ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ: ಮೊದಲ ಬಿಎಸ್–6 ಬೈಕ್ ಬಿಡುಗಡೆ; ಸ್ಪ್ಲೆಂಡರ್ ಐಸ್ಮಾರ್ಟ್ ಬೆಲೆ ₹64,900

Last Updated 7 ನವೆಂಬರ್ 2019, 11:19 IST
ಅಕ್ಷರ ಗಾತ್ರ

ನವದೆಹಲಿ: ವಾಯುಮಾಲಿನ್ಯದ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಸಮಯದಲ್ಲೇ ವಾಹನ ಉತ್ಪಾದನಾ ಸಂಸ್ಥೆಗಳು ಕಡಿಮೆ ಮಾಲಿನ್ಯಕಾರಕ ಬಿಎಸ್‌–6 ಎಂಜಿನ್‌ಗಳೊಂದಿಗೆ ವಾಹನಗಳನ್ನು ಮಾರುಕಟ್ಟೆಗೆ ತರುವತ್ತ ಕ್ರಮವಹಿಸಿವೆ. ಇದೀಗ ಹೀರೊ ಮೋಟಾರ್‌ ಕಾರ್ಪೊರೇಷನ್‌ ತನ್ನ ಮೊದಲ ಬಿಎಸ್–6 ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.

ಹೊಸ ಸ್ಪ್ಲೆಂಡರ್‌ ಐಸ್ಮಾರ್ಟ್‌ ಬೈಕ್‌ ಗುರುವಾರ ಬಿಡುಗಡೆಯಾಗಿದ್ದು, ಎಕ್ಸ್‌ ಷೋರೂಂ ಬೆಲೆ ₹64,900 ನಿಗದಿಯಾಗಿದೆ.

ಇಂಧನ ಕ್ಷಮತೆಯುಳ್ಳ 110 ಸಿಸಿ ಎಂಜಿನ್‌ ಹೊಂದಿರುವ ಸ್ಪ್ಲೆಂಡರ್‌ 9 ಬಿಎಚ್‌ಪಿ (7,500 ಆರ್‌ಪಿಎಂ) ಶಕ್ತಿಯನ್ನು ಹೊಮ್ಮಿಸುತ್ತದೆ. ಹಿಂದಿನ ಮಾದರಿಯ ಐಸ್ಮಾರ್ಟ್‌ ಬೈಕ್‌ಗಿಂತಲೂ ಹೆಚ್ಚು ಸಾಮರ್ಥ್ಯ ಮತ್ತು ಇಂಧನ ಕ್ಷಮತೆ ಹೊಂದಿರುವುದಾಗಿ ಹೀರೊ ಮೋಟೊಕಾರ್ಪ್ ಪ್ರಕಟಣೆಯಲ್ಲಿ ತಿಳಿಸಿದೆ.

'ಜೈಪುರದ ತಂತ್ರಜ್ಞಾನ ಮತ್ತು ಹೊಸಶೋಧ ಕಾರ್ಯ ನಡೆಸುವ ಕೇಂದ್ರದಲ್ಲಿ ಈ ದ್ವಿಚಕ್ರ ವಾಹನದ ಸಂಪೂರ್ಣ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಲಾಗಿದೆ. ಹೊಸ ಚಾಸಿಸ್‌ ಮತ್ತು ನೂತನ ಶ್ರೇಣಿಯ ಎಂಜಿನ್‌ ಹೊಂದಿದ್ದು, ಮಾರುಕಟ್ಟೆ ಪ್ರವೇಶಕ್ಕೆ ದೇಶದಲ್ಲಿ ಅನುಮೋದನೆ ಪಡೆದಿರುವ ಮೊದಲ ಬಿಎಸ್‌–6 ದ್ವಿಚಕ್ರ ವಾಹನ ಇದಾಗಿದೆ' ಎಂದು ಕಂಪನಿಯ ಗ್ಲೋಬಲ್‌ ಪ್ರಾಡಕ್ಟ್‌ ಪ್ಲಾನಿಂಗ್‌ ಮುಖ್ಯಸ್ಥ ಮಾಲೊ ಲೇ ಮ್ಯಾಸನ್‌ ಹೇಳಿಕೊಂಡಿದ್ದಾರೆ.

ಮೊದಲಿಗೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಬೈಕ್‌ಗಳು ದೊರೆಯಲಿವೆ. ಮುಂದಿನ ಕೆಲ ವಾರಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೊಸ ಬೈಕ್‌ ಮಾರುಕಟ್ಟೆಯಲ್ಲಿ ಕಾಣಸಿಗಲಿದೆ.

ಬೈಕ್‌ನ ಮುಂದಿನ ಸಸ್ಪೆಂಷನ್‌ ಚಲನೆಯನ್ನು 15 ಮಿ.ಮೀ, ವೀಲ್‌ಬೇಸ್‌ 36 ಮಿ.ಮೀ.ನಷ್ಟು ಹೆಚ್ಚಿಸಲಾಗಿದೆ. ಹೊಸ ಸ್ಪ್ಲೆಂಡರ್‌ ಐಸ್ಮಾರ್ಟ್180 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್‌ ಹೊಂದಿದ್ದು, ಎಲ್ಲ ರೀತಿಯ ರಸ್ತೆಗಳಲ್ಲಿಯೂ ಚಾಲನೆಗೆ ಸಹಕಾರಿಯಾಗಲಿದೆ.

ಟೆಕ್ನೊ ಬ್ಲೂ, ಕಪ್ಪು, ಸ್ಪೋರ್ಟ್ಸ್‌ ರೆಡ್‌, ಹೆವಿ ಗ್ರೇ ಹಾಗೂ ಫೋರ್ಸ್‌ ಸಿಲ್ವರ್‌ ಬಣ್ಣಗಳಲ್ಲಿ ಹೊಸ ಬೈಕ್‌ ಉತ್ಪಾದನೆ ನಡೆಯಲಿದೆ. ಸೆಲ್ಫ್‌ ಡ್ರಮ್‌ ಮತ್ತು ಸೆಲ್ಫ್‌ ಡಿಸ್ಕ್‌ ಬ್ರೇಕ್‌ ಮಾದರಿಗಳಲ್ಲಿ ಬೈಕ್‌ ಲಭ್ಯವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT