ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಮತದಾರರ ಲೆಕ್ಕ ನೀಡಿದ ಆಯೋಗ

Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಐದು ಹಂತಗಳ ಮತದಾನದ ಸಂದರ್ಭದಲ್ಲಿ ಚಲಾವಣೆ ಆಗಿರುವ ಮತಗಳ ನಿಖರ ಲೆಕ್ಕವನ್ನು ಕೇಂದ್ರ ಚುನಾವಣಾ ಆಯೋಗವು ಶನಿವಾರ ಬಿಡುಗಡೆ ಮಾಡಿದೆ.

ಈ ಅಂಕಿ–ಅಂಶಗಳ ಅನ್ವಯ, ಈ ಐದು ಹಂತಗಳಲ್ಲಿ ಮತದಾನ ಮಾಡಲು ಅರ್ಹರಾಗಿದ್ದ 76.4 ಕೋಟಿ ಮತದಾರರ ಪೈಕಿ 50.72 ಕೋಟಿ, ಅಂದರೆ ಶೇಕಡ 66.39ರಷ್ಟು ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ನಾಲ್ಕನೆಯ ಹಂತದವರೆಗೆ ಶೇಕಡ 66.95ರಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂದು ಆಯೋಗವು ಈ ಮೊದಲು ಹೇಳಿತ್ತು. ಅಂದರೆ, 67.45 ಕೋಟಿ ಮತದಾರರ ಪೈಕಿ 45.1 ಕೋಟಿ ಮಂದಿ ಮತ ಚಲಾಯಿಸಿದ್ದರು.

427 ಕ್ಷೇತ್ರಗಳ ಪೈಕಿ 97 ಕ್ಷೇತ್ರಗಳಲ್ಲಿ (ಸೂರತ್ ಹೊರತುಪಡಿಸಿ, ಇಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ) ಮತದಾರರ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿದೆ ಎಂಬುದನ್ನು ಅಂಕಿ–ಅಂಶಗಳು ಹೇಳಿವೆ.

ಆರನೆಯ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಿನಲ್ಲಿ, ಚಲಾವಣೆಯಾದ ಮತಗಳ ನಿಖರ ಅಂಕಿ–ಅಂಶವನ್ನು ಬಿಡುಗಡೆ ಮಾಡುವಂತೆ ನೂರಕ್ಕೂ ಹೆಚ್ಚು ಮಂದಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಕೋರಿದ ಕೆಲವು ಗಂಟೆಗಳ ನಂತರದಲ್ಲಿ ಆಯೋಗವು ಈ ವಿವರ ಪ್ರಕಟಿಸಿದೆ. 

ಪ್ರತಿಯೊಂದು ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ವಿವರವನ್ನು ಒಳಗೊಂಡ ‘ಫಾರ್ಮ್‌ 17ಸಿ’ಯನ್ನು ಮತದಾನ ನಡೆದ 48 ಗಂಟೆಗಳಲ್ಲಿ ಪ್ರಕಟಿಸಬೇಕು ಎಂಬ ಕೋರಿಕೆ ಇದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆಡಿದ ಮಾತುಗಳು ತನಗೆ ಶಕ್ತಿ ತುಂಬಿವೆ ಎಂದು ಆಯೋಗವು ಹೇಳಿದೆ. ಅರ್ಜಿಯ ಆಧಾರದಲ್ಲಿ ಆಯೋಗಕ್ಕೆ ನಿರ್ದೇಶನ ನೀಡಲು ಕೋರ್ಟ್ ಶುಕ್ರವಾರ ನಿರಾಕರಿಸಿತ್ತು.

‘ಜನರ ಮಾಹಿತಿ ಹಕ್ಕಿಗೆ ದೊಡ್ಡ ಜಯ ಸಿಕ್ಕಿದೆ. ಚುನಾವಣಾ ಆಯೋಗವು ಮತದಾನದ ಸಂಪೂರ್ಣ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ. ಇದು ಆಯೋಗದ ಪ್ರಮುಖ ಹೆಜ್ಜೆ. ಇದನ್ನು ಮೊದಲೇ ಮಾಡಬಹುದಿತ್ತು. ಆದರೆ, ಫಾರ್ಮ್‌ 17ಸಿ ಪ್ರಕಟಿಸುವ ಬೇಡಿಕೆ ಮುಂದುವರಿಯಬೇಕು. ಏಕೆಂದರೆ, ಮತದಾನದ ಪ್ರಮಾಣದ ಶಾಸನಬದ್ಧ ಅಧಿಕೃತ ದಾಖಲೆ ಅದೊಂದೇ’ ಎಂದು 'ಕಾಮನ್ ಕಾಸ್' ಸಂಘಟನೆಯ ಆಡಳಿತ ಮಂಡಳಿಯ ಸದಸ್ಯೆ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.‌

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್‌ 19ರಂದು ನಡೆದಾಗಿನಿಂದ, ಲೋಕಸಭಾ ಕ್ಷೇತ್ರಗಳಲ್ಲಿನ ಮತದಾರರ ನಿಖರ ಸಂಖ್ಯೆಯನ್ನು ಹಾಗೂ ಅಲ್ಲಿ ಮತದಾನದ ಹಕ್ಕು ಚಲಾಯಿಸಿದವರ ನಿಖರ ಸಂಖ್ಯೆಯನ್ನು ಪ್ರಕಟಿಸಬೇಕು ಎಂಬ ಬೇಡಿಕೆ ಇದೆ.

ಆದರೆ, ಚುನಾವಣಾ ಆಯೋಗವು ಇದುವರೆಗೆ ಚಲಾವಣೆಯಾದ ಮತಗಳ ಸಂಖ್ಯೆಯನ್ನು ನೀಡಿರಲಿಲ್ಲ. ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ ನಂತರ, ಆಯೋಗವು ಪ್ರತಿ ಲೋಕಸಭಾ ಕ್ಷೇತ್ರದಲ್ಲಿನ ಮತದಾರರ ಸಂಖ್ಯೆಯನ್ನು ಒದಗಿಸಲು ಮೇ 1ರಿಂದ ಆರಂಭಿಸಿತು. ಮೊದಲ ಹಂತದ ಮತದಾನದ‌ಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಪ್ರಕಟಿಸಲು 11 ದಿನ ವಿಳಂಬ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಆರನೇ ಹಂತ: ಶೇ 59ರಷ್ಟು ಮತದಾನ

ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಶನಿವಾರ ಮುಕ್ತಾಯವಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟು ಶೇ 59.06ರಷ್ಟು ಮತದಾನ ಆಗಿದೆ. ದೇಶದ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

ಹಿಂಸಾಚಾರದ ವರದಿಗಳ ನಡುವೆಯೂ ಪಶ್ಚಿಮ ಬಂಗಾಳದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಶೇ 78.19ರಷ್ಟು ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌– ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಶೇ 52.28ರಷ್ಟು ಮತದಾನ ಆಗಿದ್ದು, ಹಲವು ದಶಕಗಳಲ್ಲಿ ನಡೆದಿರುವ ಅತ್ಯಧಿಕ ಮತದಾನ ಪ್ರಮಾಣ ಇದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಸೇರಿದಂತೆ ಹಲವು ಪ್ರಮುಖರು ತಮ್ಮ ಮತದಾನದ ಹಕ್ಕನ್ನು ದೆಹಲಿಯಲ್ಲಿ ಚಲಾಯಿಸಿದರು.

ಮಾಹಿತಿ ಬಿಡುಗಡೆ ವಿಳಂಬ ಆಗಿಲ್ಲ’

ನವದೆಹಲಿ (ಪಿಟಿಐ): ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಕುಚೋದ್ಯದ ಸಂಚು ನಡೆದಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಚುನಾವಣಾ ಪ್ರಕ್ರಿಯೆ ಕುರಿತು ಸುಳ್ಳು ಸಂಕಥನ ಸೃಷ್ಟಿಸುವ ಕೆಲಸವನ್ನು ನಿರ್ದಿಷ್ಟ ಸ್ವರೂಪದಲ್ಲಿ ನಡೆಸಲಾಗುತ್ತಿದೆ ಎಂದು ಅದು ಆರೋಪಿಸಿದೆ.

ಚಲಾವಣೆಯಾದ ಮತಗಳ ಸಂಖ್ಯೆಯನ್ನು ಬದಲಾಯಿಸುವುದಕ್ಕೆ ಅವಕಾಶವೇ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮೊದಲ ಐದು ಹಂತಗಳ ಮತದಾನದ ವೇಳೆ ಚಲಾವಣೆ ಆಗಿರುವ ಮತಗಳ ಲೆಕ್ಕ ನೀಡುವ ಜೊತೆಯಲ್ಲೇ ಆಯೋಗವು ಈ ಮಾತುಗಳನ್ನು ಹೇಳಿದೆ.

ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಪ್ರಕಟಿಸುವಂತೆ ಆಯೋಗಕ್ಕೆ ಸೂಚಿಸಲು ಸುಪ್ರೀಂ ಕೋರ್ಟ್
ನಿರಾಕರಿಸಿದ ಮಾರನೆಯ ದಿನವೇ ಆಯೋಗವು ಈ ಲೆಕ್ಕವನ್ನು ತಾನಾಗಿಯೇ ನೀಡಿದೆ.

ಲೋಕಸಭಾ ಚುನಾವಣೆ: ಚಲಾವಣೆಯಾದ ಮತಗಳು

ಹಂತ;ಮತದಾರರ ಒಟ್ಟು ಸಂಖ್ಯೆ;ಚಲಾವಣೆಯಾದ ಮತಗಳು;ಪ್ರಮಾಣ

ಒಂದು;16,63,86,344;11,00,52,103;66.14

ಎರಡು;15,86,45,484;10,58,30,572;66.71

ಮೂರು;17,24,04,907;11,32,34,676;65.68

ನಾಲ್ಕು;17,70,75,629;12,24,69,319;69.16

ಐದು;8,95,67,973;5,57,10,618;62.20

***

ಅತಿಹೆಚ್ಚು ಮತದಾರರು ಇರುವ ಕ್ಷೇತ್ರಗಳು

ಮಲ್ಕಾಜ್ಗಿರಿ;37,79,596

ಬೆಂಗಳೂರು ಉತ್ತರ;32,14,496

ಗಾಜಿಯಾಬಾದ್;29,45,487

***

ಅತಿಹೆಚ್ಚು ಸಂಖ್ಯೆಯಲ್ಲಿ ಮತದಾನ ಆಗಿರುವ ಕ್ಷೇತ್ರಗಳು

ಧುಬ್ರಿ;24,50,041

ಮಲ್ಕಾಜ್ಗಿರಿ;19,19,131

ಬೆಂಗಳೂರು ಗ್ರಾಮಾಂತರ;19,14030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT