ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ ಯಮಹಾದ ಅತ್ಯಾಧುನಿಕ ಬ್ಲೂ ಸ್ಕ್ವೇರ್ ಔಟ್‌ಲೆಟ್ ಉದ್ಘಾಟನೆ

ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ಬೆಂಗಳೂರಿನಲ್ಲಿ ಹೊಸದಾಗಿ ಅತ್ಯಾಧುನಿಕ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದಿದೆ.
Published 2 ಜೂನ್ 2024, 9:32 IST
Last Updated 2 ಜೂನ್ 2024, 9:32 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ಬೆಂಗಳೂರಿನಲ್ಲಿ ಹೊಸದಾಗಿ ಅತ್ಯಾಧುನಿಕ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದಿದೆ.

ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೊ ವರ್ಲ್ಡ್ ಹೆಸರಿನಲ್ಲಿ ಈ ಔಟ್‌ಲೆಟ್ ಪ್ರಾರಂಭಿಸಲಾಗಿದ್ದು, 7,100 ಚದರ ಅಡಿ ವಿಶಾಲವಾಗಿದೆ. ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಅತ್ಯುತ್ತಮ ಮಾರಾಟ, ಸರ್ವಿಸ್ ಮತ್ತು ಗ್ರಾಹಕರಿಗೆ ನೆರವು ನೀಡುವ ಉದ್ದೇಶದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಈ ಔಟ್‌ಲೆಟ್ ಯಮಹಾ ಬ್ರ್ಯಾಂಡ್‌ನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಜೊತೆಗೆ ಗ್ರಾಹಕರಿಗೆ ಸಂಪೂರ್ಣ ಸೇವೆ ಒದಗಿಸುವಂತೆ ವಿನ್ಯಾಸಗೊಂಡಿದೆ. ಪ್ರತಿಯೊಬ್ಬ ಗ್ರಾಹಕರಿಗೂ ತೃಪ್ತಿಕರ ಸೇವೆ ನೀಡಲು ಒತ್ತು ನೀಡಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಯಮಹಾ ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆ ಪ್ರತಿನಿಧಿಸುವ ನೀಲಿ ಬಣ್ಣ ಮತ್ತು ವಿಭಿನ್ನ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ ‘ಸ್ಕ್ವೇರ್’ ಸಂಯೋಜನೆ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಬೆಸೆಯಲು ಈ ಔಟ್‌ಲೆಟ್‌ ಸಿದ್ಧಪಡಿಸಲಾಗಿದೆ.

ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಜೊತೆಗೆ, ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರೆ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಈ ಹೊಸ ಔಟ್‌ಲೆಟ್ ಸೇರಿ ಈಗ ಕರ್ನಾಟಕದ ಮಾರುಕಟ್ಟೆಯಲ್ಲಿ ಕಂಪನಿಯು 23 ಎಕ್ಸ್‌ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT