ಚುನಾವಣೆ 2023: ಪಕ್ಷಗಳ ಮುಂದಿನ ಸವಾಲು, ಸಾಧ್ಯತೆ
ನವದೆಹಲಿ: ಲೋಕಸಭೆಯಲ್ಲಿ ಬಹುಮತಕ್ಕಾಗಿ ರಾಜಕೀಯ ಪಕ್ಷಗಳ ನಡುವಣ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇನ್ನು ಇರುವುದು 14 ತಿಂಗಳುಗಳು ಮಾತ್ರ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿನ ಗೆಲುವನ್ನು ಪುನರಾವರ್ತಿಸಲು ಬಿಜೆಪಿ ಬಯಸಿದೆ. ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನ ಮಾತುಗಳು ಹಲವು ಬಾರಿ ಕೇಳಿ ಬಂದರೂ ಅದು ಕಾರ್ಯರೂಪಕ್ಕೇನೂ ಬಂದಿಲ್ಲ. 2024ರ ಚುನಾವಣೆಗೆ ಭೂಮಿಕೆ ಸಿದ್ಧಪಡಿಸುವ ಕೆಲಸವನ್ನು 2023 ಮಾಡಲಿದೆ. 2018ರಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯ ಮೇಲೆ ಅದು ಪರಿಣಾಮ ಬೀರಲಿಲ್ಲ ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ರಾಜಕೀಯ ಪಕ್ಷಗಳ ಮುಂದಿರುವ ಸವಾಲುಗಳತ್ತ ಒಂದು ನೋಟ ಇಲ್ಲಿದೆLast Updated 2 ಜನವರಿ 2023, 2:30 IST