ಭಾನುವಾರ, ನವೆಂಬರ್ 27, 2022
22 °C

ಇ–ಎಸ್‌ಯುವಿ ‘ಬಿವೈಡಿ–ಆಟ್ಟೊ3' ಬೆಲೆ ₹ 33.99 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿವೈಡಿ ಇಂಡಿಯಾ ಕಂಪನಿಯು ತನ್ನ ಇ–ಎಸ್‌ಯುವಿ ‘ಬಿವೈಡಿ–ಆಟ್ಟೊ3’ಯ (BYD-ATTO3) ಎಕ್ಸ್‌ ಷೋರೂಂ ಬೆಲೆಯನ್ನು ₹ 33.99 ಲಕ್ಷಕ್ಕೆ ನಿಗದಿ ಮಾಡಿದೆ.

ಅಕ್ಟೋಬರ್ 11ರಂದು ಬುಕಿಂಗ್‌ ಆರಂಭವಾಗಿದ್ದು, ಈವರೆಗೆ 1,500 ಗ್ರಾಹಕರು ಬುಕ್ ಮಾಡಿದ್ದಾರೆ. ಈ ವಾಹನವು ಅಲ್ಟ್ರಾ–ಸೇಫ್‌ ಬ್ಲೇಡ್‌ ಬ್ಯಾಟರಿ ಹೊಂದಿದ್ದು, 50 ನಿಮಿಷಗಳಲ್ಲಿ ಶೇಕಡ 80ರಷ್ಟು ಚಾರ್ಜ್‌ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

ಎಲ್‌2 ಅಡ್ವಾನ್ಸ್ಡ್ ಡ್ರೈವಿಂಗ್‌ ಅಸಿಸ್ಟನ್ಸ್‌ ಸಿಸ್ಟಮ್ (ಎಡಿಎಎಸ್‌), 7 ಏರ್‌ಬ್ಯಾಗ್ಸ್‌, ಪ್ಯಾನರಾಮಿಕ್‌ ಸನ್‌ರೂಫ್‌, 12.8 ಇಂಚು ಅಡಾಪ್ಟಿವ್‌ ರೊಟೇಟಿಂಗ್‌ ಸ್ಕ್ರೀನ್‌, ಎನ್‌ಎಫ್‌ಸಿ ಕಾರ್ಡ್‌ ಕೀ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೊದಲ ಹಂತದಲ್ಲಿ ವಾಹನಗಳ ವಿತರಣೆಯು 2023ರ ಜನವರಿಯಿಂದ ಆರಂಭ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ 21 ನಗರಗಳಲ್ಲಿ ಒಟ್ಟು 24 ಷೋರೂಂಗಳನ್ನು ತೆರೆಯಲು ಕಂಪನಿ ಯೋಜನೆ ರೂಪಿಸಿದೆ. 2023ರ ಅಂತ್ಯದ ವೇಳೆಗೆ ಕನಿಷ್ಠ 53 ಷೋರೂಂಗಳನ್ನು ಹೊಂದುವ ಗುರಿ ಇರುವುದಾಗಿ ಬಿವೈಡಿ ಇಂಡಿಯಾದ ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನ ವಿಭಾಗದ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.