ಸೋಮವಾರ, ಸೆಪ್ಟೆಂಬರ್ 23, 2019
26 °C

ಇನ್ನು ಮನೆ ಬಾಗಿಲಿಗೆ ಬರಲಿದೆ ಹೀರೊ ಬೈಕ್‌! ಹೀರೊ ಮೋಟೊ ಕಾರ್ಪ್‌ನಿಂದ ಹೊಸ ಯೋಜನೆ

Published:
Updated:
Prajavani

ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೋಟೊ ಕಾರ್ಪ್‌ ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ಬೈಕ್‌ ಮತ್ತು ಸ್ಕೂಟರ್‌ಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಿದೆ. ಇದಕ್ಕಾಗಿ WWW.HGPMART.COM ಜಾಲತಾಣ ರೂಪಿಸಿದ್ದು, ಗ್ರಾಹಕರು ಇಲ್ಲಿ ಬುಕಿಂಗ್‌ ಮಾಡಬೇಕಾಗುತ್ತದೆ. ಈ ಸೇವೆಗೆ, ಗ್ರಾಹಕರು ಅತ್ಯಲ್ಪ ₹ 349 ಶುಲ್ಕ ಭರಿಸಬೇಕಾಗುತ್ತದೆ.

ಈಗಾಗಲೇ ಬೆಂಗಳೂರು, ಮುಂಬೈ ಮತ್ತು ನೋಯಿಡಾದಲ್ಲಿ ಈ ಸೇವೆ ಆರಂಭಿಸಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಹಂತ ಹಂತವಾಗಿ 25 ನಗರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದೆ.

‘ಗ್ರಾಹರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಹೊಸ ರೀತಿಯ ಚಿಂತನೆಗಳಿಗಾಗಿ ಹೂಡಿಕೆ ಮುಂದುವರಿಸಲಾಗುವುದು’ ಎಂದು ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಸಂಜಯ್‌ ಭಾನ್‌ ತಿಳಿಸಿದ್ದಾರೆ.

ಇಂದಿನ ಯುವ ಪೀಳಿಗೆ ತಮ್ಮ ಪ್ರತಿ ಖರೀದಿಯಲ್ಲಿಯೂ ಮೌಲ್ಯಾಧಾರಿತ ಸೇವೆಗಳನ್ನು ಈಡೇರಿಸುವುದರ ಕಡೆಗೆ ಗಮನ ನೀಡಿದರೆ ಮಾತ್ರವೇ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯ. 

‘ಕೇವಲ ಮನೆ ಬಾಗಿಲಿಗಷ್ಟೇ ಅಲ್ಲ, ಗ್ರಾಹಕರು ಬಯಸುವ ಯಾವುದೇ ವಿಳಾಸಕ್ಕೂ ಮೋಟರ್‌ಸೈಕಲ್ ಅಥವಾ ಸ್ಕೂಟರ್‌ ತಲುಪಿಸಲಾಗುವುದು’ ಎಂದು ಹೇಳಿದ್ದಾರೆ.

Post Comments (+)