು. ಕೋರಸ್ಸಿಗೆ ಕರುಣೆಯಿಲ್ಲ. ಸಾಮಾಜಿಕ ಜಾಲತಾಣ ಅನ್ನುವುದು ಕೋರಸ್ಸು. ಅಲ್ಲಿ ಯಾರು ಏನೆಂದರು ಅನ್ನುವುದು ಗೊತ್ತಾಗುವುದಿಲ್ಲ. ಚಿವುಟಿದ್ದು ಯಾರೆಂದು ಗೊತ್ತಾಗದ ಜಾತ್ರೆಯ ಗುಂಪಿನಂತೆ ಇಲ್ಲೂ ತಮಗೆ ಬೇಕಾದ ಕಡೆ, ತಮಗೆ ಬೇಕಾದಷ್ಟು ಜಿಗುಟಿ ಹೋಗುತ್ತಾರೆ ಉಗುರು ಬೆಳೆಸಿಕೊಂಡವರು. ಆ ಉಗುರು ಕೂಡ ಸ್ವಂತದ್ದಲ್ಲ
Last Updated 27 ಅಕ್ಟೋಬರ್ 2018, 20:00 IST
ಗುಂಪಿನಲ್ಲಿ ಗೋವಿಂದಾ... ಗೋವಿಂದ

ಕಾಸೇ ಇಲ್ಲದ ಕ್ಷಣಗಳ ಕ್ಷಣಿಕ ಸುಖದುಃಖ

ಸ್ವಲ್ಪ ಹಣದ ತೊಂದರೆಯಲ್ಲಿದ್ದೆ. ಒಂದು ಚಿತ್ರ ನಿರ್ಮಾಣದ ಹಂತದಲ್ಲಿದ್ದು, ಇನ್ನೊಂದು ಬಿಡುಗಡೆಗೆ ಸಿದ್ಧವಾಗಿತ್ತು. ಎಂದಿನಂತೆ ಸದಭಿರುಚಿಯ ಚಿತ್ರಗಳಾದ್ದರಿಂದ ಬಿಡುಗಡೆಗೆ ಮುನ್ನ ವ್ಯಾಪಾರವಾಗುವ ಸಾಧ್ಯತೆ ಇರಲಿಲ್ಲ. ಸ್ವಲ್ಪ ಹಣ ಹೊಂದಿಸಲೇಬೇಕು.
Last Updated 20 ಅಕ್ಟೋಬರ್ 2018, 20:01 IST
ಕಾಸೇ ಇಲ್ಲದ ಕ್ಷಣಗಳ ಕ್ಷಣಿಕ ಸುಖದುಃಖ
ADVERTISEMENT
ADVERTISEMENT
ADVERTISEMENT
ADVERTISEMENT